ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡುಪ್ಲೆಸಿಸ್. ನಡೆದಿದ್ದೇನು ಗೊತ್ತೆ??

ನಮಸ್ಕಾರ ಸ್ನೇಹಿತರೇ ಪ್ರತಿಬಾರಿ ಐಪಿಎಲ್ ಬಂದಾಗಲೂ ಯಾವ ತಂಡದ ಅಭಿಮಾನಿಗಳು ಕಾತರರಾಗಿರುತ್ತಾರೋ ಇಲ್ಲವೋ ಗೊತ್ತಿಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಂತೂ ಪ್ರತಿ ಬಾರಿ ಈ ಬಾರಿ ನಾವು ಖಂಡಿತವಾಗಿ ಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯೊಂದಿಗೆ ಮತ್ತೆ ನವ ಚೈತನ್ಯದಿಂದ ತಮ್ಮ ತಂಡಕ್ಕೆ ಬೆಂಬಲ ನೀಡಲು ಸನ್ನದ್ಧರಾಗಿರುತ್ತಾರೆ. ನಿಜಕ್ಕೂ ಕೂಡ ಇಡೀ ವಿಶ್ವದಲ್ಲೇ ಇಂತಹ ಅಭಿಮಾನಿಗಳನ್ನು ಹೊಂದಿರುವಂತಹ ತಂಡ ಯಾವುದು ಇಲ್ಲ ಎಂದು ಹೇಳಬಹುದಾಗಿದೆ.

ಪರಭಾಷಿಗರು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರೆ ಈ ಸಲ ಕಪ್ ನಮ್ಮದೇ ಎನ್ನುವ ಕನ್ನಡ ವಾಕ್ಯವನ್ನು ಹೇಳುವಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದೇವೆ. ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ಸ್ಥಾನದಿಂದ ತಂಡದ ನೆಚ್ಚಿನ ಆಟಗಾರನಾಗಿರುವ ವಿರಾಟ್ ಕೊಹ್ಲಿ ರವರು ಕೆಳಗಿಳಿದಿದ್ದಾರೆ. ಅವರ ಸ್ಥಾನವನ್ನು ಈಗ ಸೌತ್ ಆಫ್ರಿಕಾ ಮೂಲದ ಡುಪ್ಲೆಸಿಸ್ ರವರು ತುಂಬಿದ್ದಾರೆ.

rcb duplesis | ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡುಪ್ಲೆಸಿಸ್. ನಡೆದಿದ್ದೇನು ಗೊತ್ತೆ??
ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡುಪ್ಲೆಸಿಸ್. ನಡೆದಿದ್ದೇನು ಗೊತ್ತೆ?? 3

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಮ್ಯಾನೇಜ್ಮೆಂಟ್ ಜೆರ್ಸಿ ಹಾಗೂ ನಾಯಕನ ರಿವೀಲ್ ಅನ್ನು ಅದ್ದೂರಿಯಾಗಿ ಬೆಂಗಳೂರಿನಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಡಿಸೈನ್ ಹೊಂದಿರುವ ಜೆರ್ಸಿ ಹಾಗೂ ಡುಪ್ಲೆಸಿಸ್ ರವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಎನ್ನುವುದಾಗಿ ಘೋಷಣೆ ಮಾಡಲಾಗಿತ್ತು. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿ ಸೀಸನ್ ನಲ್ಲಿ ಕೂಡ ಟಾಪ್ ರನ್ ಸ್ಕೋರರ್ ಆಗಿ ಮೂಡಿ ಬರುತ್ತಿದ್ದರು. ಈ ಬಾರಿ ಅವರ ಮುಂದಾಳತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸಾಕಷ್ಟು ಯಶಸ್ಸನ್ನು ಸಾಧಿಸಲಿದೆ ಎಂಬುದಾಗಿ ಎಲ್ಲರೂ ಭಾವಿಸಿದ್ದಾರೆ.

