ಮಾದಪ್ಪನ ರಥ ನಿರ್ಮಾಣ ಮಾಡಲು ಕೈ ಜೋಡಿಸುವ ಇಚ್ಛೆ ಇದೆಯೇ?? ಹೀಗೆ ಮಾಡಿ

ಮಹದೇಶ್ವರ ಸ್ವಾಮಿ ದೇವರ ಬೆಳ್ಳಿ ತೇರು ನಿರ್ಮಾಣ ಕಾರ್ಯಕ್ಕೆ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ದೊರೆತಿದ್ದು, ಇದಕ್ಕಾಗಿ ಸುಮಾರು 450 k.g ಶುದ್ಧ ಬೆಳ್ಳಿಯ ಅವಶ್ಯಕತೆ ಇದೆ. ರಥಕ್ಕೆ ಬೆಳ್ಳಿ ದಾನ ಮಾಡಲಿಚ್ಛಿಸುವ ಭಕ್ತರು ಶುದ್ಧ ಬೆಳ್ಳಿ ಗಟ್ಟಿಯನ್ನು ಖರೀದಿಸಿ ಅಥವಾ ಅನುಪಯುಕ್ತ ಬೆಳ್ಳಿ ಇದ್ದರೆ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಪಾರುಪತ್ತೆದಾರರಿಗೆ ನೀಡಿ ರಶೀತಿಯನ್ನು ಪಡೆಯ ಬೇಕು.

ಅಭಿವೃದ್ಧಿ ಪ್ರಾಧಿಕಾರದ ವೆಬ್ ಸೈಟ್ : mmhillstemple. com ಗೆ ಮಾದಪ್ಪನ ಭಕ್ತಕೋಟಿ ಲಾಗಿನ್ ಆಗಿ ದಾನದ ರೂಪದಲ್ಲಿ ಹಣವನ್ನು ಆನ್ ಲೈನ್ ನಲ್ಲಿ ಪಾವತಿಸಿ,ಆನ್ ಲೈನ್ ನಲ್ಲಿ ರಶೀತಿ ಪಡೆಯಬಹುದು. ಇದಕ್ಕೆ ಡಿಸೆಂಬರ್ 31.2020 ಕೊನೆಯ ದಿನವಾಗಿದೆ.

ನೂತನವಾಗಿ ನಿರ್ಮಾಣ ಮಾಡಲಿರುವ ಬೆಳ್ಳಿಯ ರಥದ ಒಟ್ಟು ಎತ್ತರ,ಒಟ್ಟು ತೇರು ನೆಲದಿಂದ ಮೇಲಿನ ಛತ್ರಿ ಸೇರಿ ಕಳಸದ ತುದಿಯ ವರಿಗೆ 17 ಅಡಿ ಎತ್ತರ, ಪೀಠದ ಎತ್ತರ : 3’6″ಪೀಠದ ಅಗಲ : 5 ಅಡಿ 3 ಇಂಚು, ಪೀಠದ ಉದ್ದ : 7 ಅಡಿ 6 ಇಂಚು, ಪೀಠದ ಎತ್ತರ. : 3 ಅಡಿ 6 ಇಂಚು.

ಪೀಠ ಸೇರಿ ಬೆಳ್ಳಿ ಕವಚ ಪೂರ್ಣಗೊಂಡ ತೇರಿನ ಎತ್ತರ 12 ಅಡಿ 6 ಇಂಚು.ಪೀಠದ ಕೆಳಭಾಗ : ಆಕ್ಸೆಲ್ ಹಾಗೂ ನೆಲದ ಮಧ್ಯೆ 3 ಅಡಿ ( ಸುಮಾರು) ಇರುತ್ತದೆ. ಭಕ್ತರ ಗಮನಕ್ಕೆ,ಅಭಿವೃದ್ಧಿ ಪ್ರಾಧಿಕಾರವು ಬೆಳ್ಳಿಯನ್ನು ನೇರವಾಗಿ ಸಂಗ್ರಹಿಸಲು ಯಾರನ್ನೂ ನೇಮಕ ಮಾಡಿರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯದರ್ಶಿಗಳು ಜಯವೀಭವ ಸ್ವಾಮಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.