ಶನಿಯ ಕೃಪೆ ಪಡೆಯಬೇಕು ಎಂದರೆ ಬೇರೆ ಏನು ಬೇಡ, ಇದೊಂದು ಹೂ ಅರ್ಪಿಸಿ ಸಾಕು: ಶನಿ ದೇವರ ಕೃಪೆ ನಿಮಗೆ ದೊರೆಯುತ್ತದೆ.

ನಮಸ್ಕಾರ ಸ್ನೇಹಿತರೆ ಪುರಾಣದಲ್ಲಿ ಶನಿದೇವರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಕೆಲವರು ಶನಿದೇವ ಕೇವಲ ನಮಗೆ ಕಷ್ಟವನ್ನು ನೀಡುತ್ತಾನೆ ಎಂಬುದಾಗಿ ಭಾವಿಸಿರುತ್ತಾರೆ. ಆದರೆ ಶನಿದೇವ ನಾವು ಮಾಡುವ ಕೆಲಸಕ್ಕೆ ಅನುಗುಣವಾಗಿ ನಮಗೆ ಫಲವನ್ನು ನೀಡುತ್ತಾರೆ. ನಾವು ಕೆಟ್ಟ ಕೆಲಸ ಮಾಡಿದರೆ ಶನಿದೇವರ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ. ನಾವು ಒಳ್ಳೆಯ ಕೆಲಸ ಮಾಡಿದರೆ ಶನಿದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗುತ್ತದೆ. ಕೇವಲ ಮನುಷ್ಯರು ಮಾತ್ರವಲ್ಲದೆ ದೇವಾನುದೇವತೆಗಳು ಕೂಡ ಶನಿದೇವರ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.

ಇನ್ನು ಶನಿವಾರ ದಿನದಂದು ಶನಿದೇವನನ್ನು ಪೂಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶನಿ ದೇವನನ್ನು ಒಲಿಸಿಕೊಳ್ಳಲು ಸೂರ್ಯ ಉಗಮಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಪೂಜೆ ಮಾಡಬೇಕು ಎಂಬುದಾಗಿ ಹೇಳುತ್ತಾರೆ. ಇನ್ನು ಪುರಾಣ ಗ್ರಂಥಗಳ ಪ್ರಕಾರ ಶನಿದೇವನನ್ನು ಶನಿವಾರದ ದಿನದಂದು ಪೂಜಿಸಿದ ನಂತರ ಆತನ ನೆಚ್ಚಿನ ಹೂವನ್ನು ಆತನಿಗೆ ಅರ್ಪಿಸಿದರೆ ಪ್ರಸನ್ನಗೊಳ್ಳುತ್ತಾನೆ ಹಾಗೂ ನಿಮ್ಮ ಮನು ಅಭಿಲಾಷೆಗಳನ್ನು ಈಡೇರಿಸುತ್ತಾನೆ ಎಂಬುದಾಗಿ ಉಲ್ಲೇಖವಾಗಿದೆ. ಹಾಗಿದ್ದರೆ ಶನಿದೇವನ ಇಷ್ಟವಾದ ಪುಷ್ಪ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

shani krupe | ಶನಿಯ ಕೃಪೆ ಪಡೆಯಬೇಕು ಎಂದರೆ ಬೇರೆ ಏನು ಬೇಡ, ಇದೊಂದು ಹೂ ಅರ್ಪಿಸಿ ಸಾಕು: ಶನಿ ದೇವರ ಕೃಪೆ ನಿಮಗೆ ದೊರೆಯುತ್ತದೆ.
ಶನಿಯ ಕೃಪೆ ಪಡೆಯಬೇಕು ಎಂದರೆ ಬೇರೆ ಏನು ಬೇಡ, ಇದೊಂದು ಹೂ ಅರ್ಪಿಸಿ ಸಾಕು: ಶನಿ ದೇವರ ಕೃಪೆ ನಿಮಗೆ ದೊರೆಯುತ್ತದೆ. 2

ಶನಿವಾರದ ಪೂಜೆಯ ದಿನದಂದು ಶನಿ ದೇವನಿಗೆ ವಿಶೇಷವಾಗಿ ಕಡು ನೀಲಿ ಬಣ್ಣದ ಅಂದರೆ ಅಪರಾಜಿತ ಹೂಗಳನ್ನು ಶನಿದೇವನಿಗೆ ಅರ್ಪಿಸಿದರೆ ಆತ ಪ್ರಸನ್ನ ಗೊಳ್ಳುತ್ತಾನೆ ಎಂಬುದಾಗಿ ಉಲ್ಲೇಖವಾಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಸಾಸಿವೆ ಎಣ್ಣೆಯ ದೀಪವನ್ನು ಕೂಡ ಹಚ್ಚಿದರೆ ಶನಿದೇವ ನಿಮ್ಮ ಕೋರಿಕೆಯನ್ನು ಪೂರೈಸುತ್ತಾನೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಆ ದಿನ ದಾನ ಕೂಡ ಮಾಡಿದರೆ ಶನಿದೇವ ಪ್ರಸನ್ನಗೊಳ್ಳುತ್ತಾನೆ. ಅದರಲ್ಲೂ ವಿಶೇಷವಾಗಿ ಹನುಮಾನ್ ಭಕ್ತರ ಗೊಡವೆಗೆ ಶನಿದೇವ ಹೋಗುವುದಿಲ್ಲ ಹೀಗಾಗಿ ಶನಿವಾರದ ದಿನದಂದು ಹನುಮಾನ್ ಚಾಲೀಸವನ್ನು ಪಠಿಸಿದರೆ ಸಾಕು ಶನಿದೇವನ ಕೆಟ್ಟ ಪ್ರಭಾವ ಬೀರುವುದಿಲ್ಲ ಎಂಬುದಾಗಿ ಕೂಡ ತಿಳಿದು ಬಂದಿದೆ.

Comments are closed.