ಟೆರೇಸ್ ಮೇಲೆ ಅಥವಾ ಮನೆ ಮುಂದೆ ಕಡಿಮೆ ಜಾಗದಲ್ಲಿ ಹೊಸ ರೀತಿಯ ದ್ರಾಕ್ಷಿ ತೋಟ, ಉತ್ತಮ ಆದಾಯ ಕೂಡ ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕೃಷಿ ನಮ್ಮ ದೇಶದ ಜೀವಾಳ. ನೀವೇನಾದ್ರೂ ಕೃಷಿ ಮಾಡಲು ಮನಸ್ಸು ಮಾಡಿದ್ರೆ ತೋಟ ಗದ್ದೆಗಳಲ್ಲಿಯೇ ಮಾಡಬೇಕಾಗಿಲ್ಲ, ನಿಮ್ಮ ಮನೆಯ ಸ್ವಲ್ಪ ಟೆರೇಸ್ ಇದ್ರೂ ಸಾಕು, ನಾನಾ ತರದ ಬೆಳೆ ಬೆಳೆಯಬಹುದು. ಇದಕ್ಕೆ ಬೇಕಾಗುವ ಬಂಡವಾಳವೂ ಕಡಿಮೆ. ಹಳ್ಳಿಗಳಲ್ಲಿ ಬೆಳೆ ಬೆಳೆಯುವುದು ಸಹಜ. ಆದರೆ ಇತ್ತೀಚಿಗೆ ನಗರಗಳಲ್ಲೂ ಸಾಕಷ್ಟು ಮಹಿಳೆಯರು ಹೋಮ್ ಟೆರೇಸ್ ನಲ್ಲಿ ಹಲವಾರು ಹೂವಿನ ಗಿಡಗಳು, ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಾರೆ. ಇದು ಮನಸ್ಸಿಗೂ ಶಾಂತಿ ಕೊಡುತ್ತೇ, ನೈಸರ್ಗಿಕ ಆಹಾರವೂ ಸಿಗತ್ತೆ. ಆದರೆ ಇದು ಇಷ್ಟಕ್ಕೇ ಸೀಮಿತವಾಗಿಲ್ಲ, ಟೆರೇಸ್ ಗಾರ್ಡನಿಂಗ್ ನ್ನು ನೀವು ನಿಮ್ಮ ಆದಾಯದ ಮೂಲವಾಗಿಯೂ ಪರಿವರ್ತಿಸಿಕೊಳ್ಳಬಹುದು ಹೇಗೆ ಅಂತೀರಾ.. ಮುಂದೆ ಓದಿ..

grapes 2 | ಟೆರೇಸ್ ಮೇಲೆ ಅಥವಾ ಮನೆ ಮುಂದೆ ಕಡಿಮೆ ಜಾಗದಲ್ಲಿ ಹೊಸ ರೀತಿಯ ದ್ರಾಕ್ಷಿ ತೋಟ, ಉತ್ತಮ ಆದಾಯ ಕೂಡ ಹೇಗೆ ಗೊತ್ತೇ??
w

ಮನೆಯ ಮಹಡಿಯ ಮೇಲೆ ಸಸ್ಯಗಳನ್ನು ಬೆಳೆಸುವುದು ಒಂದು ಅದ್ಭುತ ಕಲ್ಪನೆ, ಇದು ವಿದೇಶಗಳಲ್ಲಿ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಅಂದಹಾಗೇ ಮನೆಯ ಟೆರೇಸ್ ಮೇಲೆ ದ್ರಾಕ್ಷಿ ತೋಟವನ್ನೂ ಕೂಡ ಮಾಡಬಹುದು. ಇದರಿಂದ ಬರುವ ಲಾಭ ನೀವು ಊಹಿಸಲು ಸಾಧ್ಯವಿಲ್ಲ. ಬನ್ನಿ ಅಂಥ ಒಂದು ಟೆರೇಸ್ ದ್ರಾಕ್ಷಿ ತೋಟವನ್ನು ನೋಡೋಣ.. ಮಹಾರಾಷ್ಟ್ರದ ಭೌಸಾಹೇಬ್ ಕಾಂಚನ್ ಎಂಬವವರು ತಮ್ಮ ಮನೆಯಲ್ಲಿರುವ ಮಹಡಿಯಲ್ಲಿ ಅತ್ಯದ್ಭುತವಾಗಿ ದ್ರಾಕ್ಷಿ ತೋಟವನ್ನೇ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಕೊಯ್ಲಿಗೆ 250 ಕಿಲೋ ನಷ್ಟು ದ್ರಾಕ್ಷಿಯನ್ನು ಬೆಳೆಯುತ್ತಾರೆ ಅಂದ್ರೆ ನಂಬ್ತಿರಾ!

