ಕೊನೆಗೂ ಬಯಲಾಯಿತು ಡುಪ್ಲೆಸಿಸ್ ನಾಯಕರಾದ ಕಾರಣ, ತೆರೆ ಹಿಂದೆ ನಡೆದ ಅಸಲಿ ಕಥೆ ಏನು ಗೊತ್ತೇ?? ಇವೆಲ್ಲ ಬೇಕಿತ್ತಾ??

ನಮಸ್ಕಾರ ಸ್ನೇಹಿತರೇ ಇಂದಿನಿಂದ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಟಾಟಾ ಐಪಿಎಲ್ 2022 ವಾಂಖೆಡೆ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ. ಐಪಿಎಲ್ ಬಂತೆಂದರೆ ಸಾಕು ಕ್ರಿಕೆಟ್ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

ಇನ್ನು ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಳೆ ಅಂದರೆ ಮಾರ್ಚ್ 27ರಂದು ಪಂಜಾಬ್ ತಂಡವನ್ನು ಎದುರಿಸಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ನಿಜವಾದ ಐಪಿಎಲ್ ಪ್ರಾರಂಭವಾಗುವುದು ನಾಳೆಯಿಂದ ಎಂದು ಹೇಳಬಹುದಾಗಿದೆ. ಇನ್ನು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತಂಡಕ್ಕೆ ನಾಯಕನಾಗಿ ಡುಪ್ಲೆಸಿಸ್ ರವರ ಎಂಟ್ರಿ ಕೂಡ ಆಗಿದೆ.

kohli duplesis rcb | ಕೊನೆಗೂ ಬಯಲಾಯಿತು ಡುಪ್ಲೆಸಿಸ್ ನಾಯಕರಾದ ಕಾರಣ, ತೆರೆ ಹಿಂದೆ ನಡೆದ ಅಸಲಿ ಕಥೆ ಏನು ಗೊತ್ತೇ?? ಇವೆಲ್ಲ ಬೇಕಿತ್ತಾ??
ಕೊನೆಗೂ ಬಯಲಾಯಿತು ಡುಪ್ಲೆಸಿಸ್ ನಾಯಕರಾದ ಕಾರಣ, ತೆರೆ ಹಿಂದೆ ನಡೆದ ಅಸಲಿ ಕಥೆ ಏನು ಗೊತ್ತೇ?? ಇವೆಲ್ಲ ಬೇಕಿತ್ತಾ?? 3

ವಿರಾಟ್ ಕೊಹ್ಲಿ ರವರು ನಾಯಕನ ಸ್ಥಾನದಿಂದ ಕೆಳಗಿಳಿದ ನಂತರ ನೇರವಾಗಿ ಡುಪ್ಲೆಸಿಸ್ ರವರನ್ನು ನಾಯಕರನ್ನಾಗಿ ಮಾಡಿಲ್ಲ. ಇದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಮ್ಯಾನೇಜ್ಮೆಂಟ್ ಹಲವಾರು ವಿಚಾರಗಳನ್ನು ಪರಿಶೀಲಿಸಿ ಕೂಡ ಅನಂತರ ನಿರ್ಧರಿಸಿ ಡುಪ್ಲೆಸಿಸ್ ರವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಹಾಗಿದ್ದರೆ ಡುಪ್ಲೆಸಿಸ್ ಅವರು ನಾಯಕನಾಗಿ ಆಯ್ಕೆಯಾಗಲು ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ವಿರಾಟ್ ಕೊಹ್ಲಿ ಅವರು ನಾಯಕನ ಸ್ಥಾನದಿಂದ ಕೆಳಗಿಳಿದಿರುವುದರಿಂದಾಗಿ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ತಂಡಕ್ಕೆ ಖಂಡಿತವಾಗಿ ಇದೆ. ಆಗ ಮೊದಲ ಆಯ್ಕೆಯಾಗಿ ಡುಪ್ಲೆಸಿಸ್ ರವರು ಕಾಣಿಸಿಕೊಳ್ಳುತ್ತಾರೆ ಅದಕ್ಕಾಗಿ ಅವರನ್ನು ಕೋಟಿ ಕೋಟಿ ಹಣ ಸುರಿದು ಖರೀದಿಸಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪ್ರಾರಂಭಿಕ ಕೆಲವು ಪಂದ್ಯಗಳಿಗೆ ತಂಡದ ಭರವಸೆಯ ಆಟಗಾರ ನಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ರವರು ಕಾಣಿಸಿಕೊಳ್ಳುವುದಿಲ್ಲ. ಯಾಕೆಂದರೆ ಇತ್ತೀಚೆಗಷ್ಟೇ ಭಾರತೀಯ ಮೂಲದ ಹುಡುಗಿಯನ್ನು ಮದುವೆ ಆಗಿದ್ದಾರೆ. ಇನ್ನೊಂದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೂಡ ಡುಪ್ಲೆಸಿಸ್ ರವರ ಆಗಮನದಿಂದಾಗಿ ಸರಿ ಹೊಂದಬಹುದಾಗಿದೆ.

