ಮನೆಯಲ್ಲಿ ಹೋಮ ಹವಾನ ಮಾಡಿದರೇ, ಕೇವಲ ಧಾರ್ಮಿಕ ಪ್ರಯೋಜನ ಅಲ್ಲಾ, ಆಧುನಿಕ ವೈಜ್ಞಾನಿಕವಾಗಿ ಎಷ್ಟೆಲ್ಲಾ ಲಾಭ ಇದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹಿಂದೂ ಧರ್ಮದಲ್ಲಿ ಹಲವಾರು ಬಗೆಯ ಆಚರಣೆಗಳಿವೆ. ದೇವರನ್ನೂ ಪೂಜಿಸುವ ಬಗೆಯಲ್ಲೂ ವೈವಿಧ್ಯತೆ ಇದೆ. ಹಗಲಿನಲ್ಲಿ, ರಾತ್ರಿಯ ವೇಳೆ, ಬೇರೆ ಬೇರೆ ಫಲ ಪುಷ್ಪಗಳಿಂದ ಹೀಗೆ ಹಲವಾರು ಬಗೆಯನ್ನು ನಾವು ದೇವರ ಪೂಜೆಗಳಲ್ಲಿ ಕಾಣಬಹುದು. ಆದರೆ ಎಲ್ಲಾ ಪೂಜೆಯ ಕೊನೆಯಲ್ಲಿ ಅಥವಾ ಹೋಮ ಹವನಗಳ ಕೊನೆಯಲ್ಲಿ ದೇವರಿಗೆ ಸಂಪೂರ್ಣ ಆಹುತಿಯನ್ನ ಸಮರ್ಪಿಸುತ್ತಾರೆ ಅಲ್ವಾ, ಅದು ಮಾತ್ರ ಪೌರಾಣಿಕ ಕಾಲದಿಂದಲೂ ಒಂದೇ ರೀತಿಯಲ್ಲಿದೇ. ಆ ಸಮಯದಲ್ಲಿ ಹೇಳುವ ಮಂತ್ರ ಘೋಷಗಳು ಸಾಮಾನ್ಯವಾಗಿ ಒಂದೇ ರೀತಿಯಿರುತ್ತದೆ. ಋಷಿ ಮುನಿಗಳು ಪಾಲಿಸುತ್ತಿದ್ದ ದೇವರಿಗೆ ಸಂಪೂರ್ಣ ಅರ್ಪಣೆಯ ರೀತಿಯನ್ನು ಇಂದಿಗೂ ಅನುಸರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆಲ್ಲಾ ಅದರದ್ದೇ ಆದ ಉದ್ದೇಶವಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಶತ ಶತಮಾನಗಳಿಂದ ನಡೆದುಕೊಂಡು ಬಂದ ಹವನ ಮಾಡುವುದರಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳೂ ಅಡಕವಾಗಿವೆ. ಹವನದಿಂದ ಗ್ರಹ ದೋಷಗಳು ನಿವಾರಣೆಯಾಗುತ್ತವೆ. ಅಲ್ಲದೇ ಹಲವು ಉತ್ತಮ ಕೆಲಸಕ್ಕಾಗಿ ಹವನಗಳನ್ನು ಮಾಡಲಾಗುತ್ತದೆ, ಭೂಮಿ ಪೂಜೆ, ಮನೆಕಟ್ಟುವುದು ಇಂಥ ಸಂದರ್ಭದಲ್ಲಿ ಹವನಗಳನ್ನು ಆರಂಭದಲ್ಲಿಯೇ ಮಾಡಿದರೆ, ದುಷ್ಟ ಶಕ್ತಿಗಳ ನಾಶವಾಗುತ್ತದೆ. ನಮ್ಮಲ್ಲಿ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕತೆ ಉಂಟಾಗುತ್ತದೆ.

