ಮೊದಲ ಪಂದ್ಯದ ಬಳಿಕವೇ ಲೆಕ್ಕಾಚಾರ ಶುರು; ಈತನನ್ನು ಮುಂದಿನ ಪಂದ್ಯದಿಂದ ಹೊರಗಿಡಿ ಎಂದ ಗವಾಸ್ಕರ್. ಯಾರು ಹೊರಹೋಗಬೇಕಂತೆ ಗೊತ್ತೇ??

ಪಾಕಿಸ್ತಾನದ ವಿರುದ್ಧ ಕಳೆದ ಭಾನುವಾರ ನಡೆದ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಇದೀಗ ನಾಳೆ ಗುರುವಾರ ನೆದರ್ಲ್ಯಾಂಡ್ ವಿರುದ್ಧ ಭಾರತ ತಂಡ ಸೆಣೆಸಲಿದೆ. ತನ್ನ ಮೊದಲ ಪಂದ್ಯದಲ್ಲೇ ಟಿ20 ವಿಶ್ವಕಪ್ನ ರೋಚಕ ಅಭಿಯಾನವನ್ನು ಶುರು ಮಾಡಿರುವ ಭಾರತ ತಂಡವು ಇದೀಗ ತನ್ನ ಎರಡನೇ ಪಂದ್ಯದಲ್ಲೂ ಗೆಲ್ಲುವ ಭರವಸೆ ಹೆಚ್ಚಿಸಿದೆ. ಈ ಸಮಯದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಒಂದು ಸಲಹೆ ನೀಡಿದ್ದಾರೆ. ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ಒಂದು ಮಹತ್ವದ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.ಅಚ್ಚರಿ ಎಂಬಂತೆ ಅವರು ಕಳೆದ ಪಾಕಿಸ್ತಾನದ ನಡುವಿನ ಪಂದ್ಯದ ಗೆಲುವಿಗೆ ಕಾರಣನಾದ ಅದ್ಭುತ ಪ್ರದರ್ಶನ ತೋರಿದ ಆಟಗಾರನನ್ನೇ ಎರಡನೇ ಪಂದ್ಯದಲ್ಲಿ ಆಟದಿಂದ ಹೊರಗೆ ಇಡಬೇಕಾಗಿ ಸಲಹೆ ನೀಡಿದ್ದಾರೆ.

ಈ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಇಷ್ಟಕ್ಕೂ ಭಾರತ ತಂಡವು ತನ್ನ ಎರಡನೇ ಪಂದ್ಯದಲ್ಲಿ ಹೊರಗಿಡಬೇಕೆಂದು ತಿಳಿಸಿದ ಆಟಗಾರ ಯಾರು? ಸುನಿಲ್ ಗವಾಸ್ಕರ್ ಹೀಗೇಕೆ ಹೇಳಿದರು ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ. ನಾಳೆ ನಡೆಯಲಿರುವ ನೆದರ್ಲ್ಯಾಂಡ್ ತಂಡದ ವಿರುದ್ಧದ ಭಾರತ ಪಂದ್ಯದಲ್ಲಿ ತಂಡದಿಂದ ಹೊರಗೆ ಇರಿಸಬೇಕಾಗಿ ಹೇಳಿರುವ ಆಟಗಾರ ಮತ್ತಾರು ಅಲ್ಲ. ಅದು ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ. ಹೌದು ಸುನಿಲ್ ಗವಾಸ್ಕರ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು ನಾಳೆಯ ಪಂದ್ಯದಲ್ಲಿ ಹೊರಗಿಡುವಂತೆ ಸಲಹೆ ನೀಡಿದ್ದಾರೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ, ಮುಂದಿನ ಭಾನುವಾರ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.

gavaskar abt hooda | ಮೊದಲ ಪಂದ್ಯದ ಬಳಿಕವೇ ಲೆಕ್ಕಾಚಾರ ಶುರು; ಈತನನ್ನು ಮುಂದಿನ ಪಂದ್ಯದಿಂದ ಹೊರಗಿಡಿ ಎಂದ ಗವಾಸ್ಕರ್. ಯಾರು ಹೊರಹೋಗಬೇಕಂತೆ ಗೊತ್ತೇ??
ಮೊದಲ ಪಂದ್ಯದ ಬಳಿಕವೇ ಲೆಕ್ಕಾಚಾರ ಶುರು; ಈತನನ್ನು ಮುಂದಿನ ಪಂದ್ಯದಿಂದ ಹೊರಗಿಡಿ ಎಂದ ಗವಾಸ್ಕರ್. ಯಾರು ಹೊರಹೋಗಬೇಕಂತೆ ಗೊತ್ತೇ?? 2

ಹಾಗಾಗಿ ಅವರು ಹೆಚ್ಚಿನ ಚೈತನ್ಯದಿಂದ ಭಾನುವಾರದ ಆಟದಲ್ಲಿ ಪಾಲ್ಗೊಳ್ಳಬೇಕಿದೆ, ಹಾಗಾಗಿ ಈ ಬಾರಿ ಪಂದ್ಯದಲ್ಲಿ ಅವರನ್ನು ಹೊರಗಿಡುವುದು ಒಳ್ಳೆಯದು. ಅವರಿಗೆ ವಿಶ್ರಾಂತಿ ನೀಡಬೇಕಿದೆ ಎಂದು ಅವರು ಹೇಳುತ್ತಾರೆ. ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಯಾವ ಆಟಗಾರನನ್ನು ಕಣಕ್ಕಿಳಿಸಬೇಕು ಎನ್ನುವುದರ ಕುರಿತು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಅದರ ಪ್ರಕಾರ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ದೀಪಕ್ ಹೂಡ ಅವರನ್ನು ಕಣಕ್ಕಿಳಿಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ. ನಾಳೆ ನೆದರ್ಲ್ಯಾಂಡ್ ವಿರುದ್ಧ ಭಾರತ ಟಿ ಟ್ವೆಂಟಿ ವಿಶ್ವಕಪ್ ಸರಣಿಯ ಎರಡನೇ ಪಂದ್ಯ ಆಡಲಿದೆ.

Comments are closed.