ಪೂಜಾ ಗಾಂಧಿ ರವರು ಇಷ್ಟು ವಯಸ್ಸಾಗಿ ವಯಸ್ಸು ಮೀರಿ ಹೋಗುತ್ತಿದ್ದರೂ ಮದುವೆ ಯಾಕೆ ಆಗಿಲ್ಲ ಗೊತ್ತೇ?? ಕಾರಣ ಏನಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲನೇ ಚಿತ್ರದಿಂದಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ನಟಿಯರಲ್ಲಿ ಪೂಜಾ ಗಾಂಧಿ ಕೂಡ ಒಬ್ಬರು. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ಮೊದಲ ಸಿನಿಮಾದಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿ ಪೂಜಾ ಗಾಂಧಿ ಅವರ ಜನಪ್ರಿಯತೆ ಎನ್ನುವುದು ಯಾವ ಸ್ಟಾರ್ ನಟಿಗೂ ಕೂಡ ಕಡಿಮೆ ಇಲ್ಲದಂತಿತ್ತು. ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ತೆರೆಯನ್ನು ಹಂಚಿಕೊಳ್ಳುವ ಅವಕಾಶ ಅವರಿಗೆ ಸಾಲಿನಲ್ಲಿ ಕಂಡುಬಂದಿತ್ತು.

ನಟಿಸಿದ ಮೊದಲ ಕನ್ನಡ ಸಿನಿಮಾ ಮುಂಗಾರು ಮಳೆ ಬರೋಬ್ಬರಿ ಐವತ್ತು ಕೋಟಿ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಅವರಿಗೆ ಅವಕಾಶಗಳ ಸುರಿಮಳೆಯನ್ನೇ ಸುರಿಸುವಂತೆ ಮಾಡಿತ್ತು. ಎಲ್ಲರೂ ಅವರನ್ನು ಮಳೆ ಹುಡುಗಿ ಎನ್ನುವುದಾಗಿ ಕರೆಯಲು ಪ್ರಾರಂಭಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಬರೋಬ್ಬರಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಜಯ್ ರಾವ್ ಅವರಂತಹ ಸ್ಟಾರ್ ನಟರೊಂದಿಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಬ್ಬ ರಾಜಕೀಯ ಮುಖಂಡನ ಜೊತೆಗೆ ಎಂಗೇಜ್ಮೆಂಟ್ ಕೂಡ ಆಗಿತ್ತು. ನಂತರ ಆ ಎಂಗೇಜ್ಮೆಂಟ್ ಮುರಿದು ಬಿದ್ದಿತ್ತು. ಪೂಜಾ ಗಾಂಧಿ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು.

pooja gandhi | ಪೂಜಾ ಗಾಂಧಿ ರವರು ಇಷ್ಟು ವಯಸ್ಸಾಗಿ ವಯಸ್ಸು ಮೀರಿ ಹೋಗುತ್ತಿದ್ದರೂ ಮದುವೆ ಯಾಕೆ ಆಗಿಲ್ಲ ಗೊತ್ತೇ?? ಕಾರಣ ಏನಂತೆ ಗೊತ್ತೆ??
ಪೂಜಾ ಗಾಂಧಿ ರವರು ಇಷ್ಟು ವಯಸ್ಸಾಗಿ ವಯಸ್ಸು ಮೀರಿ ಹೋಗುತ್ತಿದ್ದರೂ ಮದುವೆ ಯಾಕೆ ಆಗಿಲ್ಲ ಗೊತ್ತೇ?? ಕಾರಣ ಏನಂತೆ ಗೊತ್ತೆ?? 2

ಅದಾದ ನಂತರ ಸ್ವಲ್ಪ ಸಮಯಗಳ ಕಾಲ ಚಿತ್ರರಂಗದಿಂದ ದೂರವಿದ್ದ ಪೂಜಾ ಗಾಂಧಿ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ. ಈಗಾಗಲೇ ಪೂಜಾ ಗಾಂಧಿ ಅವರಿಗೆ 38 ವರ್ಷ ವಯಸ್ಸಾಗಿದೆ. ಎಲ್ಲಾ ನಟಿಯರಿಗೂ ಎದುರಾಗುವಂತಹ ಪ್ರಶ್ನೆಯ ಹಾಗೆ ಪೂಜಾ ಗಾಂಧಿ ಅವರಿಗೂ ಕೂಡ ಇನ್ನೂ ಯಾಕೆ ಮದುವೆ ಆಗಿಲ್ಲ ಎಂಬುದಾಗಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಪೂಜಾ ಗಾಂಧಿ ಸದ್ಯಕ್ಕೆ ನಾನು ಸಿಂಗಲ್ ಆಗಿ ಸಂತೋಷದಲ್ಲಿದ್ದೇನೆ ಮುಂದೆ ಇಂತಹ ಸನ್ನಿವೇಶ ಎದುರಾದರೆ ಖಂಡಿತವಾಗಿ ನಾನು ನಿಮಗೆ ತಿಳಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

Comments are closed.