ಬಿಗ್ ನ್ಯೂಸ್: ಕೊನೆಗೂ ಸಿಕ್ತು RRR ಮೊದಲ ದಿನದ ಗಳಿಕೆ. ಎಷ್ಟು ಗೊತ್ತೇ?? ಕರುನಾಡದಲ್ಲಿ ಜೇಮ್ಸ್ ದಾಖಲೆ ಬ್ರೇಕ್ ಆಯ್ತಾ?? ಏನಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಕೊನೆಗೂ ಸಿನಿಮಾ ಪ್ರೇಕ್ಷಕರು ಕಾಯುತ್ತಿದ್ದಂತಹ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಅಭಿಮಾನಿಗಳು ಕಿಕ್ಕಿರಿದು ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.

ರಾಜಮೌಳಿ ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ರಾಮಚರಣ್ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ರಂತಹ ಖ್ಯಾತನಾಮರು ನಟಿಸಿರುವ ಬಿಗ್ ಬಜೆಟ್ ಸಿನಿಮಾ ವಾಗಿರುವ ಆರ್ ಆರ್ ಆರ್ ಈಗಾಗಲೇ ಬಿಡುಗಡೆಗೂ ಮುನ್ನವೇ 500 ಕೊಟ್ಟಿರುವ ಬಿಜಿನೆಸ್ ಮಾಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜಮೌಳಿ ಅವರ ಸಿನಿಮಾಗಳು ಬಿಡುಗಡೆಗೂ ಮುನ್ನವೇ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ಮಾಡುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಚಿತ್ರದ ಕುರಿತಂತೆ ಯಾವುದೇ ಅಭಿಪ್ರಾಯಗಳು ಬಂದರು ಕೂಡ ರಾಜಮೌಳಿ ಅವರ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಘರ್ಜಿಸುವುದು ಮಾತ್ರ ತಪ್ಪುವುದಿಲ್ಲ ಎಂಬುದಾಗಿ ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ.

james rrr | ಬಿಗ್ ನ್ಯೂಸ್: ಕೊನೆಗೂ ಸಿಕ್ತು RRR ಮೊದಲ ದಿನದ ಗಳಿಕೆ. ಎಷ್ಟು ಗೊತ್ತೇ?? ಕರುನಾಡದಲ್ಲಿ ಜೇಮ್ಸ್ ದಾಖಲೆ ಬ್ರೇಕ್ ಆಯ್ತಾ?? ಏನಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ.
ಬಿಗ್ ನ್ಯೂಸ್: ಕೊನೆಗೂ ಸಿಕ್ತು RRR ಮೊದಲ ದಿನದ ಗಳಿಕೆ. ಎಷ್ಟು ಗೊತ್ತೇ?? ಕರುನಾಡದಲ್ಲಿ ಜೇಮ್ಸ್ ದಾಖಲೆ ಬ್ರೇಕ್ ಆಯ್ತಾ?? ಏನಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ. 3

ಆರ್ ಆರ್ ಆರ್ ಚಿತ್ರಕ್ಕೆ ಈಗಾಗಲೇ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಪ್ರೇಕ್ಷಕರು ಜೈ ಎಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಯಾವುದಾದರೂ ಚಿತ್ರ ಗೆಲ್ಲಬೇಕು ಎಂದರೆ ಅದು ಕರ್ನಾಟಕದಲ್ಲಿ ಗೆದ್ದರೆ ಖಂಡಿತವಾಗಿ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಆರ್ ಆರ್ ಆರ್ ಚಿತ್ರ ಈಗ ಕರ್ನಾಟಕ ರಾಜ್ಯದಲ್ಲಿ ಕೂಡ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ 790ಕ್ಕೂ ಅಧಿಕ ಪ್ರದರ್ಶನಗಳನ್ನು ಪಡೆದುಕೊಂಡಿದ್ದು ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರದ ಪ್ರಭಾವವು ಕೂಡ ಕಾರಣ ಎಂಬುದಾಗಿ ಹೇಳಬಹುದಾಗಿದೆ. ಚಿತ್ರದ ಟಿಕೆಟ್ ದರವೂ ಕೂಡ ಗಣನೀಯವಾಗಿ ಹೆಚ್ಚಾಗಿರುವುದು ಕೂಡ ಕಂಡುಬಂದಿದೆ.

ಚಿತ್ರ 3d ಯಲ್ಲಿ ಬಿಡುಗಡೆ ಆಗಿದ್ದರೂ ಕೂಡ ಕನ್ನಡದ 21 ಶೋಗಳು ಕೇವಲ 2dಯಲ್ಲಿ ಬಿಡುಗಡೆ ಆಗಿರುವುದು ಕೂಡ ಕನ್ನಡ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಚಿತ್ರ ರಾಜ್ಯದಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಮಾಡಿದ ಎನ್ನುವುದರ ಕುರಿತಂತೆ ಸಾಕಷ್ಟು ಕುತೂಹಲಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ಹಾಗಿದ್ದರೆ ಬನ್ನಿ ರಾಜಮೌಳಿಯವರ ಈ ಮಹೋನ್ನತ ಚಿತ್ರ ಎಷ್ಟು ಬಾಕ್ಸಾಫೀಸ್ ಕಲೆಕ್ಷನ್ ಮಾಡಲಿದೆ ಎಂಬುದರ ಕುರಿತಂತೆ ಮಾತನಾಡೋಣ.

