ಅಭಿಮಾನಿಗಳಿಗೆ ಹೊಸ ಸಂದೇಶ ರವಾನೆ ಮಾಡಿದ ಅನಿರುಧ್: ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಸಾಕಷ್ಟು ದಿನಗಳಿಂದ ಜೊತೆ ಜೊತೆಯಲಿ ಧಾರವಾಹಿಯ ನಿರ್ಮಾಪಕ ಹಾಗೂ ನಟ ಅನಿರುದ್ಧ ಅವರ ನಡುವೆ ಹಗ್ಗಜಗಾಟ ನಡೆಯುತ್ತಿತ್ತು. ಎಲ್ಲ ಜಗಳಗಳು ಪರಿಹಾರವಾಗಿ ಅನಿರುದ್ಧ್ ಮತ್ತೆ ಬರುತ್ತಾರೆ ಎಂಬುದಾಗಿ ಧಾರವಾಹಿಯ ಪ್ರೇಕ್ಷಕರು ಕಾದಿದ್ದರು. ಆದರೆ ಅದು ಸಂಪೂರ್ಣವಾಗಿ ಈಗ ಹುಸಿಯಾಗಿದೆ. ದಾರವಾಹಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಆರೂರು ಜಗದೀಶ್ ರವರು ಆರ್ಯವರ್ಧನ ಪಾತ್ರವನ್ನು ಮತ್ತೆಂದು ಅನಿರುದ್ಧ್ ಅವರು ಮಾಡಲೇಬಾರದು ಎನ್ನುವ ರೀತಿಯಲ್ಲಿ ಟ್ವಿಸ್ಟ್ ನೀಡಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನನಿಗೆ ಅಪಘಾತ ನಡೆದು ಆತನಿಗೆ ಪ್ಲಾಸ್ಟಿಕ್ ಸರ್ಜರಿಯ ಮೂಲಕ ಬೇರೆ ಮುಖವನ್ನು ಕಾಣುವಂತೆ ಮಾಡಿ ಅಲ್ಲಿ ಕಲಾವಿದನ ಬದಲಾವಣೆ ಮಾಡುವುದು ಶತಃಸಿದ್ಧವಾಗಿದೆ. ಈ ಮೂಲಕ ಅನಿರುದ್ಧ್ ಅವರು ಕೂಡ ನಮ್ಮ ಪ್ರಯತ್ನಗಳಿಗೆ ಅಂದುಕೊಂಡಿರುವ ಫಲ ಸಿಗಲಿಲ್ಲ ನನ್ನ ಜೀವನದ ಮುಂದಿನ ಪಯಣಕ್ಕೆ ನನ್ನ ಜೊತೆ ಜೊತೆಯಲ್ಲಿ ಇರಿ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ನಿಮ್ಮನ್ನು ಹೊರತುಪಡಿಸಿ ಆ ಪಾತ್ರದಲ್ಲಿ ಬೇರೆ ಯಾರನ್ನು ಕೂಡ ನೋಡಲು ಸಾಧ್ಯವಿಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ.

srujan aniruddh | ಅಭಿಮಾನಿಗಳಿಗೆ ಹೊಸ ಸಂದೇಶ ರವಾನೆ ಮಾಡಿದ ಅನಿರುಧ್: ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್. ಯಾಕೆ ಗೊತ್ತೇ??
ಅಭಿಮಾನಿಗಳಿಗೆ ಹೊಸ ಸಂದೇಶ ರವಾನೆ ಮಾಡಿದ ಅನಿರುಧ್: ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್. ಯಾಕೆ ಗೊತ್ತೇ?? 2

ಅದರಲ್ಲಿಯೂ ವಿಶೇಷವಾಗಿ ಕೆಲವೊಂದು ಅಭಿಮಾನಿಗಳು ಸೃಜನ್ ಲೋಕೇಶ್ ಅವರ ಹಾಗೆ ನೀವೇ ಒಂದು ಸ್ವಂತ ಪ್ರೋಡಕ್ಷನ್ ಹೌಸ್ ಅನ್ನು ತೆರೆಯಿರಿ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ, ನಿಮಗೆ ಪ್ರೋತ್ಸಾಹಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅನಿರುದ್ಧ್ ಅವರು ಹೇಗೆ ಕಂಬ್ಯಾಕ್ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ ಯಾಕೆಂದರೆ ಸಿನಿಮಾ ರಂಗದಿಂದ ದೂರವಾಗಿದ್ದ ಅವರು ಹಲವಾರು ವರ್ಷಗಳ ನಂತರ ಜೊತೆ ಜೊತೆಯಲಿ ದಾರವಾಹಿಯಲ್ಲಿ ನಟಿಸುವ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈಗ ಇಲ್ಲಿಂದಲೂ ಕೂಡ ಹೊರ ಹೋಗಿರುವ ಅನಿರುದ್ಧ್ ಮುಂದೆ ಮತ್ತೆ ಹೇಗೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.