Cricket News: ಮತ್ತದೇ ತಪ್ಪು ಮಾಡಲು ಆರಂಭಿಸಿದ ಬಿಸಿಸಿಐ: ಒಂದು ಕಣ್ಣಿಗೆ ಬೆಣ್ಣೆ ಬಳಿದು, ಮೂರು ಕಣ್ಣಿಗೆ ಸುಣ್ಣ ಬಳಿದದ್ದು ಹೇಗೆ ಗೊತ್ತೇ??

Cricket News: ಬಿಸಿಸಿಐ (BCCI) ನ್ಯೂಜಿಲೆಂಡ್ ಸರಣಿಗೆ (India vs New Zealand) ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಸಿಸಿಐ ಮಂಡಳಿಗೆ ಹೊಸ ಸದಸ್ಯರು ನೇಮಕವಾದ ನಂತರ ಈ ಹಿಂದೆ ಮಂಡಳಿ ಮಾಡುತ್ತಿದ್ದ ತಪ್ಪುಗಳು ಮರುಕಳಿಸುವುದಿಲ್ಲ ಎಂದೇ ನಂಬಲಾಗಿತ್ತು. ಇನ್ನು ಮುಂದೆಯಾದರೂ ಆಯ್ಕೆ ಸಮಿತಿ ಅತ್ಯುತ್ತಮ ಆಟಗಾರರಿಗೆ ಅವಕಾಶ ಕಲ್ಪಿಸಲಿದೆ, ಎಲ್ಲಾ ಆಟಗಾರರಿಗೂ ಸಮಾನ ಅವಕಾಶ, ಆದ್ಯತೆ ಸಿಗುತ್ತದೆ ಎಂದೆ ತಿಳಿಯಲಾಗಿತ್ತು. ಆದರೆ ಬಿಸಿಸಿಐ ಮತ್ತೆ ಅದೇ ಹಳೆಯ ಚಾಳಿ ಶುರು ಮಾಡಿಕೊಂಡಿದೆ. ಒಬ್ಬ ಆಟಗಾರನಿಗೆ ಸ್ಥಾನ ಕಲ್ಪಿಸಲು ಹೋಗಿ ಮೂವರು ಆಟಗಾರರಿಗೆ ಅನ್ಯಾಯ ಮಾಡಿದೆ. ಒಂದು ಕಣ್ಣಿಗೆ ಬೆಣ್ಣೆ, ಮೂವರ ಕಣ್ಣಿಗೆ ಸುಣ್ಣ ಎಂಬಂತೆ ಬಿಸಿಸಿಐ ನಡೆದುಕೊಂಡಿದೆ. ಇಷ್ಟಕ್ಕೂ ಯಾವ ಒಬ್ಬ ಆಟಗಾರನಿಗೆ ಸ್ಥಾನ ಕಲ್ಪಿಸಲು ಹೋಗಿ ಮೂರು ಆಟಗಾರರನ್ನು ಮಂಡಳಿ ಕಡೆಗಣಿಸಿದೆ ಎನ್ನುವುದನ್ನು ಇಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಪ್ರತಿ ಬಾರಿಯೂ ವೈಟ್ ಬಾಲ್ ಫಾರ್ಮೆಟ್ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗ ಈ ಪಟ್ಟಿಯಲ್ಲಿ ಯಾಕೆ ಪೃಥ್ವಿ ಶಾ (Prithvi Shaw) ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಲಾಗುತ್ತಿತ್ತು. ಪ್ರತಿ ಬಾರಿಯೂ ಅತ್ಯುತ್ತಮವಾಗಿ ಆಡುತ್ತಿದ್ದ ಪೃಥ್ವಿ ಶಾ ಅವರು ಅವಕಾಶ ವಂಚಿತರಾಗುತ್ತಿದ್ದರು. ಆದರೆ ಈ ಬಾರಿ ಎಚ್ಚೆತ್ತುಕೊಂಡಿರುವ ಆಯ್ಕೆ ಸಮಿತಿ ನ್ಯೂಜಿಲ್ಯಾಂಡ್ ಸರಣಿಗೆ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿದೆ. ಆದರೆ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎನ್ನುವುದು ಸ್ಪಷ್ಟವಿಲ್ಲ. ಇನ್ನು ಇದರ ಜೊತೆಗೆ ಆಯ್ಕೆ ಸಮಿತಿ ಈ ಬಾರಿ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಮೂವರು ಅತ್ಯುತ್ತಮ ಆಟಗಾರರಿಗೆ ಅನ್ಯಾಯ ಮಾಡಿದೆ ಎಂದು ಟೀಕಿಸಲಾಗುತ್ತಿದೆ. ಇದನ್ನು ಓದಿ..Cricket News: ಚೆನ್ನಾಗಿ ಆಡಿದರೂ ಕೂಡ ರಾಜಕೀಯದಿಂದ ತಂಡದಿಂದ ಹೊರಹೋದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ಶಿಖರ್ ಹೇಳಿದ್ದೇನು ಗೊತ್ತೇ??

