ಪುನೀತ್ ಪರ್ವ ಕಾರ್ಯಕ್ರಮಕ್ಕೆ ತಪ್ಪಿಸಿಕೊಂಡರು, ಬನಾರಸ್ ಸಿನಿಮಾ ಪ್ರಮೋಷನ್ ಗೆ ದರ್ಶನ್ ಪಡೆದ ಹಣ ಎಷ್ಟು ಗೊತ್ತೇ? ಇಷ್ಟು ಹಣ ಪುನೀತ್ ಗಿಂತ ದೊಡ್ಡದಾಯಿತೇ??

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವಾದ ಪುನೀತಪರ್ವಕ್ಕೆ ಬಾರದೆ ಇದ್ದಿದ್ದು ಇಂದಿಗೂ ಕೂಡ ದೊಡ್ಡ ವಾದ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ನಟ ದರ್ಶನ್ ರವರು ಜಮೀರ್ ಖಾನ್ ಅವರ ಪುತ್ರನ ಸಿನಿಮ ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅಲ್ಲಿ ಭಾಗಿಯಾಗುವ ಮೂಲಕ ಮತ್ತಷ್ಟು ವಿವಾದಕ್ಕೆ ಅವಕಾಶ ಆದಂತಿದೆ. ಹೌದು ನಟ ದರ್ಶನ್ ರವರು ಗಂಧದ ಗುಡಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಸ್ವತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಕರೆ ಮಾಡಿ ಖುದ್ದು ಕರೆದು ಆಹ್ವಾನ ಪತ್ರಿಕೆಯನ್ನು ಮನೆಗೆ ಕಳುಹಿಸಿ ಕೊಟ್ಟಿದ್ದರು. ಆದರೂ ನಟ ದರ್ಶನ್ ಗಂಧದ ಗುಡಿ ಪುನೀತಪರ್ವಕ್ಕೆ ಆಗಮಿಸಿರಲಿಲ್ಲ.

ಈ ಮೊದಲೇ ಕ್ರಾಂತಿ ಚಿತ್ರದ ಶೂಟಿಂಗ್ ಡೇಟ್ ಫಿಕ್ಸ್ ಆಗಿತ್ತು. ಹೀಗಾಗಿ ಚಿತ್ರೀಕರಣವನ್ನು ಮುಂದೂಡಲು ಸಾಧ್ಯವಾಗುವುದಿಲ್ಲ. ನಿರ್ಮಾಪಕರು ನಮ್ಮನ್ನೇ ನಂಬಿಕೊಂಡು ಸಾಕಷ್ಟು ಹಣ ಹೂಡಿರುತ್ತಾರೆ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿಲ್ಲ. ಹಾಗಾಗಿ ಗಂಧದಗುಡಿ ನಾನು ಬರುತ್ತಿಲ್ಲ ಎಂದು ಹೇಳಿದ್ದರು ಎಂದು ಕೇಳಿ ಬರುತ್ತಿದೆ. ಇಡೀ ರಾತ್ರಿ ಕ್ರಾಂತಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು ಕೂಡ ಗಂಧದಗುಡಿ ಪುನೀತಪರ್ವ ಕಾರ್ಯಕ್ರಮದ ಮರುದಿನವೇ ನಟ ದರ್ಶನ್ ರವರು ಜಮೀರ್ ಅಹಮದ್ ಅವರ ಪುತ್ರನ ಮೊದಲ ಸಿನಿಮಾ ವಾದ ಬನಾರಸ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ಗೆ ಭಾಗಿಯಾಗಿದ್ದಾರೆ, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪುನೀತ್ ಅವರ ಕಾರ್ಯಕ್ರಮಕ್ಕೆ ಇವರಿಗೆ ಬರಲು ಸಮಯವಿಲ್ಲ. ಆದರೆ ಬೇರೆಯವರ ಕಾರ್ಯಕ್ರಮಕ್ಕೆ ಹೋಗಲು ಮಾತ್ರ ಇವರಿಗೆ ಪುರುಸುತ್ತಿದೆ ಎನ್ನುವ ರೀತಿಯಲ್ಲಿ ಸಾಕಷ್ಟು ವಿರೋಧದ ಮಾತುಗಳು ಕೇಳಿ ಬರುತ್ತಿವೆ.

darshan banaras | ಪುನೀತ್ ಪರ್ವ ಕಾರ್ಯಕ್ರಮಕ್ಕೆ ತಪ್ಪಿಸಿಕೊಂಡರು, ಬನಾರಸ್ ಸಿನಿಮಾ ಪ್ರಮೋಷನ್ ಗೆ ದರ್ಶನ್ ಪಡೆದ ಹಣ ಎಷ್ಟು ಗೊತ್ತೇ? ಇಷ್ಟು ಹಣ ಪುನೀತ್ ಗಿಂತ ದೊಡ್ಡದಾಯಿತೇ??
ಪುನೀತ್ ಪರ್ವ ಕಾರ್ಯಕ್ರಮಕ್ಕೆ ತಪ್ಪಿಸಿಕೊಂಡರು, ಬನಾರಸ್ ಸಿನಿಮಾ ಪ್ರಮೋಷನ್ ಗೆ ದರ್ಶನ್ ಪಡೆದ ಹಣ ಎಷ್ಟು ಗೊತ್ತೇ? ಇಷ್ಟು ಹಣ ಪುನೀತ್ ಗಿಂತ ದೊಡ್ಡದಾಯಿತೇ?? 2

ದೊಡ್ಡ ದೊಡ್ಡ ಸ್ಟಾರ್ ನಟರು, ಪರಭಾಷೆಯ ಜನಪ್ರಿಯ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ದರ್ಶನ್ ರವರಿಗೆ ಮಾತ್ರ ಸಮಯವೇ ಇರಲಿಲ್ಲ ಎಂದು ಟೀಕಿಸಿದ್ದಾರೆ. ಆದರೆ ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಗೆ ಹೋಗಲು ಮಾತ್ರ ಇವರಿಗೆ ಸಮಯವಿದೆ ಎಂದು ಚರ್ಚಿಸಲಾಗುತ್ತಿದೆ. ಇನ್ನು ಇತ್ತೀಚೆಗೆ ನಡೆದ ಜಮೀರ್ ಅಹಮದ್ ಅವರ ಮಗ ಜೈದ್ ಖಾನ್ ಅವರ ಮೊದಲ ಚಿತ್ರವಾದ ಬನಾರಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಂಡಿದ್ದರು. ಜೊತೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಎಷ್ಟು ಸಂಭಾವನೆ ಪಡೆದಿದ್ದರು ಎನ್ನುವುದರ ಕುರಿತು ಚರ್ಚೆಯಾಗುತ್ತಿದೆ. ಒಂದು ಮಾಹಿತಿ ಪ್ರಕಾರ ಅವರು ಬರೋಬ್ಬರಿ 12 ಕೋಟಿ ಹಣವನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಡೆದಿದ್ದರು ಎಂದು ತಿಳಿದುಬಂದಿದೆ.

Comments are closed.