ಐಪಿಎಲ್ ಗೆ ಇನ್ನು ಹಲವಾರು ತಿಂಗಳು ಇರುವಾಗಲೇ ಮಹತ್ವದ ಘೋಷಣೆ ಮಾಡಿದ ಚೆನ್ನೈ: ಧೋನಿ ಫ್ಯಾನ್ಸ್ ಗೆ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಕಳೆದ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಹೇಂದ್ರ ಸಿಂಗ್ ಧೋನಿ ರವರು ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ವರ್ಗಾಯಿಸಿದ್ದರು. ರವೀಂದ್ರ ಜಡೇಜಾ ಅವರಿಗೆ ನಾಯಕತ್ವವನ್ನು ವರ್ಗಾವಣೆ ಮಾಡಿದ ನಂತರ ಅವರ ಪ್ರದರ್ಶನದಲ್ಲಿ ಅಷ್ಟೊಂದು ಹೇಳಿಕೊಳ್ಳುವ ಪ್ರದರ್ಶನ ಕಂಡುಬಂದಿರಲಿಲ್ಲ. ಎಲ್ಲದಕ್ಕಿಂತ ಪ್ರಮುಖವಾಗಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡ ಅತ್ಯಂತ ಕಳಪೆ ತಂಡವಾಗಿ ಕಾಣಿಸಿಕೊಂಡಿತ್ತು.

ಕಂಬ್ಯಾಕ್ ಹಾಗೂ ಸತತವಾಗಿ ಗೆಲುವಿನ ಪ್ರತೀಕವಾಗಿದ್ದ ಚೆನ್ನೈ ಸೂಪರ್ ಕಿಂಗ್ ತಂಡ ರವೀಂದ್ರ ಜಡೇಜಾ ಅವರ ನಾಯಕತ್ವದಲ್ಲಿ ಸಂಪೂರ್ಣ ಶರಣಾಗಿತ್ತು. ಇದರಿಂದಾಗಿ ಮತ್ತೆ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ವಹಿಸಲಾಗಿತ್ತು. ಈ ಗೊಂದಲದ ನಡುವೆ ಚೆನ್ನೈ ಸೂಪರ್ ಸಿಂಗ್ ತಂಡ ಕಳೆದ ಬಾರಿ ಐಪಿಎಲ್ ನಲ್ಲಿ ಗೊಂದಲದಿಂದಾಗಿ ತನ್ನ ನಿಜವಾದ ರೂಪವನ್ನೇ ಕಳೆದುಕೊಂಡಿತ್ತು ಎಂದು ಹೇಳಬಹುದಾಗಿದೆ. ಇನ್ನು ಮತ್ತೆ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಯಕತ್ವವನ್ನು ವಹಿಸಿದ ನಂತರ ರವೀಂದ್ರ ಜಡೇಜಾ ಅವರು ಇಂಜುರಿಯ ನೆಪದಲ್ಲಿ ತಂಡದಿಂದ ಹೊರ ಹೋಗಿ ಮತ್ತೆ ಟೂರ್ನಮೆಂಟನ್ನು ಆಡಲೇ ಇಲ್ಲ. ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೂಡ ಮತ್ತೆ ರವೀಂದ್ರ ಜಡೇಜಾ ಆಡುವುದು ಅನುಮಾನ ಎಂಬುದಾಗಿ ಹೇಳಲಾಗುತ್ತಿದ್ದು ಈ ಬಾರಿ ಹರಾಜಿಗೆ ತಮ್ಮನ್ನು ತಾವು ಕಾದರಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೂಡ ಕೇಳಿ ಬರುತ್ತಿದೆ.

csk dhoni | ಐಪಿಎಲ್ ಗೆ ಇನ್ನು ಹಲವಾರು ತಿಂಗಳು ಇರುವಾಗಲೇ ಮಹತ್ವದ ಘೋಷಣೆ ಮಾಡಿದ ಚೆನ್ನೈ: ಧೋನಿ ಫ್ಯಾನ್ಸ್ ಗೆ ಸಿಹಿ ಸುದ್ದಿ.
ಐಪಿಎಲ್ ಗೆ ಇನ್ನು ಹಲವಾರು ತಿಂಗಳು ಇರುವಾಗಲೇ ಮಹತ್ವದ ಘೋಷಣೆ ಮಾಡಿದ ಚೆನ್ನೈ: ಧೋನಿ ಫ್ಯಾನ್ಸ್ ಗೆ ಸಿಹಿ ಸುದ್ದಿ. 2

ಒಟ್ಟಾರೆಯಾಗಿ ಹೇಳುವುದಾದರೆ ಜಡೇಜ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಯಾವುದು ಕೂಡ ಸರಿ ಇಲ್ಲ ಎಂದು ಹೇಳಬಹುದು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ನಾಯಕನಾಗಿ ಯಾರು ತಂಡವನ್ನು ಮುನ್ನಡೆಸಬಹುದು ಎಂಬ ಗೊಂದಲ ಅಭಿಮಾನಿಗಳಿಗೆ ಸಾಕಷ್ಟು ಕಾಡಿತ್ತು. ಕೊನೆಗೂ ಇದಕ್ಕೆ ಸರಿಯಾದ ಉತ್ತರ ದೊರಕಿದೆ. ಈ ಉತ್ತರವನ್ನು ನೀಡಿರುವುದು ತಂಡದ ಸಿಇಒ ಆಗಿರುವ ಕಾಶಿ. ಮಹೇಂದ್ರ ಸಿಂಗ್ ಧೋನಿ ಅವರೇ ತಂಡದ ನಾಯಕನಾಗಿ ಮುಂದಿನ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಅವರು ದೃಢಪಡಿಸಿದ್ದಾರೆ. ಆದರೆ ಜಡೇಜಾ ಅವರ ಬಗ್ಗೆ ಯಾವುದೇ ಅಧಿಕೃತ ವಿಚಾರವನ್ನು ಹೊರಹಾಕಿಲ್ಲ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರ ದೊರಕಲಿವೆ.

Comments are closed.