Gambhir vs Kohli: ಕೊಹ್ಲಿ ರವರನ್ನು ನೋಡಿದರೆ, ಯಾಕೆ ಗಂಭೀರ್ ರವರಿಗೆ ಉರಿ ಗೊತ್ತೇ?? ಕೊಹ್ಲಿ ಬೆಳೆದ ಮೇಲೆ ಏನಾಯ್ತು ಗೊತ್ತೇ??

Gambhir vs Kohli: ವಿರಾಟ್ ಕೊಹ್ಲಿ (Virat Kohli) ಹಾಗೂ ಗೌತಮ್ ಗಂಭೀರ್ (Gautam Gambhir) ಇವರಿಬ್ಬರು ಭಾರತ ತಂಡದ ಅತ್ಯುತ್ತಮ ಆಟಗಾರರಲ್ಲಿ ಇಬ್ಬರು. ಇಬ್ಬರು ನ್ಯಾಷನಲ್ ಟೀಮ್ ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ವಿರಾಟ್ ಅವರು ಇನ್ನು ಟೀಮ್ ಇಂಡಿಯಾ ಪರವಾಗಿ ಆಡುತ್ತಿದ್ದಾರೆ ಇತ್ತ ಗೌತಮ್ ಗಂಭೀರ್ ಅವರು ರಿಟೈರ್ ಆಗಿದ್ದಾರೆ. ಇವರಿಬ್ಬರು ಒಂದು ಊರಿನವರು ಎನ್ನುವುದು ಮತ್ತೊಂದು ವಿಶೇಷ. ಆದರೆ ಇವರಿಬ್ಬರಲ್ಲಿ ಒಬ್ಬರನ್ನು ಕಂಡರೆ ಮತ್ತೂಬ್ಬರಿಗೆ ಆಗುವುದಿಲ್ಲ. 2013ರ ಐಪಿಎಲ್ ನಲ್ಲಿ ಇವರಿಬ್ಬರ ನಡುವೆ ದೊಡ್ಡ ಜಗಳವೆ ನಡೆದು ಹೋಗಿತ್ತು..

virat vs gambhir created interenet sensation again | Gambhir vs Kohli: ಕೊಹ್ಲಿ ರವರನ್ನು ನೋಡಿದರೆ, ಯಾಕೆ ಗಂಭೀರ್ ರವರಿಗೆ ಉರಿ ಗೊತ್ತೇ?? ಕೊಹ್ಲಿ ಬೆಳೆದ ಮೇಲೆ ಏನಾಯ್ತು ಗೊತ್ತೇ??
Gambhir vs Kohli: ಕೊಹ್ಲಿ ರವರನ್ನು ನೋಡಿದರೆ, ಯಾಕೆ ಗಂಭೀರ್ ರವರಿಗೆ ಉರಿ ಗೊತ್ತೇ?? ಕೊಹ್ಲಿ ಬೆಳೆದ ಮೇಲೆ ಏನಾಯ್ತು ಗೊತ್ತೇ?? 2

ಆಗಿನಿಂದಲೂ ಇಬ್ಬರ ನಡುವೆ ಹೆಚ್ಚು ಮಾತು ಇರುವುದಿಲ್ಲ. ಪಂದ್ಯಗಳು ಇದ್ದಾಗ ಭೇಟಿಯಾದರು ಕೂಡ ಇಬ್ಬರು ಜಾಸ್ತಿ ಮಾತನಾಡುವುದಿಲ್ಲ. ಮೇ 1ರಂದು ನಡೆದ ಆರ್ಸಿಬಿ ವರ್ಸಸ್ ಎಲ್.ಎಸ್.ಜಿ ನಡುವಿನ ಪಂದ್ಯದಲ್ಲಿ ಇವರಿಬ್ಬರ ನಡುವೆ ಜಗಳ ನಡೆದು ಹೋಯಿತು. ಮೊದಲಿಗೆ ಜಗಳ ಶುರುವಾಗಿದ್ದು ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ. ಮ್ಯಾಚ್ ಮುಗಿದ ನಂತರ ಆಟಗಾರರು ಹ್ಯಾಂಡ್ ಶೇಕ್ ಮಾಡುವಾಗ ವಿರಾಟ್ ಕೊಹ್ಲಿ ಹಾಗೂ ನವೀನ್ ನಡಿಗೆ ಮಾತಿನ ಚಕಾಮಕಿ ಶುರುವಾಗಿದೆ. ನಂತರ ಕೋಹ್ಲಿ ಅವರು ಕೈಲ್ ಮೇಯರ್ಸ್ ಅವರೊಡನೆ ಮಾತನಾಡುವಾಗ, ಗಂಭೀರ್ ಅವರು ಕೈಲ್ ಮೇಯರ್ಸ್ ಅವರನ್ನು ಕರೆದುಕೊಂಡು ಹೋದರು.