ಇನ್ನು ಡುಪ್ಲೆಸಿಸ್ ರವರ ವಿಚಾರಕ್ಕೆ ಬರುವುದಾದರೆ ಅವರಿಗೆ ಈಗಾಗಲೇ ಸೌತ್ ಆಫ್ರಿಕಾದ ಅಂತರಾಷ್ಟ್ರೀಯ ತಂಡವನ್ನು ಕೂಡ ಮುನ್ನಡೆಸಿರುವಂತಹ ಜವಾಬ್ದಾರಿಯ ಅನುಭವ ಇದೆ ಎಂದು ಹೇಳಬಹುದಾಗಿದೆ. ಹೀಗಾಗಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುವುದು ಅವರಿಗೆ ಕಷ್ಟಕರ ಕೆಲಸ ವಾಗಿರುವುದಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಅವರಿಗೆ ಈಗಾಗಲೇ ನಾಯಕತ್ವದ ಜವಾಬ್ದಾರಿಯನ್ನು ಅರಿತಿರುವ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ದಿನೇಶ್ ಕಾರ್ತಿಕ್ ರವರು ಕೂಡ ಸಾಥ್ ನೀಡಲಿದ್ದಾರೆ.

ಇನ್ನು ಐಪಿಎಲ್ ಆರಂಭಕ್ಕೂ ಮುನ್ನ ಡುಪ್ಲೆಸಿಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಳಿ ಕ್ಷಮೆಯನ್ನು ಕೇಳಿದ್ದಾರೆ. ಇದೇನಪ್ಪಾ ಐಪಿಎಲ್ ಆರಂಭಕ್ಕೂ ಮುನ್ನವೇ ಕ್ಷಮೆ ಕೇಳಿದ್ದು ಏನು ಆಗಿದೆ ಎಂಬುದಾಗಿ ನೀವು ಕೇಳಬಹುದು. ಅದಕ್ಕೊಂದು ಕಾರಣವಿದೆ ಅದೇನೆಂಬುದು ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ನಿಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯೂ ಕೂಡ ಮಹಾಮಾರಿಯ ಕಾರಣದಿಂದಾಗಿ ಐಪಿಎಲ್ ಪಂದ್ಯಾಟಗಳು ಮುಂಬೈಗೆ ಸ್ಥಳಾಂತರವಾಗಿ. ಇದೇ ಕಾರಣದಿಂದಾಗಿ ನಾಯಕನಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಸಮ್ಮುಖದಲ್ಲಿ ಪಂದ್ಯಾಟಗಳನ್ನು ಆಟವಾಡಲು ಆಗುತ್ತಿಲ್ಲ ಪಂದ್ಯಗಳು ಮುಂಬೈನಲ್ಲಿ ನಡೆಯುತ್ತಿರುವುದರಿಂದಾಗಿ ನಿಮ್ಮ ಮುಂದೆ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಕ್ಷಮೆ ಕೇಳಿದ್ದಾರೆ. ಈ ಸಂದರ್ಭದಲ್ಲಿ ಡುಪ್ಲೆಸಿಸ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳನ್ನು ಇಡೀ ಜಗತ್ತಿನಲ್ಲಿಯೇ ಬೆಸ್ಟ್ ಎಂಬುದಾಗಿ ಹೇಳಿದ್ದಾರೆ.

rcb duplesis 2 | ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡುಪ್ಲೆಸಿಸ್. ನಡೆದಿದ್ದೇನು ಗೊತ್ತೆ??
ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಡುಪ್ಲೆಸಿಸ್. ನಡೆದಿದ್ದೇನು ಗೊತ್ತೆ?? 4

ಇಷ್ಟು ಮಾತ್ರವಲ್ಲದೆ ತಂಡದ ಕುರಿತಂತೆ ಈಗಾಗಲೇ ತನ್ನ ಗೆಳೆಯ ನಾಗಿರುವ ಹಾಗೂ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿರುವ ಡಿವಿಲಿಯರ್ಸ್ ಅವರ ಬಳಿ ಕೇಳಿ ತಿಳಿದು ಕೊಂಡಿದ್ದಾರಂತೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಮ್ಮೆಗೆ ದೊಡ್ಡಮಟ್ಟದ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ ಇಲ್ಲವೋ ಗೊತ್ತಿಲ್ಲ ಆದರೆ ಪ್ರತಿಯೊಂದು ಪಂದ್ಯವನ್ನು ಕೂಡ ವಿಶೇಷವಾಗಿ ತೆಗೆದುಕೊಂಡು ಗೆಲ್ಲಲು ಪ್ರಯತ್ನಿಸುತ್ತೇವೆ ಎಂಬುದಾಗಿ ಡುಪ್ಲೆಸಿಸ್ ಅವರು ಹೇಳಿದ್ದಾರೆ.

Comments are closed.