ಹೌದು ಡುಪ್ಲೆಸಿಸ್ ಬ್ಯಾಟಿಂಗ್ ಹಾಗೂ ನಾಯಕನ ಜವಾಬ್ದಾರಿ ಎರಡನ್ನು ಕೂಡ ನಿಭಾಯಿಸಿದರೆ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ರವರ ಮೇಲಿನ ಬ್ಯಾಟಿಂಗ್ ಜವಾಬ್ದಾರಿ ಕೊಂಚಮಟ್ಟಿಗೆ ತಗ್ಗಬಹುದು. ಇನ್ನು ಡುಪ್ಲೆಸಿಸ್ ಇರುವವರು ಎಬಿ ಡಿವಿಲಿಯರ್ಸ್ ರವರ ಸ್ಥಾನವನ್ನು ಸರಿಯಾಗಿ ತುಂಬಬಲ್ಲರು ಯಾಕೆಂದರೆ ಆಫ್ರಿಕದಲ್ಲಿ ಇಬ್ಬರೂ ಕೂಡ ಜೊತೆಯಾಗಿ ಆಡಿಕೊಂಡಿದ್ದವರು. ಅನುಭವ ಈ ಎಲ್ಲಾ ಆಟಗಾರರಿಗಿಂತ ಹೆಚ್ಚಾಗಿ ಡ್ಯೂಟಿ ಸರೋವರ ಬಳಿ ಇದೆ ಎಂದರೆ ತಪ್ಪಾಗಲಾರದು.

ಇನ್ನು ಚೆನ್ನೈ ತಂಡದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ರವರ ಭರವಸೆಯ ಬ್ಯಾಟ್ಸ್ ಮ್ಯಾನ್ ಆಗಿ ಡುಪ್ಲೆಸಿಸ್ ರವರು ಕಾಣಿಸಿಕೊಂಡಿದ್ದರು ಹೀಗಾಗಿ ಅದೇ ಅನುಭವವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿನಿಯೋಗಿಸಿ ಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಕೂಡ ಇದೆ.

abd duplesis rcb | ಕೊನೆಗೂ ಬಯಲಾಯಿತು ಡುಪ್ಲೆಸಿಸ್ ನಾಯಕರಾದ ಕಾರಣ, ತೆರೆ ಹಿಂದೆ ನಡೆದ ಅಸಲಿ ಕಥೆ ಏನು ಗೊತ್ತೇ?? ಇವೆಲ್ಲ ಬೇಕಿತ್ತಾ??
ಕೊನೆಗೂ ಬಯಲಾಯಿತು ಡುಪ್ಲೆಸಿಸ್ ನಾಯಕರಾದ ಕಾರಣ, ತೆರೆ ಹಿಂದೆ ನಡೆದ ಅಸಲಿ ಕಥೆ ಏನು ಗೊತ್ತೇ?? ಇವೆಲ್ಲ ಬೇಕಿತ್ತಾ?? 4

ಡುಪ್ಲೆಸಿಸ್ ರವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿ ಮಾಡಿರುವುದು ಭವಿಷ್ಯದ ವಿಚಾರದಿಂದ ಎಷ್ಟು ಒಳ್ಳೆಯದೋ ಇಲ್ಲವೋ ಗೊತ್ತಿಲ್ಲ ಆದರೆ ಸದ್ಯಕ್ಕಂತೂ ಖಂಡಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನನಾಗಿ ಡುಪ್ಲೆಸಿಸ್ ರವರು ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳಬಹುದು. ಇನ್ನು ಈ ಬಾರಿ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.