ನೋಡಲು ಸುಂದರ, ಗುಣದಲ್ಲಿ ಅಪ್ಪಟ ಅಪರಂಜಿ. ಆದರೆ ಈಕೆಯ ಒಳ್ಳೆತನವನ್ನು ಬಳಸಿಕೊಂಡ ಗಂಡ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರುವಂತೆ ನಮ್ಮ ದೇಶದಲ್ಲಿ ಎಷ್ಟೋ ಜನರು ವಿದೇಶದಲ್ಲಿ ಹೋಗಿ ಉತ್ತಮ ಸಂಬಳ ಬರುವಂತಹ ಕೆಲಸವನ್ನು ಹುಡುಕಿಕೊಂಡು ಅಲ್ಲೆ ಸೆಟಲ್ ಆಗುವಂತಹ ಯೋಚನೆ ಮಾಡಿರುತ್ತಾರೆ. ಇನ್ನು ಅಮೆರಿಕದಲ್ಲಿ ಕೆಲಸ ಸಿಕ್ಕಿಬಿಟ್ಟರೆ ಮುಗಿದೇಹೋಯಿತು ಲೈಫ್ ಪಕ್ಕ ಸೆಟಲ್ ಎಂಬ ಮಾತಿದೆ. ಅದರಲ್ಲೂ ಅಮೆರಿಕಾದಲ್ಲಿ ಭಾರತೀಯರಿಗೆ ಸಾಕಷ್ಟು ಗೌರವ ಹಾಗೂ ಪ್ರೀತಿಗಳು ಕೂಡ ಸಿಗುತ್ತದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ ವ್ಯಕ್ತಿಗಳ ಕುರಿತಂತೆ.

merin kerala | ನೋಡಲು ಸುಂದರ, ಗುಣದಲ್ಲಿ ಅಪ್ಪಟ ಅಪರಂಜಿ. ಆದರೆ ಈಕೆಯ ಒಳ್ಳೆತನವನ್ನು ಬಳಸಿಕೊಂಡ ಗಂಡ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ??
ನೋಡಲು ಸುಂದರ, ಗುಣದಲ್ಲಿ ಅಪ್ಪಟ ಅಪರಂಜಿ. ಆದರೆ ಈಕೆಯ ಒಳ್ಳೆತನವನ್ನು ಬಳಸಿಕೊಂಡ ಗಂಡ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ?? 3

ಗುರುಗಳು ಹಾಗೂ ಹಿರಿಯರು ಪ್ರತಿಬಾರಿ ನಮಗೆ ಜೀವನದಲ್ಲಿ ಒಳ್ಳೆಯದು ಮಾಡಿ ನಿಮಗೆ ಖಂಡಿತವಾಗಿ ದೇವರು ಒಳ್ಳೆದು ಮಾಡುತ್ತಾನೆ ಎಂಬುದಾಗಿ ಹೇಳುತ್ತಲೇ ಇರುತ್ತಾರೆ. ಆದರೆ ನಾವು ಎಂದು ಹೇಳಲು ಹೊರಟಿರುವ ನೈಜ ಘಟನೆಯನ್ನು ಕೇಳಿದ ನಂತರ ಖಂಡಿತವಾಗಿ ನಿಮ್ಮ ಮನಸ್ಸಿನಲ್ಲಿ ಕೂಡಾ ದುಃಖ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇರಳ ಮೂಲದ ಮೆರಿನ್ ಎಂಬಾಕೆ ಬೆಂಗಳೂರಿನಲ್ಲಿ ಬಂದು ನರ್ಸಿಂಗ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ. ಆ ಸಂದರ್ಭದಲ್ಲಿ ಅಮೆರಿಕದಲ್ಲಿ ಭಾರತೀಯ ಮೂಲದ ನರ್ಸ್ ಗಳಿಗೆ ಉತ್ತಮ ಬೇಡಿಕೆ ಇತ್ತು.

ಈಕಡೆ ಮೆರಿನ್ ಅವರಿಗೂ ಕೂಡ ಅಮೆರಿಕದಲ್ಲಿ ಕೈತುಂಬಾ ಸಂಬಳ ಸಿಗುವಂತಹ ನರ್ಸಿಂಗ್ ಕೆಲಸದಲ್ಲಿ ಕೆಲಸ ಮಾಡಬೇಕು ಎನ್ನುವ ದೊಡ್ಡ ಆಸೆ ಕೂಡ ಇತ್ತು. ಇದಕ್ಕಾಗಿ ಅವರು ಅಪ್ಲೈ ಕೂಡ ಮಾಡುತ್ತಾರೆ. ಅವರ ಅದೃಷ್ಟ ಎನ್ನುವಂತೆ ಅತಿಶೀಘ್ರವಾಗಿ ಅವರ ಅಪ್ಲೈ ಗೆ ಪ್ರತಿಕ್ರಿಯೆ ಕೂಡ ಬಂದು ಕೆಲಸ ಕೂಡ ಸಿಗುತ್ತದೆ. ಇನ್ನೇನು ನನ್ನ ಲೈಫ್ ಸೆಟಲ್ ಆಯಿತು ಎನ್ನುವುದಾಗಿ ಖುಷಿಯಿಂದಲೇ ಅಮೆರಿಕದ ಮಿಯಾಮಿಗೆ ಬಂದಿಳಿಯುತ್ತಾರೆ.

