Kannada News: ಬೈಕ್ ಶೋ ರೂಮ್ ಗೆ ಹೋದ ರೈತನ ಅವಮಾನಿಸಿದ ಸಿಬ್ಬಂದಿ ಆಮೇಲೆ ರೈತ ಮಾಡಿದ ಕೆಲಸ ನೋಡಿ ಬೆಚ್ಚಿ ಬಿದ್ದರು. ಏನು ಮಾಡಿದ ಗೊತ್ತೇ??
Kannada News: ರೈತ ದೇಶದ ಬೆನ್ನೆಲುಬು, ರೈತ ಬೆಳೆ ಬೆಳೆಯದಿದ್ದರೆ ನಾವೆಲ್ಲ ಉಪವಾಸ ಸಾಯಬೇಕಾಗುತ್ತದೆ ಎಂಬೆಲ್ಲ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ದೇಶದ ರಕ್ಷಣೆ ಮಾಡುವ ಸೈನಿಕನ ಹಾಗೆ ನಮಗೆ ಅನ್ನ ನೀಡುವ ರೈತನನ್ನು ಅತ್ಯಂತ ಗೌರವದಿಂದ ನೋಡಬೇಕು ಎಂದು ಹೇಳಲಾಗುತ್ತದೆ. ಆದರೆ ವಾಸ್ತವಕ್ಕೆ ಬರುವುದಾದರೆ ರೈತರಿಗೆ ಎಷ್ಟೋ ಜನ ಮರ್ಯಾದೆ ನೀಡುವುದಿಲ್ಲ, ಅವರನ್ನು ಕೇವಲವಾಗಿ ನೋಡಲಾಗುತ್ತದೆ. ಅಲ್ಲದೆ ರೈತರೆಂದರೆ ಕಡು ಬಡವರು ಎಂಬಂತೆ ಭಾವಿಸಲಾಗುತ್ತದೆ. ಇನ್ನು ಬೃಹತ್ ನಗರದ ಬೈಕ್ ಶೋರೂಮ್ ಗೆ ಭೇಟಿ ನೀಡಿದ ರೈತರೊಬ್ಬರನ್ನು ಅಲ್ಲಿನ ಸಿಬ್ಬಂದಿ ಅಪಮಾನ ಮಾಡಿದ, ಆನಂತರ ಆ ರೈತ ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಕ್ಕ ಪಾಠ ಕಲಿಸಿದ ಘಟನೆ ಇತ್ತೀಚಿಗೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ ನಲ್ಲಿ ಚಂದು ಸಿಂಗ್ ಎನ್ನುವ ರೈತರೊಬ್ಬರು ಸುಮಾರು ಎಕರೆ ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯುತ್ತಿದ್ದರು. ಕೃಷಿಯಲ್ಲಿ ಯಶಸ್ಸು ಕಂಡಿದ್ದ ಚಂದು ಸಿಂಗ್ ತಮ್ಮ ಅಪಾರ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ತೆಗೆಯುತ್ತಿದ್ದರು. ಅಲ್ಲದೆ ಅವರ ಜಮೀನಿನಲ್ಲಿ ಕೆಲಸ ಮಾಡಲು ಅವರು ಸಾಕಷ್ಟು ಜನ ಕೆಲಸಗಾರರನ್ನು ನೇಮಿಸಿಕೊಂಡಿದ್ದರು. ಆ ಊರಿನಲ್ಲಿ ಯಾರಿಗೆ ಏನೇ ಹಣಕಾಸಿನ ತೊಂದರೆ ಆದರೂ ಸಹ ಅವರು ಬಡವರಿರಲಿ, ಶ್ರೀಮಂತರೇ ಇರಲಿ ಚಂದು ಸಿಂಗ್ ಮನೆಯ ಬಳಿಗೆ ಬರುತ್ತಿದ್ದರು. ಅಷ್ಟರಮಟ್ಟಿಗೆ ಅವರು ಶ್ರೀಮಂತರು ಹಾಗೂ ಪರೋಪಕಾರಿಯು ಆಗಿದ್ದರು. ಇನ್ನು ಚಂದು ಸಿಂಗ್ ಅವರ ಮಗ ಕೆಲವು ದಿನಗಳಿಂದ ತನಗೆ ಒಂದು ಒಳ್ಳೆಯ ದುಬಾರಿ ಬೈಕ್ ಕೊಡಿಸಬೇಕಾಗಿ ಕೇಳಿಕೊಳ್ಳುತ್ತಿದ್ದ. ಆದರೆ ಈಗ ಇರುವ ಬೈಕ್ ಅನ್ನು ಓಡಿಸು, ಸದ್ಯಕ್ಕೆ ಹೊಸ ಬೈಕ್ ಬೇಡ ಎಂದು ಚಂದು ಸಿಂಗ್ ಮುಂದೂಡುತ್ತಿದ್ದರು. ಇದನ್ನು ಓದಿ..Kannada News: ದೇಶವನ್ನೇ ನಡುಗಿಸಿದ ನಿರ್ದೇಶಕನ ಚಿತ್ರದಲ್ಲಿ ಅವಕಾಶ ಪಡೆದ ಸಪ್ತಮಿ ಗೌಡ: ಪಾನ್ ಇಂಡಿಯಾ ಸಿನೆಮಾಗೆ ಆಯ್ಕೆ. ಯಾವ ಸಿನಿಮಾ ಗೊತ್ತೇ? ಕೇಳಿದರೆ ಕೈ ಮುಗಿತಿರ.
