Cricket News: ಅಬ್ಬಾ ಟೀಮ್ ಇಂಡಿಯಾ ಕಷ್ಟ ಕೊನೆಗೂ ಮುಗಿಯಿತು: ಖಡಕ್ ಆಟಗಾರ ತಂಡಕ್ಕೆ ಎಂಟ್ರಿ. ಇನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೆ?

Cricket News: ಟೀಮ್ ಇಂಡಿಯಾ (Team India) ತಂಡವು ನಿರಂತರವಾಗಿ ಒಂದರ ಮೇಲೊಂದರಂತೆ ಸೋಲನ್ನು ಅನುಭವಿಸುತ್ತಿದೆ. ಕಳೆದ ಏಷ್ಯಾಕಪ್ (Asiacup) ನಿಂದಲೂ ತಂಡವು ಹೊಡೆತವನ್ನು ಎದುರಿಸುತ್ತಿದೆ ಎಂದೇ ಹೇಳಬಹುದು. ಸೆಮಿ ಫೈನಲ್ ನಲ್ಲಿ ತಂಡವು ಮುಗ್ಗರಿಸಿತ್ತು, ಹೀನಾಯವಾಗಿ ಸೆಮಿ ಫೈನಲ್ ಪಂದ್ಯವನ್ನು ಕೈಚಳ್ಳಿತ್ತು. ಅದಾದ ಮೇಲೆ ನ್ಯೂಜಿಲೆಂಡ್ (India vs New Zealand) ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಲ್ಲೂ ಕೂಡ ಭಾರತ ನೀರಸ ಪ್ರದರ್ಶನ ತೋರಿತ್ತು. ಇದೀಗ ಬಾಂಗ್ಲಾದೇಶದ ವಿರುದ್ಧದ (India vs Bangladesh) ಪ್ರವಾಸದಲ್ಲಿರುವ ಭಾರತ ಅಲ್ಲು ಮುಖಭಂಗ ಮಾಡಿಕೊಂಡಿದೆ. ಇದೀಗ ಹೀಗೆ ನಿರಂತರವಾಗಿ ಟೀಮ್ ಇಂಡಿಯಾ ಸೋಲನ್ನು ಕಾಣುತ್ತಿರುವುದರಿಂದ ಆ ಒಬ್ಬ ಆಟಗಾರನ ಕೊರತೆ ಎದ್ದು ಕಾಣುತ್ತಿದೆ. ಟೀಮ್ ಟೀಮ್ ಇಂಡಿಯಾ ಕೂಡ ಆ ಒಬ್ಬ ಆಟಗಾರ ನಮ್ಮ ಜೊತೆಗಿದ್ದರೆ ಹೀಗೆ ಸೋಲನ್ನು ಕಾಣುತ್ತಿರಲಿಲ್ಲ ಎಂದೇ ಭಾವಿಸುತ್ತಿದೆ. ಆ ಸ್ಟಾರ್ ಆಟಗಾರ ಮತ್ತೇ ತಂಡಕ್ಕೆ ಮರಳುವುದನ್ನು ಕಾಯುತ್ತಿದ್ದಾರೆ. ಇದೀಗ ಆ ಆಟಗಾರ ಮರಳುತ್ತಿದ್ದು ಇನ್ನು ಸೋಲುವ ಮಾತೇ ಇಲ್ಲ ಎಂದೇ ಹೇಳಲಾಗುತ್ತಿದೆ.

ಈಗಾಗಲೇ ನಿರಂತರವಾಗಿ ಟೀಮ್ ಇಂಡಿಯಾ ಸೋಲಿನ ರುಚಿ ಕಾಣಬೇಕಾದ ಪರಿಸ್ಥಿತಿ ಉಂಟಾಗಿದೆ. ಹಿಂದಿನ ಹಲವಾರು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿರುವ ಭಾರತ ಇದೀಗ ಬಾಂಗ್ಲಾದೇಶದ ಪ್ರವಾಸದಲ್ಲಿದ್ದು ಅಲ್ಲಿ ಮೂರು ಸರಣಿಯ ಏಕದಿನ ಪಂದ್ಯದಲ್ಲಿ ಆಡುತ್ತಿರುವ ಭಾರತ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಸೋತು ಎರಡು ಸೊನ್ನೆ ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿದೆ. ಇದೀಗ ಮೂರನೇ ಪಂದ್ಯದಲ್ಲಾದರೂ ಗೆದ್ದು ಮುಜುಗರವನ್ನು ತಪ್ಪಿಸಿಕೊಳ್ಳುವ ಯೋಚನೆಯಲ್ಲಿದೆ. ತಂಡದ ಸ್ಟಾರ್ ವೇಗದ ಬೌಲರಾದ ಜಸ್ಪ್ರೀತ್ ಬೂಮ್ರ (Jasprit Bumrah) ರವರು ಇದೀಗ ಮತ್ತೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಆಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂಜುರಿಯ ಕಾರಣದಿಂದಾಗಿ ಬೂಮ್ರ ಪಂದ್ಯದಿಂದ ಹೊರ ನಡೆದು ತಿಂಗಳುಗಳೆ ಕಳಿದಿವೆ. ಕಳೆದ ಏಷ್ಯಾ ಕಪ್ ನಿಂದಲೂ ಅವರು ತಂಡದಿಂದ ಹೊರಗಿದ್ದಾರೆ. ಏಷ್ಯಾ ಕಪ್ ನಿಂದ ಹಿಡಿದು ಇಲ್ಲಿಯವರೆಗಿನ ಯಾವ ಪಂದ್ಯಗಳಲ್ಲಿಯೂ ಅವರು ಆಡಿಲ್ಲ. ಇದನ್ನು ಓದಿ..Cricket News: ಆಯ್ಕೆಯಾದರು ತಂಡದಲ್ಲಿ ಸಿಗುತ್ತಿಲ್ಲ ಚಾನ್ಸ್, ಮತ್ತೇನು ಮಾಡಬೇಕು ಎಂದು ತಿಳಿಯದೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಂಜು, ಏನು ಗೊತ್ತೇ?