ಇನ್ನು ಹವನ ಮಾಡುವುದರಿಂದ ವೈಜ್ಞಾನಿಕ ಪ್ರಯೋಜನಗಳೂ ಕೂಡ ಸಾಕಷ್ಟಿದೆ. ಹವನದಿಂದ ಹೊರಬರುವ ಹೊಗೆ ವಾತಾವರಣವನ್ನು ಶುದ್ಧಗೊಳಿಸುತ್ತದೆ, ಹವನದಲ್ಲಿ ಬಳಸುವ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೂಡ. ಹವನವನ್ನು ಮಾಡುವುದರಿಂದ ರೋಗ ರುಜಿನಗಳು ನಿವಾರಣೆಯಾಗುತ್ತದೆ. ಸುಮಾರು 94 ಪ್ರತಿಶತದಷ್ಟು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುವ ಸಾಮರ್ಥ್ಯವನ್ನು ಹವನದಲ್ಲಿ ಬಳಸುವ ವಸ್ತುಗಳು ಹಾಗೂ ಅದರಲ್ಲಿ ಬರುವ ಹೊಗೆಯಿಂದ ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ.

ಹಾಗೆಯೇ ಹವನದ ಸಂದರ್ಭದಲ್ಲಿ ಹೊತ್ತಿಸುವ ಕರ್ಪೂರದಿಂದ ಧನಾತ್ಮಕ ಶಕ್ತಿ ಮನೆಯನ್ನು ತುಂಬುತ್ತದೆ. ಕರ್ಪೂರದ ಸುಗಂಧ ಮನೆಯನ್ನು ಆವರಿಸಿದರೆ ಮನಸ್ಸಿಗೂ ಶಾಂತಿ ಲಭಿಸುತ್ತದೆ. ಮನೆಯಲ್ಲಿ ಕರ್ಪೂರ ಹಚ್ಚುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಪಿತೃದೋಷ ನಿವಾರಣೆಗಾಗಿ ಬೆಳಿಗ್ಗೆ, ಸಂಜೆ ಮತ್ತು ರಾತ್ರಿ ಮೂರು ಬಾರಿ ತುಪ್ಪದಲ್ಲಿ ನೆನೆಸಿದ ಕರ್ಪೂರವನ್ನು ಸುಡಬೇಕು. ರಾತ್ರಿ ಮನಗುವ ಮುನ್ನ ಕೋಣೆಯಲ್ಲಿ ಕರ್ಪೂರವನ್ನು ಉರಿಸಿದರೆ ದುಃಸ್ವಪ್ನಗಳು ಕಾಡುವುದಿಲ್ಲ.

ಇನ್ನು ಕರ್ಪೂರ ಹಚ್ಚುವುದರ ವೈಜ್ಞಾನಿಕ ಕಾರಣವನ್ನು ನೋಡುವುದಾದರೆ, ಕರ್ಪೂರವನ್ನು ಸುಡುವುದರಿಂದ ಮನೆಯಲ್ಲಿ ಇರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ ಮತ್ತು ಮನೆಯ ಪರಿಸರವನ್ನು ಶುದ್ಧವಾಗುತ್ತದೆ. ರೂಗಗಳು ನಮ್ಮ ಹತ್ತಿರವೂ ಸುಳಿಯುವುದಿಲ್ಲ. ಕರ್ಪೂರವನ್ನು ಸುಡುವುದರಿಂದ ಕಫ, ಸ್ನಾಯು ಸೆಳೆತ, ಕುತ್ತಿಗೆ ನೋವು, ಸಂಧಿವಾತ ಮುಂತಾದ ಕಾಯಿಲೆಗಳಿಂದಲೂ ಸಹ ನಿಮಗೆ ಪರಿಹಾರ ಸಿಗುತ್ತದೆ. ಹಾಗಾಗಿಯೇ ಔಷಧಿಗಳಲ್ಲಿಯೂ ಕರ್ಪೂರವನ್ನು ಬಳಸುತ್ತಾರೆ. ಆಯುರ್ವೇದದಲ್ಲಿ ಕರ್ಪೂರದ ಎಣ್ಣೆಯ ಬಳಕೆಯು ತುಂಬಾ ಪ್ರಯೋಜನಕಾರಿಯಾಗಿದೆ.

Comments are closed.