cricket news squad for new Zealand series | Cricket News: ಮತ್ತದೇ ತಪ್ಪು ಮಾಡಲು ಆರಂಭಿಸಿದ ಬಿಸಿಸಿಐ: ಒಂದು ಕಣ್ಣಿಗೆ ಬೆಣ್ಣೆ ಬಳಿದು, ಮೂರು ಕಣ್ಣಿಗೆ ಸುಣ್ಣ ಬಳಿದದ್ದು ಹೇಗೆ ಗೊತ್ತೇ??
Cricket News: ಮತ್ತದೇ ತಪ್ಪು ಮಾಡಲು ಆರಂಭಿಸಿದ ಬಿಸಿಸಿಐ: ಒಂದು ಕಣ್ಣಿಗೆ ಬೆಣ್ಣೆ ಬಳಿದು, ಮೂರು ಕಣ್ಣಿಗೆ ಸುಣ್ಣ ಬಳಿದದ್ದು ಹೇಗೆ ಗೊತ್ತೇ?? 2

ಶಾರ್ದುಲ್ ಠಾಕೂರ್ (Shardul Thakur) ಒಬ್ಬ ಅತ್ಯುತ್ತಮ ಆಲ್-ರೌಂಡರ್ ಆಟಗಾರ ಆಗಿದ್ದು, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಅತ್ಯಂತ ಕಷ್ಟಕರ ಪಿಚ್ಗಳಲ್ಲಿಯೂ ಅವರು ಅತ್ಯುತ್ತಮವಾಗಿ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದಾರೆ. ಆದರೆ ಈ ಮುಂದಿನ ಸರಣಿಗಳಲ್ಲಿ ಶಾರ್ದುಲ್ ಅವರಿಗೆ ಆಯ್ಕೆ ಸಮಿತಿ ಅವಕಾಶವನ್ನೇ ನೀಡಿಲ್ಲ. ಇನ್ನು ಅಭಿಮನ್ಯು ಈಶ್ವರನ್ (Abhimanyu Iswaran) ಅವರ ಪರಿಸ್ಥಿತಿಯು ಅದೇ ರೀತಿ ಇದೆ. ಸಾಮಾನ್ಯವಾಗಿ ಟೀಮ್ ಇಂಡಿಯಾ (Team India) ಟೆಸ್ಟ್ ಸರಣಿಗಳಲ್ಲಿ ಅವರು ಕಾಯಂ ಸ್ಥಾನ ಪಡೆಯುತ್ತಿದ್ದರು. ಪ್ಲೇಯಿಂಗ್ ಇಲೆವೆನ್ ನಲ್ಲಿ ಇರುತ್ತಾರೋ ಇಲ್ಲವೋ ಆದರೆ ತಂಡದಲ್ಲಂತೂ ಅವರು ಇದ್ದೇ ಇರುತ್ತಿದ್ದರು. ಕನಿಷ್ಠ ಇಷ್ಟು ದಿನ ಬೆಂಚ್ಗೆ ಸೀಮಿತವಾಗಿದ್ದ ಅವರು ಇದೀಗ ತಂಡದಿಂದಲೇ ಹೊರಹಾಕಲಾಗಿದೆ. ಪ್ರಿಯಾಂಕ್ ಪಾಂಚಾಲ್ (Priyank Panchal) ಅವರಿಗೂ ಕೂಡ ಮುಂದಿನ ಸರಣಿಗಳಲ್ಲಿ ಆಡುವ ಅವಕಾಶ ದೊರೆತಿಲ್ಲ. ಈ ರೀತಿಯಾಗಿ ಯುವ ಆಟಗಾರರಿಗೆ ತಂಡದಲ್ಲಿ ಮನ್ನಣೆ ಸಿಗದೇ ಇರುವುದರಿಂದಾಗಿ ಅವರ ಭವಿಷ್ಯದ ಬಗ್ಗೆ ಆತಂಕ ಮೂಡಿದೆ. ಇದನ್ನು ಓದಿ.. Cricket News: ಇದಪ್ಪ ಆಯ್ಕೆ ಅಂದ್ರೆ, ದ್ವಿಶತಕ ಗಳಿಸಿದ ಇಶಾನ್ ಕಿಶನ್ ಗೆ ಶಾಕ್ ಕೊಟ್ಟು, ತಂಡದಲ್ಲಿ ಅವಕಾಶ ಕೊಟ್ಟಿದ್ದು ಯಾರಿಗೆ ಗೊತ್ತೇ?? ರೋಹಿತ್ ಮಹಾ ಎಡವಟ್ಟು.

Comments are closed.