cricket news team india | Cricket News: ಅಬ್ಬಾ ಟೀಮ್ ಇಂಡಿಯಾ ಕಷ್ಟ ಕೊನೆಗೂ ಮುಗಿಯಿತು: ಖಡಕ್ ಆಟಗಾರ ತಂಡಕ್ಕೆ ಎಂಟ್ರಿ. ಇನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೆ?
Cricket News: ಅಬ್ಬಾ ಟೀಮ್ ಇಂಡಿಯಾ ಕಷ್ಟ ಕೊನೆಗೂ ಮುಗಿಯಿತು: ಖಡಕ್ ಆಟಗಾರ ತಂಡಕ್ಕೆ ಎಂಟ್ರಿ. ಇನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾರು ಗೊತ್ತೆ? 2

ಬಾಂಗ್ಲಾದೇಶದ ಸರಣಿ ಪಂದ್ಯಗಳಲ್ಲಿಯೂ ಅವರು ಆಡುವ ಅವಕಾಶ ಪಡೆಯಲಾಗಲಿಲ್ಲ. ಇದೀಗ ತಂಡಕ್ಕೆ ಸ್ಟಾರ್ ಬೌಲರ್ ಬೂಮ್ರ ಕೊರತೆ ಎದ್ದು ಕಾಣುತ್ತಿದೆ. ಅವರು ಇದ್ದಿದ್ದರೆ ಇಷ್ಟು ಸೋಲನ್ನು ಕಾಣಬೇಕಾಗಿರಲಿಲ್ಲ ಎಂದು ತಂಡಕ್ಕೆ ಅನಿಸಿದಂತಿದೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಬೂಮ್ರ ಅವರು ಇಲ್ಲಿಯವರೆಗೂ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ತಿಂಗಳುಗಳಿಂದ ಅವರು ಯಾವ ಪಂದ್ಯದಲ್ಲಿಯೂ ಆಡಲಾಗಿಲ್ಲ. ಇದೀಗ ಅವರು ಆರೋಗ್ಯವಂತರಾಗಿ ಮತ್ತೆ ತಂಡಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಆಸ್ಟ್ರೇಲಿಯಾದ ವಿರುದ್ಧ ನಡೆಯಲಿರುವ ತವರು ಪಂದ್ಯದಲ್ಲಿ ಅವರು ಮತ್ತೆ ತಂಡಕ್ಕೆ ಮರಳಲ್ಲಿದ್ದು ತಮ್ಮ ಎಂದಿನ ಬೌಲಿಂಗ್ ಪ್ರದರ್ಶನವನ್ನು ತೋರಲಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವರ್ಷ ಜನವರಿಯಲ್ಲಿ ಭಾರತ ತವರಿನಲ್ಲೇ ನಡೆಯಲಿರುವ ಏಕದಿನ ಸರಣಿಯಲ್ಲಿ ಅವರು ಮತ್ತೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಟೀಮ್ ಇಂಡಿಯಾ ತಂಡಕ್ಕೆ ಖುಷಿಯ ವಿಷಯವೊಂದು ಸಿಕ್ಕಿದೆ. ಇದನ್ನು ಓದಿ.. IPL 2023: ಬಿಗ್ ಬ್ರೇಕಿಂಗ್, ಐಪಿಎಲ್ ಹರಾಜಿಗೂ ಮುನ್ನವೇ ಐಪಿಎಲ್ ನಿಂದ ಹೊರನಡೆದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್. ಯಾರ್ಯಾರು ಗೊತ್ತೇ??

Comments are closed.