ಇದನ್ನು ಓದಿ: Railway Law: ಕೊನೆಗೂ ಮಹತ್ವದ ನಿರ್ಧಾರ ತೆಗೆದುಕೊಂಡ ರೈಲ್ವೆ ಇಲಾಖೆ; ಈ ರೀತಿ ಇದ್ದಾಗ ಮಹಿಳೆಯರಿಗೆ ಉಚಿತ ಪ್ರಯಾಣ: ರೂಲ್ಸ್ ಏನು ಗೊತ್ತೇ??

ಇದರಿಂದ ಕೊಹ್ಲಿ ಹಾಗೂ ಗಂಭೀರ್ ನಡುವೆ ಜಗಳ ಶುರುವಾಯಿತು. ಇಬ್ಬರು ಬೈದಾಡಿಕೊಳ್ಳಲು ಶುರು ಮಾಡಿದರು. ಆಗ ಕೆ.ಎಲ್.ರಾಹುಲ್ ಹಾಗೂ ಅಮಿತ್ ಮಿಶ್ರಾ ಹಾಗೂ ಇನ್ನಿಗರ ಆಟಗಾರರು ಮಧ್ಯಕ್ಕೆ ಬಂದು, ಜಗಳ ನಿಲ್ಲಿಸಿದರು. ಗಂಭೀರ್ ಅವರು ಈ ವಿಷಯಕ್ಕೆ ಅನಗತ್ಯವಾಗಿ ಪ್ರವೇಶ ಮಾಡಿ ಜಗಳ ಶುರು ಮಾಡಿದರು ಎಂದು ನೆಟ್ಟಿಗರು ಗಂಭೀರ್ ಅವರ ವಿರುದ್ಧ ಟೀಕೆ ಮಾಡುವುದಕ್ಕೆ ಶುರು ಮಾಡಿದರು.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ನೋಡಿ ಗಂಭೀರ್ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ತಮಗಿಂತ ಕೊಹ್ಲಿ ಒಳ್ಳೆಯ ಆಟಗಾರ ಎನ್ನುವ ಕಾರಣಕ್ಕೆ ಗಂಭೀರ್ ಅವರಿಗೆ ವಿರಾಟ್ ಅವರ ಮೇಲೆ ಹೊಟ್ಟೆಕಿಚ್ಚು, ಎಂದು ಎನ್.ಡಿ.ಟಿವಿ ಚಾನೆಲ್ ಮುಖ್ಯ ಸಂಪಾದಕರಾದ ರಜತ್ ಶರ್ಮ ಅವರು ಕಮೆಂಟ್ ಮಾಡಿದ್ದಾರೆ. ಅವರ ಈ ಮಾತುಗಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತ ಗಂಭೀರ್ ಅಭಿಮಾನಿಗಳು ರಜತ್ ಶರ್ಮ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೊಹ್ಲಿ ಅಭಿಮಾನಿಗಳು ರಜತ್ ಶರ್ಮ ಅವರ ಮಾತು ಸತ್ಯ ಎನ್ನುತ್ತಿದ್ದಾರೆ. ಈಗ ಈ ವಿಚಾರ ಹಾಟ್ ಟಾಪಿಕ್ ಆಗಿ ಚರ್ಚೆಯಾಗುತ್ತಿದೆ.

ಇದನ್ನು ಓದಿ: Property Law: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯೇ?? ನಿಜಕ್ಕೂ ಇದು ಸಾಧ್ಯನಾ?? ಕಾನೂನು ಏನು ಹೇಳುತ್ತದೆ ಗೊತ್ತೇ?

Comments are closed.