News from ಕನ್ನಡಿಗರು

ಶುರುವಾಗುತ್ತಿದೆ ಬಾರಿ ಲೆಕ್ಕಾಚಾರ: ಬಿಗ್ ಬಾಸ್ OTT ಗೆಲ್ಲುವುದು ಯಾರಂತೆ ಗೊತ್ತೇ? ಮಾಜಿ ಬಿಗ್ ಬಾಸ್ ಸ್ಪರ್ದಿಗಳು ಹೇಳಿದ್ದೇನು ಗೊತ್ತೇ??

16

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನ ಮೊದಲ ಓಟಿಟಿ ಅವತರಿಣಿಕೆ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುವ ಹಂತಕ್ಕೆ ತಲುಪಿದೆ. ಕಾರ್ಯಕ್ರಮ ಈ ಬಾರಿಯೂ ಕೂಡ ಸಾಕಷ್ಟು ಜನಪ್ರಿಯವಾಗಿ ಮೂಡಿಬಂದಿದೆ. ಕೊನೆ ಹಂತಕ್ಕೆ ತಲುಪಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ನಡುವೆ ಪ್ರಾರಂಭವಾಗಿದೆ.

ಇನ್ನು ಈ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಯಾರು ಗೆಲ್ಲಬಹುದು ಎನ್ನುವ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರ ಹಳ್ಳಿಕೇರಿ ಅವರು ಸೋಮಣ್ಣ ಮಾಚಿಮಾಡ ಅವರು ಸ್ವತಂತ್ರವಾಗಿ ಆಡುತ್ತಿದ್ದು ಗೆಲ್ಲುವ ಸಾಧ್ಯತೆ ಕೂಡ ಹೆಚ್ಚಿದೆ ಎಂಬುದಾಗಿ ಹೇಳಿದ್ದು ರಾಕೇಶ್ ಅಡಿಗ ಅವರು ಕೂಡ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಯಿಂದ ಮೊದಲನೆಯವರಾಗಿ ಎಲಿಮಿನೇಟ್ ಆಗಿರುವ ಕಿರಣ್ ಯೋಗೇಶ್ವರ್ ಅವರು ಕೂಡ ರಾಕೇಶ್ ಅಡಿಗ ಗೆಲ್ಲುವ ಫೇವರೇಟ್ ಗಳಲ್ಲಿ ಒಬ್ಬರಾಗಿದ್ದಾರೆ ಎಂಬುದಾಗಿ ಹೇಳಿದ್ದು, ಸಾನ್ಯಾ ಅಯ್ಯರ್ ಪ್ರೇಕ್ಷಕರ ಮಿಡಿತವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂಬುದಾಗಿ ಕೂಡ ಹೇಳಿದ್ದಾರೆ.

ಇನ್ನು ಅಕ್ಷತಾ ಕುಕಿ ಅವರು ಬಿಗ್ ಬಾಸ್ ಮನೆಯಲ್ಲಿ ತನ್ನ 100 ಪ್ರತಿಶತ ಪ್ರಯತ್ನವನ್ನು ವಿನಿಯೋಗಿಸಿರುವ ಸ್ಪರ್ಧಿ ಎಂದರೆ ಅದು ರಾಕೇಶ್ ಅಡಿಗ ಅವರೇ ಈ ಬಾರಿ ಗೆಲ್ಲುತ್ತಾರೆ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪೂರ್ತಿ ಗೌಡ ರೂಪೇಶ್ ಶೆಟ್ಟಿ ಅವರು ಗೆಲ್ಲಬೇಕು ಎಂಬುದಾಗಿ ನಾನು ಹಾರೈಸುತ್ತೇನೆ. ರಾಕೇಶ್ ಅಡಿಗ ಕೂಡ ಜಾಣ್ಮೆಯಿಂದ ಆಡುತ್ತಿರುವುದರಿಂದ ಅವರು ಕೂಡ ಗೆಲ್ಲಬೇಕು ಎಂಬುದಾಗಿ ನಾನು ಆಶಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ. ನಿಮ್ಮ ಪ್ರಕಾರ ಯಾರು ಗೆಲ್ಲಬಹುದು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave A Reply

Your email address will not be published.