ಅಂದು ಧೋನಿ ಸರಿ ಎಂದರು ಕೂಡ ಒಪ್ಪಿಕೊಳ್ಳದೇ ಇಂದು ಪಶ್ಚತ್ತಾಪ ಪಡುತ್ತಿರುವ ಬಾಲಿವುಡ್ ಬೆಡಗಿ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಹೇಂದ್ರ ಸಿಂಗ್ ಧೋನಿ ರವರ ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಈಗಾಗಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಏಕದಿನ ಹಾಗೂ ಟಿ-20ವಿಶ್ವಕಪ್ ಇಷ್ಟು ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಕೂಡ ನಂಬರ್ ವನ್ ಸ್ಥಾನದ ಗದೆಯನ್ನು ನೀಡಿದ ಸಾಧನೆ ಮಾತ್ರವಲ್ಲದೆ ಹಲವಾರು ಸರಣಿಗಳನ್ನು ಗೆದ್ದ ಸಾಧನೆಯನ್ನು ಕೂಡ ಮಾಡಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಒಟ್ಟಾರೆಯಾಗಿ ಹೇಳುವುದಾದರೆ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಸಾರ್ವಕಾಲಿಕ ಏಕೈಕ ಶ್ರೇಷ್ಠ ಕಪ್ತಾನ ಎಂದು ಹೇಳಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಮಹೇಂದ್ರ ಸಿಂಗ್ ಧೋನಿ ದ ಅನ್ಟೋಲ್ಡ್ ಸ್ಟೋರಿ ಸಿನಿಮಾ ಬಿಡುಗಡೆಯಾಗಿತ್ತು. ಇದರಲ್ಲಿ ಮಹೇಂದ್ರ ಸಿಂಗ್ ಧೋನಿ ಹೇಗೆ ಮಧ್ಯಮ ವರ್ಗದ ಕುಟುಂಬದಿಂದ ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿ ನಂತರ ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಬದಲಾವಣೆ ಆದಂತಹ ಸ್ಪೂರ್ತಿದಾಯಕ ಕಥೆಯನ್ನು ಕೆಲವು ತೋರಿಸಲಾಗಿತ್ತು. ಇದರಲ್ಲಿ ಸಾಕ್ಷಿ ಅವರಿಗಿಂತ ಮೊದಲು ಪ್ರಿಯಾಂಕ ಎನ್ನುವ ಹುಡುಗಿಯನ್ನು ಮಹೇಂದ್ರ ಸಿಂಗ್ ಧೋನಿ ಅವರು ಪ್ರೇಮಿಸಿದ್ದರು ಎಂಬ ಕಥೆ ಕೂಡ ಇದೆ. ಈ ಪಾತ್ರವನ್ನು ಚಿತ್ರದಲ್ಲಿ ಆಗಷ್ಟೇ ಚಿತ್ರರಂಗದಲ್ಲಿ ಮಿಂಚುತ್ತಿದ್ದ ದಿಶಾ ಪಟಾನಿ ಅವರು ನಿರ್ವಹಿಸಿದ್ದರು.

dhoni | ಅಂದು ಧೋನಿ ಸರಿ ಎಂದರು ಕೂಡ ಒಪ್ಪಿಕೊಳ್ಳದೇ ಇಂದು ಪಶ್ಚತ್ತಾಪ ಪಡುತ್ತಿರುವ ಬಾಲಿವುಡ್ ಬೆಡಗಿ ಯಾರು ಗೊತ್ತೇ?
ಅಂದು ಧೋನಿ ಸರಿ ಎಂದರು ಕೂಡ ಒಪ್ಪಿಕೊಳ್ಳದೇ ಇಂದು ಪಶ್ಚತ್ತಾಪ ಪಡುತ್ತಿರುವ ಬಾಲಿವುಡ್ ಬೆಡಗಿ ಯಾರು ಗೊತ್ತೇ? 2

ನಿಮಗೊಂದು ವಿಷಯ ಗೊತ್ತಾ ಗೆಳೆಯರೇ ದಿಶಾ ಪಟಾನಿ ಅವರಿಗಿಂತ ಮೊದಲು ಈ ಪಾತ್ರಕ್ಕಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಅವಕಾಶ ಹೋಗಿತ್ತು ಆದರೆ ಅವರು ತಿರಸ್ಕರಿಸಿದ ಕಾರಣದಿಂದಾಗಿ ದಿಶಾ ಪಟಾನಿ ಅವರಿಗೆ ಅವಕಾಶ ಸಿಕ್ಕಿತ್ತು. ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟ ಆಗಿರುವ ರಾಮ್ ಚರಣ್ ಅವರ ಸಿನಿಮಾಗಾಗಿ ನಟಿಸಲು ಡೇಟ್ಸ್ ಕ್ಲಾಶ್ ಆದ ಕಾರಣದಿಂದಾಗಿ ಈ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಇಂಟರ್ವ್ಯೂನಲ್ಲಿ ರಾಕುಲ್ ಪ್ರೀತ್ ಸಿಂಗ್ ರವರು ಧೋನಿ ರವರ ಗರ್ಲ್ಫ್ರೆಂಡ್ ಪಾತ್ರದಲ್ಲಿ ನಟಿಸಲು ಉತ್ತಮ ಅವಕಾಶ ಸಿಕ್ಕಿದ್ದರೂ ಕೂಡ ನಾನು ಕೈಚಲ್ಲಿ ಕೊಂಡೆ ಎಂಬುದಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ.

Comments are closed.