BBMP: ಬಿಬಿಎಂಪಿ ಅಧಿಕಾರಿ ಮನೆ ಮೇಲೆ ರೇಡ್ ಮಾಡಿದ ಲೋಕಾಯುಕ್ತ ಅಧಿಕಾರಿಗೆ ಶಾಕ್: ಈತನ ಆಸ್ತಿ ಕಂಡು ಬೆಚ್ಚಿ ಬಿದ್ದದ್ದು ಯಾಕೆ ಗೊತ್ತೇ? ಎಷ್ಟಿದೆ ಗೊತ್ತೇ?
BBMP: ಅಕ್ರಮವಾದ ಹಣ ಇದೆ ಎಂದು ಮಾಹಿತಿ ಸಿಕ್ಕರೆ, ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುವ ಘಟನೆ ನಡೆಯುತ್ತಿರುತ್ತದೆ. ಇದೀಗ ಬಿಬಿಎಂಪಿ ಅಧಿಕಾರಿ ಒಬ್ಬರ ಮನೆಯ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಆತ ಹೆಸರಿಗೆ ಸರ್ಕಾರಿ ಅಧಿಕಾರಿ, ಆದರೆ ಅವರ ಮನೆಯಲ್ಲಿದ್ದ ಹಣ, ಫಾರಿನ್ ಕರೆನ್ಸಿ, ಅವರ ಲೈಫ್ ಸ್ಟೈಲ್ ಇದೆಲ್ಲವು ಅತ್ಯಂತ ಶ್ರೀಮಂತ ವ್ಯಕ್ತಿಯ ಹಾಗಿದೆ. ಮನೆಯಲ್ಲಿ ಬಹಳಷ್ಟು ಹಣದ ರಾಶಿ, ಸಾಕಷ್ಟು ಬೆಳ್ಳಿ ಮತ್ತು ಬಂಗಾರ, ಲೆಕ್ಕಪತ್ರಗಳು, ಆಸ್ತಿ ಪತ್ರಗಳು, ಇದೆಲ್ಲವನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳು ಶಾಕ್ ಆಗಿದ್ದಾರೆ.

ಇದೆಲ್ಲವೂ ಬ್ಯಾಂಕ್ ಲಾಕರ್ ಇಂದ ಹೊರಗೆ ತೆಗೆದು ಇಟ್ಟಿರುವ ಹಾಗೆ ಕಾಣುತ್ತಿದೆ. ಆದರೆ ಇದೆಲ್ಲಾ ಸಿಕ್ಕಿರೋದು ಸರ್ಕಾರಿ ಅಧಿಕಾರಿ ಮನೆಯಲ್ಲಿ. ಇದು ಬೆಂಗಳೂರಿನ (Bangalore) ಯಲಯಂಕ ಬಿಬಿಎಂಪಿಯಲ್ಲಿ ಟೌನ್ ಪ್ಲ್ಯಾನಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಗಂಗಾಧರಯ್ಯ (Gangadharaiah) ಎನ್ನುವವರ ಮನೆಯಲ್ಲಿ ಸಿಕ್ಕಿರುವ ವಸ್ತುಗಳು. ಇದನ್ನೆಲ್ಲ ನೋಡಿದರೆ, ಈ ವ್ಯಕ್ತಿ ಕೆಲಸ ಮಾಡುತ್ತಿದ್ರ ಅಥವಾ ಬರೀ ಲಂಚ ತೆಗೆದುಕೊಳ್ಳುತ್ತಿದ್ರಾ ಎನ್ನುವ ಅನುಮಾನ ಶುರುವಾಗಿದೆ. ನಿನ್ನೆ ಬೆಳಗ್ಗೆ ಆರು ಗಂಟೆಗೆ, ಕುರುಬರಹಳ್ಳಿಯಲ್ಲಿ ಇರುವ ಗಂಗಾಧರಯ್ಯ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಹೋಗಿದ್ದಾರೆ.
ಕುರುಬರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಯಲಹಂಕ ಮೂರು ಕಡೆ ಇರುವ ಇವರ ಬಂಗಲೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ವ್ಯಕ್ತಿಯ ಮೇಲೆ ಹೆಚ್ಚು ದೂರುಗಳು ಬರುತ್ತಲೇ ಇದ್ದು, ಭ್ರಷ್ಟಾಚಾರ ಎನ್ನುತಲೇ ಇದ್ದ ಕಾರಣಕ್ಕೆ ದಾಳಿ ಮಾಡಲಾಗಿದೆ. ಎಸ್.ಪಿ.ಅಶೋಕ್ ಅವರ ನಾಯಕತ್ವದಲ್ಲಿ 20ಕ್ಕಿಂತ ಹೆಚ್ಚು ಅಧಿಕಾರಿಗಳು, ಇವರ ಮೂರು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ಆಸ್ತಿಗಳ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನಲ್ಲೇ 12 ಫ್ಲ್ಯಾಟ್, ಮನೆಗಳು, ಯಲಹಂಕ, ಜೆ.ಸಿ.ನಗರ, ಹೆಬ್ಬಾಳ್ ನಲ್ಲಿ ಫ್ಲ್ಯಾಟ್ ಮನೆ, ನೆಲಮಂಗಲದಲ್ಲಿ 1.5ಕೋಟಿ ಮೌಲ್ಯದ 5 ಎಕರೆ ಜಮೀನು.
3.65ಕೋಟಿ ಬೆಲೆಬಾಳುವ ಮಲ್ಲೇಶ್ವರಂ ನಲ್ಲಿರುವ ನಿವೇಶನ, 1ಕೋಟಿ ಬೆಲೆ ಬಾಳುವ ಚಿನ್ನದ ಆಭರಣಗಳು, ಹಾಗೂ 1.40 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿಯ ಈ ವ್ಯಕ್ತಿಯದ್ದು. ಇಂಥ ಬೇನಾಮಿ ಆಸ್ತಿಗಳು ಈ ಅಧಿಕಾರಿ ಹತ್ತಿರ ಇದೆ. ಹಾಗೆಯೇ ಬ್ಯಾಟರಾಯನಪುರದಲ್ಲಿ ಎಲೆಕ್ಷನ್ ಕೆಲಸಕ್ಕಾಗಿ ನೇಮಕ ಮಾಡಲಾಗಿದ್ದು, ಎಲೆಕ್ಷನ್ ಸ್ಟಿಕರ್ ಅಂಟಿಸಲಾಗಿದೆ. ಈ ಕಾರಣಕ್ಕೆ ಅನುಮಾನ ಜಾಸ್ತಿಯಾಗಿದೆ. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
Comments are closed.