24 ಸಾವಿರ ಸಂಬಳದ ಕೆಲಸಗಳು ಖಾಲಿ ಇವೆ, ತಾಲ್ಲೂಕ್ ಪಂಚಾಯಿತಿಯಲ್ಲಿ ನೇರವಾಗಿ ಅಭ್ಯರ್ಥಿ ಆಯ್ಕೆ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??

ನಮಸ್ನಾರ ಸ್ನೇಹಿತರೇ, ಮಂಡ್ಯ ಜಿಲ್ಲೆಯ ತಾಲೂಕು ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ತಿಯೆ ನಡೆಯುತ್ತದೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನ ನೋಡೋಣ.

ಮಂಡ್ಯ ತಾಲೂಕು ಪಂಚಾಯತ್, ತನ್ನಲ್ಲಿ ಖಾಲಿ ಇರುವ ಒಟ್ಟೂ 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 17,2022ರ ಒಳಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸತಕ್ಕದ್ದು. ಇನ್ನು ಖಾಲಿ ಇರುವ ಹುದ್ದೆಗಳೆಂದರೆ, ಆಡಳಿತ ಸಹಾಯಕರು – ೪ ಹುದ್ದೆಗಳು, ತಾಂತ್ರಿಕ ಸಹಾಯಕರು-7 ಹುದ್ದೆಗಳು ಹಾಗೂ ತಾಲೂಕ ಐ ಇ ಸಿ ಸಂಯೋಜಕರು-2 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು, ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 29-40 ವರ್ಷದ ಒಳಗಿನವರಾಗಿರಬೇಕು. ತಾಲೂಕು ಐಇಸಿ ಸಂಯೋಜಕ ಹುದ್ದೆಗೆ 21-45 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.

interview jobs 1 | 24 ಸಾವಿರ ಸಂಬಳದ ಕೆಲಸಗಳು ಖಾಲಿ ಇವೆ, ತಾಲ್ಲೂಕ್ ಪಂಚಾಯಿತಿಯಲ್ಲಿ ನೇರವಾಗಿ ಅಭ್ಯರ್ಥಿ ಆಯ್ಕೆ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ??
24 ಸಾವಿರ ಸಂಬಳದ ಕೆಲಸಗಳು ಖಾಲಿ ಇವೆ, ತಾಲ್ಲೂಕ್ ಪಂಚಾಯಿತಿಯಲ್ಲಿ ನೇರವಾಗಿ ಅಭ್ಯರ್ಥಿ ಆಯ್ಕೆ. ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?? 2

ಆಡಳಿತ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಮಿಕ ಇಲಾಖೆಯು ತಾಲೂಕ ಮಟ್ಟದಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ನಿಗದಿಪಡಿಸಿದ ಕನಿಷ್ಠ ವೇತನ ನೀಡಲಾಗುತ್ತದೆ. ಹಾಗೂ ಉಳಿದ ಹುದ್ದೆಗಳಿಗೆ ತಿಂಗಳಿಗೆ 24,000 ಸಂಬಳ ಸಿಗಲಿದೆ. ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ, ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಬಗ್ಗೆ ಹೇಳುವುದಾದರೆ, ಆಡಳಿತ ಸಹಾಯಕ ಹುದ್ದೆಗೆ ಬಿಕಾಂ ಪದವಿಯ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು ಜೊತೆಗೆ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ ಪದವಿ ಹಾಗೂ ತಾಲೂಕ ಐ ಇ ಸಿ ಸಂಯೋಜಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಉದ್ಯೋಗ ಸ್ಥಳವು ಮಂಡ್ಯವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ತಪ್ಪದೇ ಅರ್ಜಿ ಸಲ್ಲಿಸಿ.

Comments are closed.