Railway Law: ಕೊನೆಗೂ ಮಹತ್ವದ ನಿರ್ಧಾರ ತೆಗೆದುಕೊಂಡ ರೈಲ್ವೆ ಇಲಾಖೆ; ಈ ರೀತಿ ಇದ್ದಾಗ ಮಹಿಳೆಯರಿಗೆ ಉಚಿತ ಪ್ರಯಾಣ: ರೂಲ್ಸ್ ಏನು ಗೊತ್ತೇ??
Railway Law: ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳು ಸಾಕಷ್ಟು ಜನರು ಓಡಾಡುತ್ತಾರೆ. ಇದೀಗ ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣ ಮಾಡುವ ಹೆಣ್ಣುಮಕ್ಕಳಿಗೆ ಒಂದು ಸಂತೋಷದ ಸುದ್ದಿ ತಂದಿದೆ. ಈ ಹಿಂದೆ ಇದ್ದ ನಿಯಮಗಳನ್ನು ಮತ್ತೊಂದು ಸಾರಿ ತಿದ್ದುಪಡಿ ಮಾಡುವ ಮೂಲಕ ಈ ಪರಿಹಾರ ನೀಡಲಾಗಿದೆ. ಒಂದು ವೇಳೆ ಕಾರಣಾಂತರಗಳಿಂದ ಟಿಕೆಟ್ ಪಡೆಯುವುದಕ್ಕೆ ಸಾಧ್ಯವಾಗದೆ ಇದ್ದರೆ, ಟಿಟಿಇ ಅವರು ಟಿಕೆಟ್ ಇಲ್ಲದೆಯೇ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ಕೊಡುತ್ತಾರೆ.
ಅಷ್ಟೇ ಅಲ್ಲದೆ, ಒಂದು ವೇಳೆ ರಾತ್ರಿ ಹೆಚ್ಚು ಸಮಯ ಆಗಿದ್ದರೆ, ಅವರು ಹೋಗಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ಕೂಡ ರೈಲ್ವೆ ಇಲಾಖೆಯದ್ದೇ ಆಗಿರುತ್ತದೆ. ಒಂಟಿಯಾಗಿ ಪ್ರಯಾಣ ಮಾಡುವ ಹೆಣ್ಣುಮಕ್ಕಳಿಗೆ ಸುರಕ್ಷತೆ ಕೊಡಬೇಕ್ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು 1989ರಲ್ಲಿ ಈ ನಿಯಮದಲ್ಲಿ ಮಾಡಲಾಗಿದೆ. 1989ರಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಈ ನಿಯಮಗಳನ್ನು ಶುರು ಮಾಡಲಾಯಿತು. ರೈಲಿನಲ್ಲಿ ಒಬ್ಬ ಮಹಿಳೆ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದರೆ, ಆಕೆಯ ಹತ್ತಿರ ಟಿಕೆಟ್ ಇಲ್ಲದೆ ಇದ್ದರು ಸಹ, ರೈಲಿನಿಂದ ಹೊರಗೆ ಹಾಕುವ ಹಾಗಿಲ್ಲ.
ಹಾಗೆಯೇ ಆಕೆಗೆ ರಕ್ಷಣೆ ನೀಡುವ ಜವಾಬ್ದಾರಿ ಕೂಡ ರೈಲ್ವೆ ಇಲಾಖೆಯ ಮೇಲೆ ಇರುತ್ತದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ರೈಲ್ವೆ ಇಲಾಖೆಯು ಈ ನಿಯಮವನ್ನು ತಿದ್ದುಪಡಿ ಮಾಡಿದೆ. ಕಾರಣಗಳು ಇದ್ದಾಗ ಮಹಿಳೆಯರು ಟಿಕೆಟ್ ತೆಗೆದುಕೊಳ್ಳಲೇಬೇಕು ಎನ್ನುವ ಕಡ್ಡಾಯ ಹೇರುವ ಹಾಗಿಲ್ಲ, ಹಾಗೆಯೇ ರಾತ್ರಿಯಾಗಿದ್ದರೆ ಅವರು ಹೋಗಬೇಕಾದ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುವುದು ರೈಲ್ವೆ ಇಲಾಖೆಯ ಜವಾಬ್ದಾರಿ ಆಗಿದೆ. ಒಂದು ವರ್ಷಗಳ ಹಿಂದೆ ಒಂದು ವೇಳೆ ಪ್ರಯಾಣಿಕರು ಕಾರಣಾಂತರಗಳಿಂದ ಟಿಕೆಟ್ ಪಡೆಯಲು ಸಾಧ್ಯವಾಗದೆ ಇದ್ದರೆ ಎಂದು ಈ ನಿಯಮವನ್ನು ಜಾರಿಗೆ ತರಲಾಗಿತ್ತು.
ಟಿಕೆಟ್ ಇಲ್ಲದೆ ಟೈಟಿಇ ಅವರ ಕೈಗೆ ಸಿಕ್ಕಿಹಾಕಿಕೊಂಡರೆ, ಅವರ ಪ್ರಯಾಣ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ ಹೀಗೆ ಹೋಗುವವರ ಹತ್ತಿರ ಪ್ಲಾಟ್ ಫಾರ್ಮ್ ಟಿಕೆಟ್ ಹೊಂದಿರಬೇಕು. ಆಗ ಪ್ರಯಾಣಿಕರು ಫೈನ್ ಕಟ್ಟದೆ ತಾವು ಹೋಗಬೇಕಾದ ಜಾಗಕ್ಕೆ TTE ಅವರಿಂದಲೇ ಟಿಕೆಟ್ ಖರೀದಿ ಮಾಡಬಹುದು. ಈ ರೂಲ್ಸ್ ಅನ್ನು ಫಾಲೋ ಮಾಡಬಹುದು. ಒಂದು ವೇಳೆ ನೀವು ಯಾವುದೋ ಕಾರಣಕ್ಕೆ ಟಿಕೆಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಇದ್ದರೆ, ಪ್ಲಾಟ್ ಫಾರ್ಮ್ ಟಿಕೆಟ್ ಖರೀದಿ ಮಾಡಿ ರೈಲು ಹತ್ತಬಹುದು.
Comments are closed.