ಕೆಲವು ಸಮಯದಲ್ಲಿ ಮ್ಯಾಥ್ಯೂ ಎನ್ನುವ ವ್ಯಕ್ತಿಯ ಪರಿಚಯವಾಗಿ ಸ್ನೇಹ ಎನ್ನುವುದು ಪ್ರೀತಿಗೆ ತಿರುಗಿ ಇಬ್ಬರು ಕೂಡ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಪ್ರತಿಯೊಂದು ಮದುವೆ ಗಳಂತೆ ಇವರ ಮದುವೆ ಕೂಡ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಮೆರಿನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಉತ್ತಮ ಗಳಿಕೆ ಮಾಡುತ್ತಿದ್ದಳು. ಇತ್ತಕಡೆ ಮ್ಯಾಥ್ಯೂ ಪೆಟ್ರೋಲ್ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕ್ರಮೇಣವಾಗಿ ಕಾಲ ಕಳೆದ ನಂತರ ಮ್ಯಾಥ್ಯೂ ನ ಬಣ್ಣ ತಿಳಿಯಲು ಪ್ರಾರಂಭವಾಗುತ್ತದೆ. ಇದರ ನಡುವೆ ನೂರ ಎನ್ನುವ ಹೆಣ್ಣುಮಗಳು ಕೂಡ ಇವರಿಬ್ಬರಿಗೆ ಜನಿಸುತ್ತಾಳೆ.

ಸಮಾಜದಲ್ಲಿ ಮೆರಿನ್ ಳಿಗೆ ಮ್ಯಾಥ್ಯೂ ಗಿಂತ ಹೆಚ್ಚಿನ ಮರ್ಯಾದೆ ಹಾಗೂ ಸಂಬಳ ಸಿಗುತ್ತಿತ್ತು ಇದರಿಂದಾಗಿ ಆತ ಹೊಟ್ಟೆಕಿಚ್ಚು ಪಡುತ್ತಿದ್ದ. ಇದರ ನಡುವೆ ಆತನ ಹಲವಾರು ಕೆಲಸಗಳು ಕೂಡ ಕಳೆದುಹೋಗುತ್ತವೆ. ಆತ ಎಲ್ಲೇ ಕೆಲಸ ಮಾಡಲು ಹೋದರೂ ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ಬರುತ್ತಿದ್ದ. ಆಗ ಮೆರಿನ್ ತನ್ನ ಗಂಡನಿಗೆ ಇದು ಅಮೆರಿಕ ಭಾರತವಲ್ಲ ಇಲ್ಲಿ ಕೆಲಸ ಮಾಡದಿದ್ದರೆ ಏನು ಮಾಡಲು ಸಾಧ್ಯವಿಲ್ಲ ಎಂಬುದಾಗಿ ಹೇಳುತ್ತಾಳೆ. ಆಗ ಮ್ಯಾಥ್ಯೂ ನಿಮ್ಮನ್ನೆಲ್ಲ ಮುಗಿಸಿ ನಾನು ಕೂಡ ಪ್ರಾಣವನ್ನು ಕಳೆದುಕೊಳ್ಳುತ್ತೇನೆ ಎಂಬುದಾಗಿ ತಲೆಕೆಟ್ಟವನಂತೆ ಮಾತನಾಡಲು ಆರಂಭಿಸುತ್ತಾನೆ. ಆಗ ಹೆದರಿದ ಮೆರಿನ್ ಪೊಲೀಸರಿಗೆ ಕರೆ ಮಾಡಿ ಮ್ಯಾಥ್ಯೂ ನನ್ನು ಬಂದಿಸುವಂತೆ ಮಾಡುತ್ತಾಳೆ.

merin kerala 2 | ನೋಡಲು ಸುಂದರ, ಗುಣದಲ್ಲಿ ಅಪ್ಪಟ ಅಪರಂಜಿ. ಆದರೆ ಈಕೆಯ ಒಳ್ಳೆತನವನ್ನು ಬಳಸಿಕೊಂಡ ಗಂಡ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ??
ನೋಡಲು ಸುಂದರ, ಗುಣದಲ್ಲಿ ಅಪ್ಪಟ ಅಪರಂಜಿ. ಆದರೆ ಈಕೆಯ ಒಳ್ಳೆತನವನ್ನು ಬಳಸಿಕೊಂಡ ಗಂಡ ಏನು ಮಾಡಿದ್ದಾನೆ ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ?? 4

