ರಾಮಾಚಾರಿ ಸಿನಿಮಾ ಭರ್ಜರಿ ಯಶಸ್ಸು ಪಡೆದರೂ ರವಿಚಂದ್ರನ್ ಮತ್ತು ಮಾಲಾಶ್ರೀ ಮತ್ತೆ ಜೋಡಿಯಾಗಿ ಕಾಣಿಸಲಿಲ್ಲ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಒಂದು ಕಾಲದ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಮಾಲಾಶ್ರೀ ನಟನೆಯ ರಾಮಾಚಾರಿ ಚಿತ್ರ ನಿಮಗೆಲ್ಲರಿಗೂ ನೆನಪಿರಬಹುದು. ಇಂದಿಗೂ ಹಚ್ಚ ಹಸುರಾಗಿರುವ ರಾಮಾಚಾರಿ ಸಿನಿಮಾ ಜನರನ್ನ ಕಾಡುವಂತಹ ಕಥೆಯನ್ನ ಹೊಂದಿತ್ತು. ಅದರಲ್ಲಿರುವ ಹಾಡುಗಳಾಗಲಿ, ಆ ಭಾವನೆಗಳನ್ನು ಅಭಿವ್ಯಕ್ತ ಪಡಿಸಿದ ರೀತಿಯಾಗಿರಲಿ ಎಂದೆಂದೂ ಮರೆಯುವಂಥದ್ದಲ್ಲ.

ramachari kannada movie | ರಾಮಾಚಾರಿ ಸಿನಿಮಾ ಭರ್ಜರಿ ಯಶಸ್ಸು ಪಡೆದರೂ ರವಿಚಂದ್ರನ್ ಮತ್ತು ಮಾಲಾಶ್ರೀ ಮತ್ತೆ ಜೋಡಿಯಾಗಿ ಕಾಣಿಸಲಿಲ್ಲ ಯಾಕೆ ಗೊತ್ತೇ??
ರಾಮಾಚಾರಿ ಸಿನಿಮಾ ಭರ್ಜರಿ ಯಶಸ್ಸು ಪಡೆದರೂ ರವಿಚಂದ್ರನ್ ಮತ್ತು ಮಾಲಾಶ್ರೀ ಮತ್ತೆ ಜೋಡಿಯಾಗಿ ಕಾಣಿಸಲಿಲ್ಲ ಯಾಕೆ ಗೊತ್ತೇ?? 3

ರಾಮಾಚಾರಿಯಲ್ಲಿ ಒಂದಾದ ರವಿಚಂದ್ರನ್ ಹಾಗೂ ಮಾಲಾಶ್ರೀ ಜೋಡಿಯನ್ನು ಜನ ಬಹುವಾಗಿ ಮೆಚ್ಚಿಕೊಂಡರು. ಸ್ನೇಹಿತರೆ, ಸಾಮಾನ್ಯವಾಗಿ ಒಂದು ಚಿತ್ರದಲ್ಲಿ ನಟಿಸಿದ್ದ ಜೋಡಿ ಇಷ್ಟವಾದರೆ, ಆ ಜೋಡಿಯ ಒಂದು ಸಿನಿಮಾ ಹಿಟ್ ಆದರೆ ಮತ್ತೆ ಅವರನ್ನ ಜೊತೆಯಾಗಿ ತೆರೆ ಮೇಲೆ ನೋಡಲು ಪ್ರೇಕ್ಷಕ ಇಷ್ಟಪಡುತ್ತಾನೆ. ನಿರ್ಮಾಪಕರು ನಿರ್ದೇಶಕರು ಕೂಡ ಇಂತ ಜೋಡಿಯನ್ನು ಇಟ್ಟುಕೊಂಡು ಹಲವು ಚಿತ್ರಗಳನ್ನು ಮಾಡುತ್ತಾರೆ. ಹಾಗಾಗಿ ಇದೇ ರೀತಿಯ ನಿರೀಕ್ಷೆ ಮಾಲಾಶ್ರೀ ಮತ್ತು ರವಿಚಂದ್ರನ್ ಜೋಡಿಯ ಮೇಲೂ ಇಟ್ಟು. ಆದರೆ ರವಿಚಂದ್ರನ್ ಹಾಗೂ ಮಾಲಾಶ್ರೀ ವಿಷಯದಲ್ಲಿ ಮಾತ್ರ ಜನರ ಈ ನಿರೀಕ್ಷೆ ನನಸಾಗಲೆ ಇಲ್ಲ.

