Yash: ಹಾರ್ಧಿಕ್ ಪಾಂಡ್ಯ ರವರ ಮದುವೆಯಲ್ಲಿ ಡಾನ್ಸ್ ಮಾಡಲು ಯಶ್ ಹಣ ತಗೊಂಡ್ರ ?? ನಿಜಕ್ಕೂ ಒಂದು ಡಾನ್ಸ್ ಗೆ ಇಷ್ಟು ಕೋಟಿ ಕೊಟ್ಟಾರ ಹಾರ್ಧಿಕ್??
Yash: ನಟ ಯಶ್ (Yash) ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಇಡೀ ಭಾರತದಲ್ಲಿ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಯಶ್ ಅವರ ಅಭಿಮಾನಿಗಳಾಗಿದ್ದಾರೆ. ಯಶ್ ಅವರ ಸಿನಿಮಾ ಬಗ್ಗೆ ಎಲ್ಲರೂ ಕಾದು ಕುಳಿತಿದ್ದಾರೆ. ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡ ಪ್ರಮುಖ ಹೆಸರುಗಳಲ್ಲಿ ಯಶ್ ಇವರು ಮುಖ್ಯ ಪಾತ್ರ ವಹಿಸುತ್ತಾರೆ. ಯಶ್ ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಲು ಎಲ್ಲರೂ ಕಾತುರರಾಗಿದ್ದಾರೆ.
ಯಶ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಆಗಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯಶ್ ಅವರು ಪಾಲ್ಗೊಳ್ಳುತ್ತಾರೆ. ಹಾಗೆಯೇ ಯಶ್ ಅವರು ತಮ್ಮ ಸ್ನೇಹಿತರ ಮನೆಯ ಕಾರ್ಯಕ್ರಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಇದೀಗ ಯಶ್ ಅವರು ಕ್ರಿಕೆಟ್ ಸ್ಟಾರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಮದುವೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ (Natasha) ಜೋಡಿ ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡು ಸಂಪ್ರದಾಯದ ಪ್ರಕಾರ ಮದುವೆಯಾದರು.
ಈ ಜೋಡಿಯ ಮದುವೆಗಗೆ ಕ್ರಿಕೆಟ್ ಮತ್ತು ಸಿನಿಮಾ ಲೋಕದ ಸಾಕಷ್ಟು ಸೆಲೆಬ್ರಿಟಿಗಳು ಬಂದು ವಿಶ್ ಮಾಡಿದ್ದರು. ಎಂ.ಎಸ್.ಧೋನಿ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಬಂದಿದ್ದ ಈ ಮದುವೆ ಪಾರ್ಟಿಗೆ ರಾಕಿಂಗ್ ಸ್ಟಾರ್ ಯಶ್ ಸಹ ಬಂದಿದ್ದರು. ಯಶ್ ಅವರು ಈ ಪಾರ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಇನ್ನಿತರ ಕ್ರಿಕೆಟರ್ ಗಳ ಜೊತೆಗೆ ಎರಡು ಸ್ಟೆಪ್ ಕೂಡ ಹಾಕಿದ್ದಾರೆ.
ಯಶ್ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ಯಶ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ. ಯಶ್ ಅವರು ಈ ಮದುವೆಗೆ ಹೋಗಲು 20 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಅದರ ಅದು ಅಪ್ಪಟ ಸುಳ್ಳು ಸುದ್ದಿ ಆಗಿದ್ದು, ಹಾರ್ದಿಕ್ ಪಾಂಡ್ಯ ತಮ್ಮ ಫ್ರೆಂಡ್ ಎನ್ನುವ ಕಾರಣಕ್ಕೆ ಯಶ್ ಅವರು ಮದುವೆ ಪಾರ್ಟಿಗೆ ಹೋಗಿದ್ದಾರೆ, ಅದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ.
#Yash Dance at #HardikPandya Wedding Party .
Coming Soon #Yash19 #HardikPandya #Krunalpandya pic.twitter.com/J4r6ghWyzJ
— Cine Magic (@CinemaaMagic) April 22, 2023
Comments are closed.