ಅದೇ ಕೂಡಲೇ ತನ್ನ ಮಗಳಾದ ನೋರ ಳನ್ನು ಭಾರತಕ್ಕೆ ಕಳಿಸುತ್ತಾಳೆ. ಈ ಸಂದರ್ಭದಲ್ಲಿ ಗಂಡನಿಗೆ ಡಿವೋರ್ಸ್ ನೀಡುವ ಕುರಿತಂತೆ ಯೋಚನೆ ಮಾಡುತ್ತಾಳೆ. ಆದರೆ ಮ್ಯಾಥ್ಯೂ ಈ ಸಂದರ್ಭದಲ್ಲಿ ಜೈಲಿನಿಂದ ಹೊರಗೆ ಬಂದು ಭಾರತಕ್ಕೆ ಹೋಗಿ ಕೂಡ ಅಮೆರಿಕಕ್ಕೆ ವಾಪಸ್ ಆಗಿರುತ್ತಾರೆ. ಹೆಂಡತಿಯ ಈ ವಿಚಾರದ ಕುರಿತಂತೆ ತಿಳಿದು ನಾನು ಇನ್ನು ಮುಂದೆ ಒಳ್ಳೆಯವನಾಗಿ ಇರುತ್ತೇನೆ ಎಂಬುದಾಗಿ ಹೇಳುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ತನ್ನ ಹಳೆಯ ಚಾಳಿಯನ್ನು ಮತ್ತೊಮ್ಮೆ ಆರಂಭಿಸಿ ಹೆಂಡತಿಗೆ ಕುಡಿತಕ್ಕೆ ಹಣವನ್ನು ಕೇಳಲು ಪೀಡಿಸಲು ಆರಂಭಿಸುತ್ತಾನೆ. ಆದರೆ ಈ ಬಾರಿ ಮೆರಿನ್ ನಿಜಕ್ಕೂ ಕೂಡ ವಿವಾಹ ವಿಚ್ಛೇದನ ಪಡೆಯುವ ಕುರಿತಂತೆ ಯೋಚಿಸುತ್ತಾಳೆ.

ಈ ಕುರಿತಂತೆ ಸಂಪೂರ್ಣವಾಗಿ ತಿಳಿದ ಮ್ಯಾಥ್ಯೂ ಈ ಬಾರಿ ಮೆರಿನ್ ಳನ್ನು ಮುಗಿಸಲೇಬೇಕು ಎಂದು ತೀರ್ಮಾನಿಸಿ ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಪಾರ್ಕಿಂಗ್ ಸ್ಥಳಕ್ಕೆ ಬಂದು ಆಕೆ ಬರುವುದನ್ನೇ ಕಾಯುತ್ತಾನೆ. ಆಕೆ ಕಾರನ್ನು ಹತ್ತಿ ಮನೆಗೆ ಹೋಗಲು ಪಾರ್ಕಿಂಗ್ ಬಳಿ ಬರುತ್ತಾಳೆ ಅದೇ ಸಮಯವನ್ನು ಕಾಯುತ್ತಿದ್ದ ಮ್ಯಾಥ್ಯೂ ಅವಳನ್ನು ಅಲ್ಲಿಯೇ ಜನರ ಎದುರುಗಡೆ ಮುಗಿಸಿಬಿಡುತ್ತಾನೆ. ನಂತರ ಕಾರು ಹತ್ತಿಕೊಂಡು ಓಡಿಹೋಗುತ್ತಾನೆ.

ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಉಳಿಸುವ ಪ್ರಯತ್ನ ಮಾಡಿದರು ಕೂಡ ಆಕೆ ಸ್ಥಳದಲ್ಲೇ ಕೊನೆಯುಸಿರನ್ನು ಎಳೆದಿರುತ್ತಾಳೆ. ನಂತರ ಕೂಡಲೇ ಅಮೆರಿಕಾ ಪೊಲೀಸರು ಮ್ಯಾಥ್ಯೂ ನನ್ನ ಹಿಡಿದು ಆತನಿಗೆ ಜೀವಾವಧಿ ಯನ್ನು ನೀಡುತ್ತಾರೆ. ಆದರೆ ಒಳ್ಳೆಯ ಗುಣದವ ಳಾಗಿದ್ದ ಮೆರಿನ್ ಯಾವುದೇ ತಪ್ಪನ್ನು ಮಾಡದೆ ವಿನಾಕಾರಣ ಜೀವವನ್ನು ಕಳೆದುಕೊಂಡಿದ್ದು ನಿಜಕ್ಕೂ ಕೂಡ ವಿಷಾದನೀಯ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.