ತನ್ನ ಜೀವನದಲ್ಲಿ ಏನಾಯಿತು ಎನ್ನುವದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ದಿವ್ಯ: ಮೊದಲ ಬಾರಿಗೆ ಕ್ಯಾಮೆರಾ ಎದುರು ಹೇಳಿದ್ದೇನು ಗೊತ್ತೇ? –

ನಮಸ್ಕಾರ ಸ್ನೇಹಿತರೆ ಕನ್ನಡ ಮೂಲದ ನಟಿ ಒಬ್ಬರು ಈಗ ಚೆನ್ನೈನಲ್ಲಿ ಮೋಸ ಹೋಗಿರುವ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಕನ್ನಡದ ಆಕಾಶ ದೀಪ ಧಾರವಾಹಿಯಲ್ಲಿ ನಟಿಸಿದ್ದ ದಿವ್ಯ ಶ್ರೀಧರ್ ಅವರು ಈಗ ಮೋಸಕ್ಕೆ ಸಿಲುಕಿರುವ ಹೆಣ್ಣುಮಗಳಾಗಿದ್ದಾಳೆ. ಅವಕಾಶಗಳನ್ನು ಹುಡುಕಿಕೊಂಡು ತಮಿಳಿನತ್ತ ಮುಖ ಮಾಡಿದ ದಿವ್ಯ ಶ್ರೀಧರ್ ಅವರ ಬಾಳಿನಲ್ಲಿ ಈಗ ಅಮ್ಜದ್ ಖಾನ್ ಅಲಿಯಾಸ್ ಅನರ್ವ್ ಎನ್ನುವಾತ ಆಟ ಆಡಿದ್ದಾನೆ ಎಂಬುದಾಗಿ ಹೇಳಲಾಗುತ್ತಿದೆ.

ಈ ಕಹಾನಿಯ ಹಿನ್ನೆಲೆಯನ್ನು ಹೇಳುತ್ತಾ ನಟಿ ದಿವ್ಯಶ್ರೀಧರ್ ಇದರ ಹಿಂದಿನ ವಿಚಾರವನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ ಅದರ ಬಗ್ಗೆ ತಿಳಿಯೋಣ ಬನ್ನಿ. ಇಬ್ಬರೂ ಕೂಡ 2017ರಲ್ಲಿ ಒಂದೇ ಸೀರಿಯಲ್ನಲ್ಲಿ ಒಟ್ಟಾಗಿ ನಟಿಸಿರುತ್ತಾರಂತೆ. ಮೊದಲು ಪರಿಚಿತರಾಗಿ ನಂತರ ಪರಿಚಯ ಎನ್ನುವುದು ಸ್ನೇಹಕ್ಕೆ ತಿರುಗಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಲಾಕ್ಡೌನ್ ಸಂದರ್ಭದಲ್ಲಿ ಎರಡು ವರ್ಷ ಮಗುವಿನಂತೆ ತನ್ನ ಗಂಡನನ್ನು ಸಾಕಿದ್ದೇನೆ ಎಂಬುದಾಗಿ ದಿವ್ಯ ಶ್ರೀಧರ್ ಹೇಳುತ್ತಾರೆ. ಹೀಗಿದ್ದರೂ ಕೂಡ ಆತ ನನಗೆ ಹ’ಲ್ಲೆ ಮಾಡಿದ್ದಾನೆ ಎನ್ನುವುದನ್ನು ದಿವ್ಯ ಶ್ರೀಧರ್ ಇತ್ತೀಚಿಗಷ್ಟೇ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಆತ ನನ್ನನ್ನು ದೂರ ಇಟ್ಟರೂ ಕೂಡ ನನಗೆ ಅವನೇ ಬೇಕು ಎನ್ನುವುದಾಗಿ ದಿವ್ಯಶ್ರೀಧರ್ ಅವರು ವಿಡಿಯೋದಲ್ಲಿ ಗೋಗರೆಯುತ್ತಿದ್ದಾರೆ.

deepa sridhar | ತನ್ನ ಜೀವನದಲ್ಲಿ ಏನಾಯಿತು ಎನ್ನುವದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ದಿವ್ಯ: ಮೊದಲ ಬಾರಿಗೆ ಕ್ಯಾಮೆರಾ ಎದುರು ಹೇಳಿದ್ದೇನು ಗೊತ್ತೇ? -
ತನ್ನ ಜೀವನದಲ್ಲಿ ಏನಾಯಿತು ಎನ್ನುವದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ ದಿವ್ಯ: ಮೊದಲ ಬಾರಿಗೆ ಕ್ಯಾಮೆರಾ ಎದುರು ಹೇಳಿದ್ದೇನು ಗೊತ್ತೇ? - 2

ಇನ್ನು ನನ್ನ ಮಗುವಿಗಾಗಿ ಪ್ರಾರ್ಥಿಸಿ ಎಂಬುದಾಗಿ ಕೂಡ ಕಣ್ಣೀರಿಟ್ಟು ದಿವ್ಯಶ್ರೀಧರ್ ಅವರು ವಿಡಿಯೋದಲ್ಲಿ ಮಾತನಾಡಿದ್ದಾರೆ. ಮದುವೆ ಆಗಿರುವ ವಿಚಾರವನ್ನು ಸೇರಿದಂತೆ ಎಲ್ಲಾ ವಿಷಯಗಳನ್ನು ಎಲ್ಲೂ ಕೂಡ ಹೇಳಬಾರದು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಮಾಡ ಬಾರದು ಎಂದು ಅನರ್ವ್ ಅಲಿಯಾಸ್ ಅಮ್ಜದ್ ಖಾನ್ ದಿವ್ಯ ಶ್ರೀಧರ್ ಅವರಿಗೆ ಎಚ್ಚರಿಕೆ ನೀಡಿದ್ದಾನೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ತಿಳಿದು ಬಂದಿರುವ ಮತ್ತೊಂದು ವಿಚಾರ ಎಂದರೆ, ದಿವ್ಯಶ್ರೀಧರ್ ಅವರ ಜೊತೆಗೆ ಪರಿಚಯ ಆಗುವ ಸಂದರ್ಭದಲ್ಲಿ ತನ್ನ ಹೆಸರು ಅನರ್ವ್ ಎಂಬುದಾಗಿ ತಿಳಿಸಿದ್ದು ನಂತರ ಆತನ ಹೆಸರು ಅಮ್ಜದ್ ಖಾನ್ ಎಂಬುದಾಗಿ ತಿಳಿದು ಬಂದಿದೆ ಎಂಬುದಾಗಿ ಕೂಡ ಈ ಘಟನೆಯಲ್ಲಿ ಕೇಳಿ ಬಂದಿದೆ.

Comments are closed.