ಮಾಲಾಶ್ರೀ ಹಾಗು ರವಿಚಂದ್ರನ್, ರಾಮಾಚಾರಿ ಚಿತ್ರದ ನಂತರ ಮತ್ತೆ ಯಾವ ಚಿತ್ರದಲ್ಲಿಯೂ ಒಟ್ಟಾಗಿ ಅಭಿನಯಿಸಲಿಲ್ಲ ಯಾಕೆ ಎಂಬ ಪ್ರಶ್ನೆಗೆ ಹಲವರಿಗೆ ಇಂದಿಗೂ ಕಾಡುತ್ತಿರಬಹುದು. ಈ ಜೋಡಿ ಬೆಳ್ಳಿಯ ತೆರೆಯ ಮೇಲೆ ಮತ್ತೆ ಕಾಣಿಸಿಕೊಳ್ಳಲಿಲ್ಲ ಯಾಕಂದ್ರೆ, ಅಂದಿನ ಕಾಲಕ್ಕೆ ನಟಿ ಮಾಲಾಶ್ರೀ ಬಹುಬೇಡಿಕೆಯ ನಟಿ. ಅವರ ಕೈನಲ್ಲಿ ಎಷ್ಟು ಪ್ರಾಜೆಕ್ಟ್ ಗಳಿತ್ತು ಎಂದರೆ ದಿನದ 24 ಗಂಟೆಯೂ ಸಾಲುತ್ತಿರಲಿಲ್ಲ ಅವರಿಗೆ.

ಆದರೆ ನಟ, ನಿರ್ದೇಶಕ ವಿ. ರವಿಚಂದ್ರನ್ ಅವರು ತಮಿಳಿನ ಚಿತ್ರಕ್ಕೆ ರೀಮೇಕ್ ಹಕ್ಕನ್ನು ತಂದು ರಾಮಚಾರಿ ಚಿತ್ರ ಮಾಡಲು ಸಿದ್ಧರಾದಾಗ ನಟಿ ಮಾಲಾಶ್ರೀ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಈ ಚಿತ್ರ ಮಾಡಲು ಒಪ್ಪಿಕೊಳ್ಳುತ್ತಾರೆ. ಯಾಕಂದ್ರೆ ನಟಿ ಮಾಲಾಶ್ರೀ ಅವರಿಗೆ ರವಿಚಂದ್ರನ್ ಅವರನ್ನು ಕಂಡರೆ ಅಪಾರವಾದ ಗೌರವವಿತ್ತು. ಹಾಗಾಗಿ ಅವರೊಂದಿಗೆ ನಟಿಸುವುದು ತನಗೆ ಖುಷಿಯ ವಿಚಾರ ಎಂದು ಹೇಳಿಕೊಂಡಿದ್ದರು.

ಅಂತಿಮವಾಗಿ ರಾಮಾಚಾರಿ ಚಿತ್ರವು ಸೂಪರ್ ಹಿಟ್ ಎನಿಸುತ್ತದೆ. ಆದರೆ ಈ ಚಿತ್ರದ ಬಳಿಕ ರವಿಚಂದ್ರನ್ ಹಾಗೂ ಮಾಲಾಶ್ರೀ ಜೊತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಇದಕ್ಕೆ ಕಾರಣ ಮಾಲಾಶ್ರೀಯವರ ಬ್ಯುಸಿ ಶೆಡ್ಯೂಲ್ ಹಾಗೂ ರವಿಚಂದ್ರನ್ ಅವರ ಸಿನಿಮಾ ಬಗೆಗಿನ ದೃಷ್ಟಿಕೋನ, ಸಿನಿಮಾ ಬಗೆಗಿನ ಕಲ್ಪನೆಯೂ ಬೇರೆಯಾಗಿತ್ತು.

malashree | ರಾಮಾಚಾರಿ ಸಿನಿಮಾ ಭರ್ಜರಿ ಯಶಸ್ಸು ಪಡೆದರೂ ರವಿಚಂದ್ರನ್ ಮತ್ತು ಮಾಲಾಶ್ರೀ ಮತ್ತೆ ಜೋಡಿಯಾಗಿ ಕಾಣಿಸಲಿಲ್ಲ ಯಾಕೆ ಗೊತ್ತೇ??
ರಾಮಾಚಾರಿ ಸಿನಿಮಾ ಭರ್ಜರಿ ಯಶಸ್ಸು ಪಡೆದರೂ ರವಿಚಂದ್ರನ್ ಮತ್ತು ಮಾಲಾಶ್ರೀ ಮತ್ತೆ ಜೋಡಿಯಾಗಿ ಕಾಣಿಸಲಿಲ್ಲ ಯಾಕೆ ಗೊತ್ತೇ?? 4

ಹಾಗಾಗಿ ಇವರಿಬ್ಬರಿಗೂ ಸರಿಹೊಂದುವಂಥ ಸಮಯ ಹಾಗು ಸಿನಿಮಾ ಕಥೆ ಸಿಗಲಿಲ್ಲ. ನಂತರದಲ್ಲಿ ಮಾಲಾಶ್ರೀ ನಿರ್ಮಾಪಕ ರಾಮು ಅವರನ್ನು ಮದುವೆಯಾದ ಮೇಲೆ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇಂದಿಗೂ ಒಂದು ವಿಭಿನ್ನವಾದ ಕಥೆಯೊಂದಿಗೆ ವಿ ರವಿಚಂದ್ರನ್ ಹಾಗೂ ನಟಿ ಮಾಲಾಶ್ರೀ ತೆರೆಮೇಲೆ ಕಾಣಿಸಿಕೊಂಡರೆ ಪ್ರೇಕ್ಷಕ ಬಹುಶಃ ಖುಷಿಯಿಂದಲೆ ಸ್ವಾಗತಿಸುತ್ತೇನೆ ಎನ್ನಬಹುದು.

Comments are closed.