Hansika: ಸ್ನೇಹಿತೆಯ ಸಂಸಾರ ಹೊಡೆದು ತಾನು ಆತನನ್ನು ಮದುವೆಯಾಗಿದ್ದ ನಟಿ ಹಂಸಿಕಾ ಬಾಳಲ್ಲಿ ಬಿರುಗಾಳಿ?? ಪಾಪ ಏನಾಗಿದೆ ಗೊತ್ತೇ?? ಇಷ್ಟೇ ತಿಂಗಳಿಗೆ ಹೀಗೆ ಆಗೋಯ್ತಾ??
Hansika: ಈಗಿನ ಕಾಲದಲ್ಲಿ ಹುಡುಗ ಹುಡುಗಿ ನಡುವೆ ಪ್ರೀತಿ ಎಷ್ಟು ಬೇಗ ಶುರುವಾಗಿ, ಎಷ್ಟು ಬೇಗ ಮದುವೆಯಾಗುತ್ತಾರೋ, ಅಷ್ಟೇ ಬೇಗ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಮದುವೆಯಾಗಿ ಸ್ವಲ್ಪ ಸಮಯಕ್ಕೆ ವಿಚ್ಚೇದನ ಪಡೆದರೆ, ಇನ್ನು ಕೆಲವರು ಮದುವೆಯಾಗಿ ಮಕ್ಕಳಾಗಿ ಅದೆಷ್ಟೋ ವರ್ಷ ಆದಮೇಲು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ವಿಚಾರಗಳು ಸಾಕಷ್ಟು ಕೇಳಿಬರುತ್ತಲೇ ಇದೆ.
ಇದೀಗ ಮತ್ತೊಬ್ಬ ಸ್ಟಾರ್ ವಿಚ್ಚೇದನ ಪಡೆಯುವ ಅಂಚಿನಲ್ಲಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ. ಆ ನಟಿ ಮತ್ಯಾರು ಅಲ್ಲ, ತಮಿಳಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿರುವ ಹನ್ಸಿಕಾ. ಇವರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿದ್ದಾರ್. ಇತ್ತೀಚೆಗೆ ತಮ್ಮ ಬ್ಯುಸಿನೆಸ್ ಪಾರ್ಟ್ನರ್ ಸೊಹೈಲ್ ಕಥುರಿಯ (Sohail Kathuria) ಅವರನ್ನು ಪ್ರೀತಿಸಿ ಅವರೊಡನೆ ಅದ್ದೂರಿಯಾಗಿ ಮದುವೆಯಾದರು ಹನ್ಸಿಕ. ಆದರೆ ಈಗ ಇವರ ದಾಂಪತ್ಯ ಜೀವನದ ಬಗ್ಗೆ ಬೇರೆಯೇ ಸುದ್ದಿ ಕೇಳಿಬರುತ್ತಿದೆ.
ಇವರ ಅಸಲಿ ವಿಚಾರ ಏನು ಅಂದ್ರೆ, ಈ ಹಿಂದೆ ಸೋಹೈಲ್ ಅವರು ಹನ್ಸಿಕಾ ಅವರ ಫ್ರೆಂಡ್ ಜೊತೆಗೆ ಮದುವೆಯಾಗಿದ್ದರು. ಆದರೆ ಈ ಮದುವೆ ಹೆಚ್ಚು ಸಮಯ ಉಳಿಯಲಿಲ್ಲ, ಅವರಿಬ್ಬರು ವಿಚ್ಛೇದನ ಪಡೆದರು, ಇದಕ್ಕೆ ಕಾರಣ ಹನ್ಸಿಕಾ ಅವರೇ ಎಂದು ಕೂಡ ಹೇಳಲಾಗುತ್ತಿದೆ. ಫ್ರೆಂಡ್ ಗೆ ವಿಚ್ಛೇದನ ಕೊಟ್ಟ ನಂತರ ಆಕೆಯ ಗಂಡನನ್ನೇ ಹನ್ಸಿಕ ಮದುವೆಯಾದರು ಹನ್ಸಿಕ. ಈ ಕಾರಣಕ್ಕೆ ಹನ್ಸಿಕಾ ಟ್ರೋಲ್ ಕೂಡ ಆಗಿದ್ದರು. ಆದರೆ ಈಗ ಇವರ ನಡುವೆ ಕೂಡ ಭಿನ್ನಾಭಿಪ್ರಾಯ ಮೂಡಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಕಾರಣ ಈಗ ಹನ್ಸಿಕಾ ಅವರು ಒಂದರ ನಂತರ ಒಂದು ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಅದು ಗಂಡನ ಜೊತೆಗೆ ಅಲ್ಲ, ಒಬ್ಬರೇ ಫ್ರೆಂಡ್ಸ್ ಜೊತೆಗೆ ಹೋಗಿ ಹಾಲಿಡೇ ಎಂಜಾಯ್ ಮಾಡುತ್ತಿದ್ದು, ಹನ್ಸಿಕಾ ಅವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹನ್ಸಿಕ ಅವರ ಪತಿ ಸೊಹೈಲ್ ಈಗ ಮುಂಬೈನಲ್ಲಿದ್ದು, ಹನ್ಸಿಕಾ ಚೆನ್ನೈನಲ್ಲಿದ್ದಾರೆ. ಹೀಗೆ ಈ ಜೋಡಿ ಬೇರೆ ಆಗಿರುವುದರಿಮದ, ಇಬ್ಬರ ನಡುವೆ ಮನಸ್ತಾಪ ಮೂಡಿರಬಹುದು, ಇಬ್ಬರು ವಿಚ್ಛೇದನ ಪಡೆದುಕೊಳ್ಳಬಹುದು ಎನ್ನುವ ವಿಚಾರ ವೈರಲ್ ಆಗಿದೆ.
Comments are closed.