ಮಹಾರಾಷ್ಟ್ರದ ಒಬ್ಬ ರೈತರಾಗಿರುವ ಭೌಸಾಹೇಬ್ ಕಾಂಚನ್ ಅವರು ಅವರು ತಮಗಿರುವ 3 ಎಕರೆ ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಮನೆಯ ಟೆರೇಸ್ ನ್ನೂ ಕೂಡ ವ್ಯರ್ಥ ಮಾಡದೇ ಅದರಲ್ಲಿಯೂ ದ್ರಾಕ್ಷಿ ಬೆಳೆ ಬೆಳೇಯುತ್ತಿರುವುದು ಇತರ ರೈತರಿಗೂ ಮಾದರಿ. ಭೌಸಾಹೇಬ್ ಅವರು 2013 ರಲ್ಲಿ, ರಾಜ್ಯ ಕೃಷಿ ಇಲಾಖೆಯು ಇತರ ಕೃಷಿಯ ಬಗ್ಗೆ ತಮ್ಮ ರೈತರಿಗೂ ತಿಳಿಸಿಕೊಡಲು ಆಯೋಜಿಸಿದ್ದ ಯುರೋಪ್ ಪ್ರವಾಸಕ್ಕೆ ಹೋಗಿದ್ದರು. ನೆದರ್ಲ್ಯಾಂಡ್ಸ್, ಜರ್ಮನಿ, ಫ್ರಾಂಕ್‌ಫರ್ಟ್ ಮತ್ತು ಹಾಲೆಂಡ್‌ಗೆ ಪ್ರಯಾಣಿಸಿ, ಅಲ್ಲಿನ ಕೃಷಿ ಮಾಡುವ ಪದ್ಧತಿ ಅದರಲ್ಲೂ ಹಾಲೆಂಡ್‌ನ ಅನೇಕ ರೈತರು ತಮ್ಮ ಹಿತ್ತಲಿನಲ್ಲಿ ದ್ರಾಕ್ಷಿ ಬೆಳೆದಿರುವುದನ್ನು ನೋಡಿ ತಾವೂ ಯಾಕೆ ಈ ರೀತಿ ಮಾಡಬಾರದು ಎಂದು ಯೋಚಿಸಿದರು.

ಆ ಬಳಿಕ ಅಲ್ಲಿಂದ ತಿಳಿದುಕೊಂಡು ಬಂದ ಮಾಹಿತಿಯನ್ನು ತನ್ನ ಕೃಷಿಯಲ್ಲೂ ಅಳವಡಿಸಿ ಕೊಂಡರು. ಇದೀಗ ಅವರ ಮೊದಲ ಪ್ರಯೋಗವೇ ಭರ್ಜರಿ ಯಶಸ್ಸನ್ನು ಕಂಡಿದ್ದು, ದ್ರಾಕ್ಷಿ ಬಳ್ಳಿಗಳು ಅವರ ಛಾವಣಿಯ ತುಂಬಾ ಆವರಿಸಿ 250 ಕೆಜಿ ಹಣ್ಣುಗಳನ್ನು ನೀಡುತ್ತವೆ. ಭೌಸಾಹೇಬ್ ಅವರು ಬೆಂಗಳೂರಿನ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಸಂಸ್ಥೆಯಿಂದ ಪರ್ಪಲ್ ಮತ್ತು ಕಪ್ಪು ದ್ರಾಕ್ಷಿಯನ್ನು ಖರೀದಿಸಿ ಟೆರೇಸ್ ನಲ್ಲಿ ಸಸಿನೆಟ್ಟು ಸಾವಯವ ಕೃಷಿ ಮಾಡಿದ್ದಾರೆ. ಇವರ ಮನೆಯ ಟೆರೇಸ್ 1,100 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು ದ್ರಾಕ್ಷಿ ಬೆಳೆಯನ್ನು ಮಾಡಲು ಸೂಕ್ತವಾಗಿದೆ.

