ಏಷ್ಯಾ ಕಪ್ ನಲ್ಲಿ ಕೈ ಕೊಟ್ಟು ಹೊರಹೋಗಿರುವ ಜಡೇಜಾ ಕಡೆಯಿಂದ ಕಾದಿದಿಯೇ ಮತ್ತೊಂದು ಕಹಿ ಸುದ್ದಿ: ರಾಹುಲ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಿರುವ ಭಾರತೀಯ ಕ್ರಿಕೆಟ್ ತಂಡ ಈಗ ಮತ್ತೆ ಕೊನೆ ಹಂತದಲ್ಲಿ ಸೋತಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ. ಮೊದಲ ಏಷ್ಯಾ ಕಪ್ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ರವೀಂದ್ರ ಜಡೇಜಾ ಅವರ ಉಪಸ್ಥಿತಿಯಲ್ಲಿ ಅವರ ಬ್ಯಾಟಿಂಗ್ ಸಹಾಯದಿಂದಾಗಿ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿತ್ತು.

ಆದರೆ ರವೀಂದ್ರ ಜಡೇಜಾ ಇಂಜುರಿಯಿಂದಾಗಿ ತಂಡದಿಂದ ಹೊರಹೋದ ನಂತರ ಪಾಕಿಸ್ತಾನ ತಂಡದ ವಿರುದ್ಧ ಸೂಪರ್ ಫೋರ್ ಹಂತದಲ್ಲಿ ನಿನ್ನೆ ಭಾರತೀಯ ಕ್ರಿಕೆಟ್ ತಂಡ 5 ವಿಕೆಟ್ ಗಳ ಸೋಲನ್ನು ಕಂಡಿದೆ. ಹೀಗಾಗಿ ರವೀಂದ್ರ ಜಡೇಜಾ ಅವರ ಅನುಪಸ್ಥಿತಿ ತಂಡದಲ್ಲಿ ಕಾಡುತ್ತಿದೆ ಎನ್ನುವುದಂತೂ ಸುಳ್ಳಲ್ಲ. ಅದರಲ್ಲೂ ಈಗ ರವೀಂದ್ರ ಜಡೇಜಾ ಅವರ ಇಂಜುರಿಯ ಅಪ್ಡೇಟ್ ಅನ್ನು ಕೋಚ್ ರಾಹುಲ್ ದ್ರಾವಿಡ್ ನೀಡಿದ್ದಾರೆ. ಮೊಣಕಾಲು ಇಂಜುರಿಗೆ ಒಳಗಾಗಿರುವ ರವೀಂದ್ರ ಜಡೇಜಾ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ.

rahul ravindra | ಏಷ್ಯಾ ಕಪ್ ನಲ್ಲಿ ಕೈ ಕೊಟ್ಟು ಹೊರಹೋಗಿರುವ ಜಡೇಜಾ ಕಡೆಯಿಂದ ಕಾದಿದಿಯೇ ಮತ್ತೊಂದು ಕಹಿ ಸುದ್ದಿ: ರಾಹುಲ್ ಹೇಳಿದ್ದೇನು ಗೊತ್ತೇ??
ಏಷ್ಯಾ ಕಪ್ ನಲ್ಲಿ ಕೈ ಕೊಟ್ಟು ಹೊರಹೋಗಿರುವ ಜಡೇಜಾ ಕಡೆಯಿಂದ ಕಾದಿದಿಯೇ ಮತ್ತೊಂದು ಕಹಿ ಸುದ್ದಿ: ರಾಹುಲ್ ಹೇಳಿದ್ದೇನು ಗೊತ್ತೇ?? 2

ಅದರಲ್ಲೂ ವಿಶೇಷವಾಗಿ ಕೆಲವೊಂದು ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಅವರು ಅನಿರ್ದಿಷ್ಟಾವಧಿ ವಿರಾಮಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಅವರು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ತಂಡದಲ್ಲಿ ಲಭ್ಯವಿರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಇದರ ಬಗ್ಗೆ ಈಗಲೇ ಏನು ಹೇಳುವ ಸಾಧ್ಯತೆ ಇಲ್ಲ, ಸದ್ಯಕ್ಕೆ ತಂಡದ ಆರೈಕೆಯಲ್ಲಿ ರವೀಂದ್ರ ಜಡೆಗೆ ಇದ್ದಾರೆ ಎಂಬುದಾಗಿ ಹೇಳಿದ್ದಾರೆ.

Comments are closed.