ಅಂದು ಧನುಶ್ರೀ ಇಂದು ಯಾರು?? ಇನ್ನೇನು ಆರಂಭವಾಗುವ ಬಿಗ್ ಬಾಸ್ ಗೆ ಟಿಕ್ ಟಾಕ್ ಕೋಟಾ ದಲ್ಲಿ ಹೋಗೋದು ಇವರೇನಾ?? ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಫುಲ್ ಸದ್ದು

ನಮಸ್ಕಾರ ಸ್ನೇಹಿತರೇ ಪ್ರತಿವರ್ಷ ಕಿರುತೆರೆಯ ವಾಹಿನಿಗಳಲ್ಲಿ ಯಾವ ಕಾರ್ಯಕ್ರಮ ಸುದ್ದಿ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಮಾತ್ರ ಖಂಡಿತವಾಗಿ ಸುದ್ದಿ ಮಾಡಿಯೇ ಮಾಡುತ್ತದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮೊದಲ ಸೀಸನ್ ನಿಂದ ಹಿಡಿದು ಇತ್ತೀಚಿಗಷ್ಟೇ ಮುಗಿದಿರುವ ಸೀಸನ್ ಎಂಟರವರೆಗೂ ಕೂಡ ಅವರೇ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಸ್ಟಾರ್ ನಿರೂಪಕ ಎನ್ನುವ ಖ್ಯಾತಿಗೆ ಕೂಡ ಒಳಗಾಗಿದ್ದಾರೆ. ಕೆಲವರು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡಲು ಬಿಗ್ ಬಾಸ್ ಅನ್ನು ನೋಡಿದರೆ.

ಇನ್ನೂ ಹಲವಾರು ಜನರು ವಾರವಿಡೀ ಬಿಗ್ ಬಾಸ್ ಸ್ಪರ್ಧಿಗಳ ಚೇಷ್ಟೆಗಳನ್ನು ನೋಡಲು ಮನೋರಂಜನೆಗಾಗಿ ಬಿಗ್ ಬಾಸ್ ಅನ್ನು ನೋಡುವವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರತಿಯೊಂದು ಸೀಸನ್ನಲ್ಲಿ ಕೂಡ ವಿಭಿನ್ನ ಕ್ಷೇತ್ರದಿಂದ ವಿಭಿನ್ನ ಸ್ಪರ್ಧಿಗಳು ಬಿಗ್ಬಾಸ್ ಮನೆಯನ್ನು ಪ್ರವೇಶಿಸುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಆಗಿರುವಂತಹ ಸ್ಪರ್ಧಿಗಳನ್ನು ಕೂಡ ಬಿಗ್ ಬಾಸ್ ಮನೆಯ ಒಳಗಡೆ ಕಳುಹಿಸಿಕೊಡಲಾಗುತ್ತದೆ. ಕಳೆದ ಬಾರಿ ಕೂಡ ಟಿಕ್ ಟಾಕ್ ಮೂಲಕ ದೊಡ್ಡ ಮಟ್ಟದಲ್ಲಿ ಫೇಮಸ್ ಆಗಿದ್ದಂತಹ ಧನುಶ್ರೀ ಅವರನ್ನು ಬಿಗ್ ಬಾಸ್ ಮನೆಯ ಒಳಗಡೆ ಕಳುಹಿಸಿಕೊಡಲಾಗಿತ್ತು. ಆದರೆ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಂತಹ ಮೊದಲ ಸ್ಪರ್ಧಿಯಾಗಿದ್ದರು.

sonu srinivas gowda | ಅಂದು ಧನುಶ್ರೀ ಇಂದು ಯಾರು?? ಇನ್ನೇನು ಆರಂಭವಾಗುವ ಬಿಗ್ ಬಾಸ್ ಗೆ ಟಿಕ್ ಟಾಕ್ ಕೋಟಾ ದಲ್ಲಿ ಹೋಗೋದು ಇವರೇನಾ?? ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಫುಲ್ ಸದ್ದು
ಅಂದು ಧನುಶ್ರೀ ಇಂದು ಯಾರು?? ಇನ್ನೇನು ಆರಂಭವಾಗುವ ಬಿಗ್ ಬಾಸ್ ಗೆ ಟಿಕ್ ಟಾಕ್ ಕೋಟಾ ದಲ್ಲಿ ಹೋಗೋದು ಇವರೇನಾ?? ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಫುಲ್ ಸದ್ದು 2

ಇನ್ನು ಈ ಬಾರಿ ಕೂಡ ಟಿಕ್ ಟಾಕ್ ಅಥವಾ ಶಾರ್ಟ್ ವಿಡಿಯೋ ಫಾರ್ಮೆಟ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿ ಒಬ್ಬರನ್ನು ಬಿಗ್ಬಾಸ್ ಮನೆಗೆ ಕಳುಹಿಸಿ ಕೊಡುತ್ತಾರೆ ಎಂಬ ವಿಚಾರಗಳು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೌದು ಈ ಬಾರಿ ವಾಹಿನಿ ಮೂಲಗಳಿಂದ ಕೇಳಿಬಂದಿರುವ ಬಲವಾದ ಸುದ್ದಿಯ ಪ್ರಕಾರ ಕಳೆದ ಬಾರಿ ಧನುಶ್ರೀ ಅವರಂತೆ ಈ ಬಾರಿ ಕೂಡ ಟಿಕ್ ಟಾಕ್ ಸ್ಟಾರ್ ಆಗಿರುವ ಸೋನು ಶ್ರೀನಿವಾಸಗೌಡ ರವರು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಹರಿದಾಡುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಸೋನು ಶ್ರೀನಿವಾಸಗೌಡ ಟ್ರೋಲ್ ಪೇಜ್ ಗಳಿಂದ ಆಗಾಗ ಟ್ರೋಲಿಗೆ ಒಳಗಾಗುತ್ತಲೇ ಇರುತ್ತಾರೆ. ಒಂದು ವೇಳೆ ಇವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋದರೆ ಎಷ್ಟು ವಾರಗಳ ಕಾಲ ಇರುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.