ಹೌದು ಜೇಮ್ಸ್ ಚಿತ್ರದ ದಾಖಲೆಯನ್ನು ಮುರಿದಿದೆಯಾ ಎನ್ನುವ ಮಾತುಗಳು ಕೂಡ ಚಿತ್ರರಂಗದ ವಲಯದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ರಾಜಮೌಳಿ ಅವರು 800ರಿಂದ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ತಮ್ಮ ಗುರಿಯನ್ನು ನೆಟ್ಟಿದ್ದಾರೆ. ಈಗಾಗಲೇ ಮೊದಲ ದಿನವೇ 200ರಿಂದ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೇವಲ ತೆಲುಗು ರಾಜ್ಯಗಳಲ್ಲಿ ಮೊದಲ ದಿನ 100 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡುವ ಭರವಸೆಯನ್ನು ಮೂಡಿಸಿದೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಕಪ್ಪು ನಟನೆಯ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರ 30 ಕೋಟಿಗೂ ಅಧಿಕ ಕಲೆಕ್ಷನ್ ಅನ್ನು ಮಾಡಿತ್ತು. ಇನ್ನು ಈ ಚಿತ್ರದ ದಾಖಲೆಯನ್ನು ಆರ್ ಆರ್ ಆರ್ ಮುರಿದಿದೆಯಾ ಎನ್ನುವುದನ್ನು ನೋಡೋಣ ಬನ್ನಿ.

james kannada movie puneeth 13 | ಬಿಗ್ ನ್ಯೂಸ್: ಕೊನೆಗೂ ಸಿಕ್ತು RRR ಮೊದಲ ದಿನದ ಗಳಿಕೆ. ಎಷ್ಟು ಗೊತ್ತೇ?? ಕರುನಾಡದಲ್ಲಿ ಜೇಮ್ಸ್ ದಾಖಲೆ ಬ್ರೇಕ್ ಆಯ್ತಾ?? ಏನಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ.
ಬಿಗ್ ನ್ಯೂಸ್: ಕೊನೆಗೂ ಸಿಕ್ತು RRR ಮೊದಲ ದಿನದ ಗಳಿಕೆ. ಎಷ್ಟು ಗೊತ್ತೇ?? ಕರುನಾಡದಲ್ಲಿ ಜೇಮ್ಸ್ ದಾಖಲೆ ಬ್ರೇಕ್ ಆಯ್ತಾ?? ಏನಾಗಿದೆ ಎಂದು ತಿಳಿದರೆ ನೀವೇ ಶಾಕ್ ಆಗ್ತೀರಾ. 4

ಹೌದು ಗೆಳೆಯರೇ ಜೇಮ್ಸ್ ಚಿತ್ರದ ಈ ದಾಖಲೆಯನ್ನು ಮುರಿಯಲು ಆರ್ ಆರ್ ಆರ್ ಚಿತ್ರದಿಂದ ಸಾಧ್ಯವಿಲ್ಲ ಎಂಬುದಾಗಿ ಕಾಣುತ್ತದೆ. ಯಾಕೆಂದರೆ ಮೊದಲ ದಿನ ಚಿತ್ರ ರಾಜ್ಯದಲ್ಲಿ ಹತ್ತರಿಂದ ಹನ್ನೆರಡು ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಮಾಡಲಿದೆ ಎಂಬುದಾಗಿ ತಿಳಿದುಬಂದಿದೆ. ಯಾಕೆಂದರೆ ಚಿತ್ರಕ್ಕೆ ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಹೊರಭಾಗಗಳಲ್ಲಿ ಅಷ್ಟೊಂದು ಪ್ರಚಾರ ಅಥವಾ ಜನಪ್ರಿಯತೆ ಇಲ್ಲ ಎಂದು ಹೇಳಬಹುದಾಗಿದೆ. ಇನ್ನಷ್ಟು ಒಳ್ಳೆಯ ಜನಪ್ರಿಯತೆ ಹಾಗೂ ಜನರ ಪ್ರತಿಕ್ರಿಯೆ ಸಿಕ್ಕರೆ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಮೂಡಿ ಬರಬಹುದಾಗಿದೆ.

ಒಟ್ಟಾರೆಯಾಗಿ ಬಾಹುಬಲಿ ಸರಣಿಗಳು ನಿರ್ಮಿಸಿರುವ ದಾಖಲೆಯನ್ನು ರಾಜಮೌಳಿಯವರು ಅಳಿಸಿ ಮತ್ತೊಂದು ಹೊಸ ಇತಿಹಾಸವನ್ನು ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಹೇಳಬಹುದಾಗಿದೆ. ಮತ್ತೊಮ್ಮೆ ಕನ್ನಡಿಗರು ಜೇಮ್ಸ್ ಚಿತ್ರವನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ನಿರೂಪಿಸಿದ್ದಾರೆ. ಒಂದು ವೇಳೆ ನೀವು ಆರ್ ಆರ್ ಆರ್ ಸಿನಿಮಾವನ್ನು ವೀಕ್ಷಿಸಿದ ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹೇಳುವುದನ್ನು ಮಾತ್ರ ಮರೆಯಬೇಡಿ.

Comments are closed.