ಮಲೆ ಮಹದೇಶ್ವರ ಸ್ವಾಮಿಯ ತಲೆ ಮೇಲೆ ಇರುವಂತ ದೇವರು ಯಾವುದು ಗೊತ್ತೇ?? ಮಹತ್ವ ತಿಳಿದರೇ ಅಚ್ಚರಿ ಪಡುತ್ತೀರಿ

ಮಲೆ ಮಹದೇಶ್ವರ ಸ್ವಾಮಿಯ ತಲೆ ಮೇಲೆ ಇರುವಂತ ದೇವರು ಯಾವುದು, ಇದು ಒಳ್ಳೆಯ ಪ್ರಶ್ನೆ ಎಲ್ಲಾರು ಹೇಳುವುದು ತಾಯಿ ಗಂಗೆ, ಹೌದು ಗಂಗಾದೇವಿ, (ಗಂಗಾಮಾತೆ) ಇದರ ಹಿನ್ನೆಲೆ ಏನು ? ಇದೆ ಎಲ್ಲರಿಗೂ ಸಹಜವಾಗಿ ಬರುವಂತ ಪ್ರಶ್ನೆ, ಮಲೆಮಹದೇಶ್ವರ ಸ್ವಾಮಿಯವರು ಶಿವನ ಆದೇಶದಂತೆ ಧರೆಗೆ ಬರುತ್ತಾರೆ ದುಷ್ಟರನ್ನು ಸಂಹರಿಸಿ. ಶಿಷ್ಟರನ್ನು ರಕ್ಷಿಸಿ,

ಅಜ್ಞಾನದಿಂದ ಬಳಲುತ್ತಿರುವವರನ್ನು ಸಲಹುತ್ತ, ಶಿವನ ತತ್ವವನ್ನು ಲೋಕಕ್ಕೆ ಸಾರಿ, ಲೋಕಕಲ್ಯಾಣಕ್ಕಾಗಿ ಶ್ರಮಿಸುತ್ತಾ, ಶಿವನಲ್ಲಿ ಲೀನವಾಗುತ್ತಾರೆ, ಸರ್ವಂ ಶಿವಾರ್ಪಣಮಸ್ತು, ಸರ್ವಂ ಶಿವಂ,ಅನ್ನುತಾ ಲಿಂಗ ರೂಪವನ್ನು ತಾಳಿ ಈಶ್ವರನ ರೂಪದಲ್ಲಿ ನಮಗೆ ದರುಶನವನ್ನು ನೀಡುತ್ತಿದ್ದಾರೆ, ಗಂಗಾಧರ ನಾಗಿ, ಜಟಾಧರ ನಾಗಿ, ಚಂದ್ರಶೇಖರ ನಾಗಿ, ಮುಕ್ಕಣ್ಣ ನಾಗಿ, ರುದ್ರ ನಾಗಿ, ನಾಗಾದರ ನಾಗಿ, ರುದ್ರಾಕ್ಷಿ ದರನಾಗಿ, ವಿಭೂತಿ ಪುರುಷನಾಗಿ,

ಕೈಲಾಸ ವಾಸಿಯಾಗಿ, ಎಡಗಡೆ ಕಾರಯ್ಯ, ಬಲಗಡೆ ಬಿಲ್ಲಯ್ಯ, ಬೆನ್ನಹಿಂದೆ ಬೇಡರ ಕಣ್ಣಯ್ಯ,ಮುಂದುಗಡೆ ಬಸವಣ್ಣ,ನೆತ್ತಿಯಮೇಲೆ ಶೇಷಣ್ಣ, ಪಂಚ ಋಷಿಗಳ ಸಾಕ್ಷಿಯಾಗಿ ಮೂಡಲ ಮಲೆಯ ಮಹಾದೇವ ನಮ್ಮ ಅಪ್ಪಾಜಿ ಮುದ್ದು ಮಲೆ ಮಹದೇಶ್ವರ ಸ್ವಾಮಿ ಸರ್ವರಿಗೂ ದರ್ಶನವನ್ನು ನೀಡುತ್ತಿದ್ದಾರೆ, ಈಗ ನಿಮಗೆ ಉತ್ತರ ಸಿಕ್ಕಿದೆ ಎಂದು ತಿಳಿದಿರುತ್ತೇನೆ ಇದಕ್ಕೆ ಅಲ್ಲವೇ ಹೇಳುವುದು ಮಾಯಕಾರ ಮಹಿಮೆ ಬಲ್ಲವರು ಯಾರಯ್ಯ ಉಘೇ ಮಹದೇಶ್ವರ🙏🔱🙏

Comments are closed.