ದರ್ಶನ್ ರವರ ಪಂಚ ಭಾಷೆಯ 56 ನೇ ಚಿತ್ರಕ್ಕೆ ನಾಯಕಿ ಯಾರಾಗಬಹುದು?? ಇಬ್ಬರ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತೆ. ಅವರಿಬ್ಬರೂ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸಿನಿಮಾಗಳು ಬಂತೆಂದರೆ ಸಾಕು ಅಭಿಮಾನಿಗಳಲ್ಲಿ ವಿಶೇಷವಾದಂತಹ ಕ್ರೇಜ್ ಪ್ರಾರಂಭವಾಗುತ್ತದೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗಾಗಲೇ ವಿ ಹರಿಕೃಷ್ಣ ನಿರ್ದೇಶನದಲ್ಲಿ ಹಾಗೂ ಬಿ ಸುರೇಶ್ ಮತ್ತು ಶೈಲಜಾ ನಾಗ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ.

ಇದು ಪಂಚ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರವಾಗಿದ್ದು ಚಿತ್ರ ಶಿಕ್ಷಣದ ಕುರಿತಂತೆ ಅರಿವು ಮೂಡಿಸುವಂತದ್ದಾಗಿದೆ ಎಂಬುದಾಗಿ ಕೇಳಿಬಂದಿದೆ. ಇನ್ನು ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಎಂಟು ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕೂಡ ಕುರುಕ್ಷೇತ್ರ ಚಿತ್ರದ ನಂತರ ದರ್ಶನ್ ರವರೊಂದಿಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 55ನೇ ಸಿನಿಮಾ ವಾಗಿದ್ದು ಅಭಿಮಾನಿಗಳು 56ನೇ ಸಿನಿಮಾದ ಕುರಿತಂತೆ ಕಾತರರಾಗಿದ್ದಾರೆ. ಬಂದಿರುವ ಸುದ್ದಿಯ ಪ್ರಕಾರ 55ನೇ ಸಿನಿಮಾ ಮುಗಿಯುತ್ತಿದ್ದ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಸಿನಿಮಾಕ್ಕೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಅಭಿಮಾನಿಗಳಲ್ಲಿ ಈಗ ಚರ್ಚೆಯಾಗುತ್ತಿರುವ ಸುದ್ದಿ ಏನೆಂದರೆ 56ನೇ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವುದಾಗಿ.

ashika rachitha | ದರ್ಶನ್ ರವರ ಪಂಚ ಭಾಷೆಯ 56 ನೇ ಚಿತ್ರಕ್ಕೆ ನಾಯಕಿ ಯಾರಾಗಬಹುದು?? ಇಬ್ಬರ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತೆ. ಅವರಿಬ್ಬರೂ ಯಾರು ಗೊತ್ತೇ??
ದರ್ಶನ್ ರವರ ಪಂಚ ಭಾಷೆಯ 56 ನೇ ಚಿತ್ರಕ್ಕೆ ನಾಯಕಿ ಯಾರಾಗಬಹುದು?? ಇಬ್ಬರ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತೆ. ಅವರಿಬ್ಬರೂ ಯಾರು ಗೊತ್ತೇ?? 2

ಹೌದು ಬಾಕ್ಸಾಫೀಸ್ ಸುಲ್ತಾನ್ ರವರ 56ನೇ ಸಿನಿಮಾ ಯಾವುದು ಎನ್ನುವ ಚರ್ಚೆ ಕೂಡ ಆರಂಭವಾಗಿದ್ದು, ಇದರಲ್ಲಿ ಗೋಲ್ಡ್ ರಿಂಗ್ ಹಾಗೂ ರಾಜವೀರ ಮದಕರಿನಾಯಕ ಸಿನಿಮಾಗಳು ಎನ್ನುವ ಗೊಂದಲಗಳು ಆರಂಭವಾಗಿವೆ. ಇನ್ನು ದರ್ಶನ್ ರವರ 56ನೇ ಸಿನಿಮಾಗೆ ನಾಯಕಿಯಾಗಿ ಒಂದೋ ಡಿಂಪಲ್ ಕ್ವೀನ್ ರಚಿತಾ ರಾಮ್ ಅಥವಾ ಚಂದುಳ್ಳಿ ಚೆಲುವೆ ಆಶಿಕಾ ರಂಗನಾಥ್ ಅವರನ್ನು ಆಯ್ಕೆ ಮಾಡಿ ಎಂಬುದಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ನಿಮ್ಮ ಪ್ರಕಾರ ದರ್ಶನ್ ರವರ 56ನೇ ಸಿನಿಮಾದಲ್ಲಿ ನಾಯಕಿಯಾಗಿ ಯಾರು ನಟಿಸಬೇಕು ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

Comments are closed.