grapes 1 | ಟೆರೇಸ್ ಮೇಲೆ ಅಥವಾ ಮನೆ ಮುಂದೆ ಕಡಿಮೆ ಜಾಗದಲ್ಲಿ ಹೊಸ ರೀತಿಯ ದ್ರಾಕ್ಷಿ ತೋಟ, ಉತ್ತಮ ಆದಾಯ ಕೂಡ ಹೇಗೆ ಗೊತ್ತೇ??
ಟೆರೇಸ್ ಮೇಲೆ ಅಥವಾ ಮನೆ ಮುಂದೆ ಕಡಿಮೆ ಜಾಗದಲ್ಲಿ ಹೊಸ ರೀತಿಯ ದ್ರಾಕ್ಷಿ ತೋಟ, ಉತ್ತಮ ಆದಾಯ ಕೂಡ ಹೇಗೆ ಗೊತ್ತೇ?? 3

ದ್ರಾಕ್ಷಿಯನ್ನು ಯಾವುದೇ ರಾಸಾಯನಿಕಗಳನ್ನು ಬಳಸದೇ ಹೇರಳವಾಗಿ ಹಸುವಿನ ಸಗಣಿ, ಕಾಂಪೋಸ್ಟ್, ಸಾವಯವ ಪದಾರ್ಥ ಮತ್ತು ಗೋಮೂತ್ರವನ್ನು ಬಳಸಿ ಪೋಷಿಸುತ್ತಿದ್ದಾರೆ. ಹೀಗೆ ಮಾಡಿದ್ದರಿಂದಲೇ ದ್ರಾಕ್ಷಿ ಬಳ್ಳಿಗಳು 32 ಅಡಿಗಳವರೆಗೆ ಸೊಂಪಾಗಿ ಬೆಳೆದವು ಎಂದು ಭೌಸಾಹೇಬ್ ಹೇಳುತ್ತಾರೆ. 2018ರಲ್ಲಿ ಈ ದ್ರಾಕ್ಷಿ ಬಳ್ಳಿಗಳು ಪಕ್ವವಾದಾಗ 108 ಕೊಂಬೆಗಳನ್ನು ಪಡೆದುಕೊಂಡವು. 2020ರ ಹೊತ್ತಿಗೆ, 300ಕ್ಕೆ ಏರಿದವು ಇದೀಗ 550ಕ್ಕಿಂತ ಹೆಚ್ಚು ಕೊಂಬೆಗಳು ತಾರಸಿಯ ತುಂಬೆಲ್ಲಾ ಹರಡಿವೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಭೌಸಾಹೇಬ್. ಸ್ವಲ್ಪ ಮುತುವರ್ಜಿಯಿಂದ ಪೋಷಣೆ ಮಾಡಿದ್ರೆ ದ್ರಾಕ್ಷಿ ಗಿಡವನ್ನು ನೀವು ಬೆಳೆಯಬಹುದು. ನಿಮ್ಮ ಟೆರೇಸ್ ನಲ್ಲೂ ಜಾಗವಿದ್ದರೆ, ತಪ್ಪದೇ ಈ ದ್ರಾಕ್ಷಿ ಕೃಷಿಯ ಪ್ರಯೋಗವನ್ನೊಮ್ಮೆ ಮಾಡಿ. ಯಶಸ್ಸು ಕೂಡ ಸಿಗಬಹುದು.

Comments are closed.