ಪಾಕ್ ವಿರುದ್ದ ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ ಯಾರ್ಕೆರ್ ಕಿಂಗ್ ಬುಮ್ರಾ: ಏನಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಯುಎಇ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಮೆಂಟ್ ಅನ್ನು ಆಡುತ್ತಿದೆ ಆದರೆ ತನ್ನ ಮುಖ್ಯ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಇಲ್ಲಿ ಟೂರ್ನಮೆಂಟನ್ನು ಆಡುತ್ತಿದೆ. ಆದರೂ ಕೂಡ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡದ ವಿರುದ್ಧ ಅಧಿಕಾರಯುತವಾಗಿ ವಿಜಯವನ್ನು ಸಾಧಿಸಿದೆ. ಆದರೂ ಕೂಡ ಮುಂದೆ ಬರಲಿರುವ ಟಿ20 ವಿಶ್ವಕಪ್ ಗೂ ಮುನ್ನ ಬುಮ್ರಾ ಕಂಡಕ್ಕೆ ಸೇರಿಕೊಳ್ಳುವುದು ಅನುಮಾನ ಎಂಬುದಾಗಿ ಹೇಳಲಾಗುತ್ತಿತ್ತು. ಬೆನ್ನಿನ ಇಂಜುರಿಯಿಂದಾಗಿ ಯಾರ್ಕರ್ ಸ್ಪೆಷಲ್ ಲಿಸ್ಟ್ ಭಾರತೀಯ ಕ್ರಿಕೆಟ್ ತಂಡವನ್ನು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸೇರಿಕೊಳ್ಳುವುದು ಅನುಮಾನ ಎಂಬುದಾಗಿ ಹೇಳಲಾಗುತ್ತಿತ್ತು.

ಆದರೆ ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಯಾರ್ಕರ್ ಕಿಂಗ್ ಬುಮ್ರಾ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದು ಮುಂಬರುವ ಟಿ20 ವಿಶ್ವಕಪ್ ಗೆ ಲಭ್ಯರಾಗಿರಲಿದ್ದಾರೆ ಎಂಬುದಾಗಿ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ. ಇನ್ನು ಕೆಲವು ಮೂಲಗಳ ಪ್ರಕಾರ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೂ ಮುನ್ನ ಆಡಲಿರುವ ಆಸ್ಟ್ರೇಲಿಯ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಜಸ್ಪ್ರೀತ್ ಬುಮ್ರಾ ತಂಡದ ಆಯ್ಕೆಗಾಗಿ ಲಭ್ಯವಿರಲಿದ್ದಾರೆ ಎಂಬುದಾಗಿ ಕೇಳಿದ್ದು ಬಂದಿದೆ. ಒಟ್ಟಾರೆಯಾಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮತ್ತೆ ವಾಪಸ್ ಆಗುತ್ತಿರುವುದು ಪ್ರಮುಖ ಐಸಿಸಿ ಟೂರ್ನಮೆಂಟ್ ನಲ್ಲಿ ತಂಡದ ಬೌಲಿಂಗ್ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

bumra 3 | ಪಾಕ್ ವಿರುದ್ದ ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ ಯಾರ್ಕೆರ್ ಕಿಂಗ್ ಬುಮ್ರಾ: ಏನಂತೆ ಗೊತ್ತೆ??
ಪಾಕ್ ವಿರುದ್ದ ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ ಯಾರ್ಕೆರ್ ಕಿಂಗ್ ಬುಮ್ರಾ: ಏನಂತೆ ಗೊತ್ತೆ?? 2

ಇನ್ನು ಕೆಲವು ಸುದ್ದಿಗಳ ಪ್ರಕಾರ ಈಗಾಗಲೇ ಪಾಕಿಸ್ತಾನ ತಂಡವನ್ನು ಎದುರಿಸಿ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡ ಈ ವಾರ ಅಂತ್ಯದ ಒಳಗೆ ಸೂಪರ್ 4ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮತ್ತೊಮ್ಮೆ ಎದುರಿಸಲಿದೆ ಎಂಬುದಾಗಿ ಕೇಳಿ ಬಂದಿದೆ. ಖಂಡಿತವಾಗಿ ಈ ಪಂದ್ಯ ಹೈವೋಲ್ಟೇಜ್ ಪಂದ್ಯ ಆಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಗಸ್ಟ್ 31ರಂದು ಟೀಮ್ ಇಂಡಿಯಾ ಹಾಂಕಾಂಗ್ ತಂಡವನ್ನು ಎದುರಿಸಲಿದೆ.

Comments are closed.