ಹಲವಾರು ದಿನಗಳ ಬಳಿಕ ಕಾಣಿಸಿಕೊಂಡ ಜಿಂಕೆ ಮರಿ ಖ್ಯಾತಿಯ ನಂದಿತಾ. ಹೊಸ ಮನಮೋಹಕ ಫೋಟೋಶೂಟ್ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಂದಿತಾ ಶ್ವೇತಾ ಸೌತ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಪ್ರತಿಭಾವಂತ ನಟಿ. 2006 ರಲ್ಲಿ ಪದವಿ ಪಡೆದ ನಂತರ, ಅವರು ಉದಯ ಮ್ಯೂಸಿಕ್ ಚಾನೆಲ್‌ನಲ್ಲಿ ನಿರೂಪಕಿ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2008 ರಲ್ಲಿ ‘ನಂದಾ ಲವ್ಸ್ ನಂದಿತಾ’ ಎಂಬ ಕನ್ನಡ ಚಲನಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

2012 ರಲ್ಲಿ, ಅವರು ಪಾ ರಂಜಿತ್ ನಿರ್ದೇಶನದ ‘ಅಟ್ಟಕತಿ’ ತಮಿಳು ಚಿತ್ರದಲ್ಲಿ ನಟಿಸಿದರು. ಚಿತ್ರದಲ್ಲಿ ಆಕೆಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ನಿಖಿಲ್ ಅಭಿನಯದ ‘ಎಕ್ಡಿಕಿಪೋತಾವು ಚಿನ್ನವಾದ’ ಚಿತ್ರದ ಮೂಲಕ ಈ ಸುಂದರಿ ಟಾಲಿವುಡ್‌ಗೆ ಪರಿಚಯವಾಗಿದ್ದರು. ಆದರೆ ಆ ನಂತರ ನಂದಿತಾಗೆ ತೆಲುಗಿನಲ್ಲಿ ಸರಿಯಾದ ಅವಕಾಶಗಳು ಸಿಗಲಿಲ್ಲ. ಸೌಂದರ್ಯ, ಅಭಿನಯ ಇದ್ದರೂ ಅದೃಷ್ಟ ಕೈ ಹಿಡಿಯಲಿಲ್ಲ. ಹೆಚ್ಚಾಗಿ ಎರಡನೇ ನಾಯಕಿ ಪಾತ್ರಗಳನ್ನು ಮಾಡುತ್ತಿದ್ದರು.

nanditha shwetha 1 | ಹಲವಾರು ದಿನಗಳ ಬಳಿಕ ಕಾಣಿಸಿಕೊಂಡ ಜಿಂಕೆ ಮರಿ ಖ್ಯಾತಿಯ ನಂದಿತಾ. ಹೊಸ ಮನಮೋಹಕ ಫೋಟೋಶೂಟ್ ಹೇಗಿದೆ ಗೊತ್ತೇ??
ಹಲವಾರು ದಿನಗಳ ಬಳಿಕ ಕಾಣಿಸಿಕೊಂಡ ಜಿಂಕೆ ಮರಿ ಖ್ಯಾತಿಯ ನಂದಿತಾ. ಹೊಸ ಮನಮೋಹಕ ಫೋಟೋಶೂಟ್ ಹೇಗಿದೆ ಗೊತ್ತೇ?? 2

ಅವರು ‘ಶ್ರೀನಿವಾಸ ಕಲ್ಯಾಣಂ’, ‘ಬ್ಲಫ್ ಮಾಸ್ಟರ್’, ‘ಪ್ರೇಮಕಥಾ ಚಿತ್ರಂ 2’, ‘ಕಲ್ಕಿ’ ಮತ್ತು ‘ಅಕ್ಷರ’ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂತಿಮವಾಗಿ ಸುಮಂತಾ ಎದುರು ‘ಕಪಟ’ ಚಿತ್ರದಲ್ಲಿ ಮಿಂಚಿದ್ದಾರೆ. ಪ್ರೆಸೆಂಟ್ ತೆಲುಗಿನ ಸೂಪರ್ ಹಿಟ್ ಡ್ಯಾನ್ಸ್ ಶೋ ‘ಧೀ’ ನಲ್ಲಿ ತೀರ್ಪುಗಾರರಾಗಿ ನಟಿಸುತ್ತಿದ್ದಾರೆ. ಈ ಡ್ಯಾನ್ಸ್ ಶೋಗಾಗಿ ನಂದಿತಾ ಇದೀಗ ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಹೌದು ಅಭಿಮಾನಿಗಳು ಈ ಕೆಂಪು ಸೀರೆಯ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ಈ ಮೋಡಿಮಾಡುವ ನೋಟವು ಮನಮೋಹಕವಾಗಿ ಮೂಡಿ ಬಂದಿದೆ. ನಂದಿತಾ ರವರು ಹಂಚಿಕೊಂಡ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನಂದಿತಾ ಅವರ ಸೋಷಿಯಲ್ ಮೀಡಿಯಾ ಫಾಲೋಯಿಂಗ್ ಕೂಡ ಹೆಚ್ಚುತ್ತಿದ. ಸದ್ಯ, ನಂದಿತಾ ಶೇರ್ ಮಾಡಿರುವ ಈ ಚಿತ್ರಗಳನ್ನೂ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

Comments are closed.