ಅಂದು ಸಿಂಗಲ್ ಕೊಡದೆ ಬಿಲ್ಡ್ ಅಪ್ ಕೊಟ್ಟಿದ್ದ ಹಾರ್ಧಿಕ್ ಪಾಂಡ್ಯಗೆ ಸರಿಯಾದ ಉತ್ತರ ನೀಡಿದ ದಿನೇಶ್. ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೂರು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ದಿನೇಶ್ ಕಾರ್ತಿಕ್ ರವರು ಎಂಟ್ರಿ ನೀಡಲು ಪಟ್ಟಂತಹ ಪರಿಶ್ರಮ ನಮಗೆಲ್ಲ ತಿಳಿದಿದೆ. ಆರ್ಸಿಬಿ ತಂಡದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಆಗಿ ಫಿಶರ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುವುದರ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಮ್ಮೆ ದಿನೇಶ್ ಕಾರ್ತಿಕ್ ರವರು ಮರಳಿದ್ದರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ದಿನೇಶ್ ಕಾರ್ತಿಕ್ ರವರು ಆಯ್ಕೆಯಾದ ನಂತರ ತಂಡದಲ್ಲಿ ಅವರಿಗೆ ಸರಿಯಾದ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ನೀವು ಈ ಹಿಂದೆ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಗಮನಿಸಿದರೆ ಆ ಸಂದರ್ಭದಲ್ಲಿ ಪಂದ್ಯದ ಕೊನೆಯ ಓವರಿನಲ್ಲಿ ಐದನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ರವರು ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ದಿನೇಶ್ ಕಾರ್ತಿಕ್ ರವರಿಗೆ ಬ್ಯಾಟಿಂಗನ್ನು ನೀಡದೆ ಸ್ಟ್ರೈಕ್ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಇದು ಸಾಕಷ್ಟು ಸುದ್ದಿಯಾಗಿದ್ದು ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ರವರ ನಡುವೆ ಸಮನ್ವಯದ ಕೊರತೆ ಎಂಬುದಾಗಿ ಎಲ್ಲರೂ ಮಾತನಾಡಿಕೊಂಡಿದ್ದರು ಹಾಗೂ ದಿನೇಶ್ ಕಾರ್ತಿಕ್ ರವರ ಮೇಲೆ ಹಾರ್ದಿಕ್ ಪಾಂಡ್ಯ ರವರು ಅನುಮಾನ ಹೊಂದಿದ್ದರು ಎಂಬುದಾಗಿ ಪರೋಕ್ಷವಾಗಿ ಈ ಘಟನೆ ಸಾಕ್ಷೀಕರಿಸಿತ್ತು. ಆದರೆ ನಾಲ್ಕನೇ ಪಂದ್ಯದಲ್ಲಿ ಈ ಅನುಮಾನಗಳಿಗೆ ದಿನೇಶ್ ಕಾರ್ತಿಕ್ ರವರು ಅತ್ಯುತ್ತಮವಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ನಾಲ್ಕನೇ ಪಂದ್ಯದಲ್ಲಿ ಕೂಡ 14ನೇ ಓವರ್ನಲ್ಲಿ ನಾಲ್ಕನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ರವರಿಗೆ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿತ್ತು ಹಾಗೂ ಅದಕ್ಕೆ ಅವರು ರೆಡಿ ಕೂಡ ಆಗಿದ್ದರು ಆದರೆ ಹಾರ್ದಿಕ್ ಪಾಂಡ್ಯ ರವರಿಂದ ಯಾವುದೇ ರೆಸ್ಪಾನ್ಸ್ ಸಿಗಲಿಲ್ಲ. ಇನ್ನು ಇದೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ರವರು ಕೇವಲ 27 ಎಸೆತಗಳಲ್ಲಿ ಬರೋಬ್ಬರಿ 55 ರನ್ನುಗಳನ್ನು ಬಾರಿಸುವ ಮೂಲಕ ಹಾರ್ದಿಕ್ ಪಾಂಡ್ಯ ರವರಿಗೆ ಪರೋಕ್ಷವಾಗಿಯೇ ಸರಿಯಾದ ರಿಪ್ಲೈ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರವರು 31 ಎಸೆತಗಳಲ್ಲಿ 46 ರನ್ನುಗಳನ್ನು ಬಾರಿಸಿದ್ದಾರೆ. ದಿನದಿಂದ ದಿನಕ್ಕೆ ದಿನೇಶ್ ಕಾರ್ತಿಕ್ ರವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿ ಎಲ್ಲರನ್ನೂ ಕೂಡ ಆಕರ್ಷಿಸುತ್ತಿದೆ.

Comments are closed.