ಒಂದು ದಿನ ಕೃಷಿಗೆ ಸಂಬಂಧಿಸಿದ ರಾಸಾಯನಿಕಗಳು, ಔಷಧಿಯನ್ನು ತರಲೆಂದು ಚೆಂದು ಸಿಂಗ್ ಪಟ್ಟಣಕ್ಕೆ ಹೋಗಿದ್ದರು. ಈ ವೇಳೆ ವಾಪಸ್ ಬರುವಾಗ ಅವರಿಗೆ ಬೈಕ್ ಶೋರೂಮ್ ಒಂದು ಕಂಡು ಬಂದಿದೆ. ಸಾಕಷ್ಟು ಬಿಸಿಲಿಗೆ ಬೆವತ್ತಿದ್ದ ಅವರು ಮತ್ತು ಅವರ ಬಟ್ಟೆ ಒದ್ದೆಯಾಗಿ ಸುಕ್ಕುಗಟ್ಟಿತ್ತು. ಚಂದು ಸಿಂಗ್ ಶೋರೂಮ್ ಒಳಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ನೀವು ಹಾಗೆಲ್ಲ ಒಳಗೆ ಬರುವಂತಿಲ್ಲ, ಹೊರಗೆ ಹೋಗಿ ಎಂದು ಹೇಳುತ್ತಾನೆ. ಅಲ್ಲದೆ ಆತ ಯಾರೋ ಭಿಕ್ಷುಕನಿರಬೇಕೆಂದು ಅಲ್ಲಿನ ಶೋರೂಮ್ ಮಾಲೀಕ ಅವರಿಗೆ ಭಿಕ್ಷೆ ನೀಡಲು ಬರುತ್ತಾನೆ. ಆದರೆ ನಾನು ಭಿಕ್ಷುಕನಲ್ಲ, ನಾನು ಬೈಕೊಳ್ಳಲು ಬಂದಿದ್ದೇನೆ ಎಂದು ಚಂದು ಸಿಂಗ್ ಹೇಳಿದಾಗ ಅಲ್ಲಿನ ಎಲ್ಲರೂ ನಗುತ್ತಾರೆ. ಆಮೇಲೆ ನಾನು ನಿಜವಾಗಿಯೂ ಬೈಕ್ ಕೊಳ್ಳಲು ಬಂದಿದ್ದೇನೆ ಎಂದಾಗ ಅಲ್ಲಿನ ಸಿಬ್ಬಂದಿಗಳು ನಿಮ್ಮ ಕೈಯಲ್ಲಿ ಈ ಟಿವಿಎಸ್ ಕೊಳ್ಳಲು ಸಾಧ್ಯವಿದೆಯೇ ಎಂದು ಕೇಳುತ್ತಾರೆ.
ಆಗ ಚಂದು ಸಿಂಗ್ ದುಬಾರಿ ಬೈಕೊಂದನ್ನು ತೋರಿಸಿ ನಾನು ಅದನ್ನು ಕೊಳ್ಳಬೇಕೆಂದುಕೊಂಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಅಲ್ಲಿನ ಯಾರಿಗೂ ಇವರ ಮೇಲೆ ನಂಬಿಕೆ ಬರುವುದಿಲ್ಲ. ಅನಂತರ ಅವರು ತಮ್ಮ ಬಳಿ ಇದ್ದ ಏಳು ಲಕ್ಷ ರೂಪಾಯಿಯನ್ನು ಆ ಬೈಕ್ ಗೆ ಕೊಟ್ಟು ಬೈಕ್ ಕೊಂಡುಕೊಳ್ಳುತ್ತಾರೆ. ಅಲ್ಲದೆ ಅಲ್ಲಿ ಅವರಿಗೆ ಅಪಮಾನ ಮಾಡಿದ ಸಿಬ್ಬಂದಿಗಳಿಗೆ ತಲಾ 2,000 ರೂಪಾಯಿ ಕೊಟ್ಟು ಇನ್ನು ಮುಂದೆ ಯಾರಿಗೂ ಈ ರೀತಿ ನಡೆದುಕೊಳ್ಳಬೇಡಿ ಎಂದು ಹೇಳಿ ಹೊರಡುತ್ತಾರೆ. ಈ ರೀತಿಯಾಗಿ ತಮಗೆ ಅಪಮಾನ ಮಾಡಲು ಬಂದ ಸಿಬ್ಬಂದಿಗಳಿಗೆ ರೈತರೊಬ್ಬರು ತಕ್ಕ ಪಾಠ ಕಲಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇದನ್ನು ಓದಿ.. Kannada News: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಿಜಕ್ಕೂ ಕೀರ್ತಿ ನೇರವಾಗಿ ವೈಷ್ಣವ್ ಬೇಡ ಎನ್ನಲು ಕಾರಣವೇನು ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.
Comments are closed.