ಕೆಜಿಎಫ್ ಚಿತ್ರದಲ್ಲಿ ಎಲ್ಲರ ಮನಗೆದ್ದಿದ್ದ ನಟ ಹರೀಶ್ ರಾಯ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೇವಲ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಾಯಕರು ಮಾತ್ರವಲ್ಲದೆ ಬೇರೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಲಾವಿದರು ಕೂಡ ಇಂದಿಗೂ ಪ್ರೇಕ್ಷಕರಿಗೆ ನೆನಪಿದ್ದಾರೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ನಟ ಹರೀಶ್ ರಾಯ್ ಅವರ ಕುರಿತಂತೆ. ಹರೀಶ್ ರಾಯ್ ಹಲವರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿಕೊಂಡು ಬಂದಿದ್ದಾರೆ. ಹಲವಾರು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಹರೀಶ್ ರಾಯ್ ರವರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ್ದು ಕೆಜಿಎಫ್ ಸರಣಿ ಚಿತ್ರಗಳ ಮೂಲಕ.

ನಮ್ಮ ಕನ್ನಡ ಚಿತ್ರರಂಗ ಸೇರಿದಂತೆ ಹಲವಾರು ಚಿತ್ರರಂಗಗಳಲ್ಲಿ ಹಳೆಯ ಕಲಾವಿದರಿಗೆ ಅವಕಾಶ ನೀಡುವುದನ್ನು ಬಿಟ್ಟು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಹರೀಶ್ ರಾಯ್ ಅವರು ಕೂಡ ಹಲವಾರು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ ಅವರಿಗೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಕೂಡ ಇದೆ. ಅದು ಇತ್ತೀಚಿಗಷ್ಟೇ ಎಲ್ಲರಿಗೂ ಗೊತ್ತಾಗಿ ಎಲ್ಲರೂ ಕೂಡ ಅವರ ಚಿಕಿತ್ಸೆಗೆ ಹಣ ನೀಡುವಂತೆ ದೊಡ್ಡ ಅಭಿಯಾನವನ್ನೇ ಪ್ರಾರಂಭಿಸಿದ್ದರು. ಹೌದು ಸ್ನೇಹಿತರೆ ಹರೀಶ್ ರಾಯ್ ಅವರು ತ್ರೋಟ್ ಕ್ಯಾನ್ಸ’ರ್ ನಿಂದ ಬಳಲುತ್ತಿದ್ದಾರೆ. ಇನ್ನು ಹರೀಶ್ ರಾಯ್ ಅವರು ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿಯನ್ನು ಹೊಂದಿದ್ದಾರೆ.

harish 3 | ಕೆಜಿಎಫ್ ಚಿತ್ರದಲ್ಲಿ ಎಲ್ಲರ ಮನಗೆದ್ದಿದ್ದ ನಟ ಹರೀಶ್ ರಾಯ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತೇ??
ಕೆಜಿಎಫ್ ಚಿತ್ರದಲ್ಲಿ ಎಲ್ಲರ ಮನಗೆದ್ದಿದ್ದ ನಟ ಹರೀಶ್ ರಾಯ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತೇ?? 2

ಮಕ್ಕಳು ಹಾಗೂ ಅವರ ಪತ್ನಿ ಕೂಡ ಹರೀಶ್ ರಾಯ್ ಅವರನ್ನು ಈ ಪರಿಸ್ಥಿತಿಯಿಂದ ಹೊರ ತರಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಚಿತ್ರರಂಗದ ಕೆಲವಾರು ಖ್ಯಾತ ನಟರು ಕೂಡ ಹರೀಶ್ ರಾಯ್ ಅವರ ಈ ಕಷ್ಟಕ್ಕೆ ಧನಸಹಾಯವನ್ನು ಮಾಡಲು ಮುಂದೆ ಬಂದಿದ್ದಾರೆ ಅವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ಎಂಬುದಾಗಿ ಕೇಳಿ ಬರುತ್ತಿದೆ. ಇತ್ತೀಚಿಗಷ್ಟೇ ಹರೀಶ್ ರಾಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫ್ಯಾಮಿಲಿ ಫೋಟೋ ಸೇರಿದಂತೆ ದರ್ಶನ್ ಅವರ ಜೊತೆ ಇರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಪರಿಸ್ಥಿತಿಯಿಂದ ಹರೀಶ್ ರಾಯ್ ಹೊರಬರಲಿ ಎಂಬುದಾಗಿ ಆ ದೇವರಲ್ಲಿ ಹಾರೈಸೋಣ.

Comments are closed.