Horanadu: ಜೀವನದಲ್ಲಿ ಅನ್ನದ ಕೊರತೆ ಬರಬಾರದು ಎಂದರೇ ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಇದೊಂದು ಕೆಲಸ ಮಾಡಿ. ಏನು ಮಾಡಬೇಕು ಗೊತ್ತೆ?
Horanadu: ನಮ್ಮ ಸಂಪ್ರದಾಯ ಆಚಾರ ವಿಚಾರ ಆಚರಣೆಗಳು, ಪೂಜೆ ಪುನಸ್ಕಾರಗಳು ಇದೆಲ್ಲದಕ್ಕೂ ಒಂದು ಅರ್ಥವಿದೆ. ಒಂದೊಂದು ಪೂಜೆಗಳ ಹಿಂದೆ ಅದರದ್ದೇ ಫಲ ಮತ್ತು ಮಹತ್ವ ಇದೆ. ಒಂದು ವೇಳೆ ನಿಮಗೆ ಇಡೀ ಜೀವಮಾನದಲ್ಲಿ ಅನ್ನಕ್ಕೆ ಕೊರತೆ ಆಗಬಾರದು ಎನ್ನುವುದಾದರೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ಇದೊಂದು ಕೆಲಸ ಮಾಡಿ.. ಇಡೀ ಜೀವನ ಅನ್ನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ.
ನಮ್ಮ ಜನರಲ್ಲಿ ಇರುವ ನಂಬಿಕೆ ಇದು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದರೆ, ಜೀವನದಲ್ಲಿ ಅನ್ನದ ಕೊರತೆ ಆಗುವುದಿಲ್ಲ ಎನ್ನುತ್ತಾರೆ. ಚಿಕ್ಕಮಗಳೂರಿನ ಹೊರನಾಡಿನ, ಭದ್ರ ನದಿಯ ದಡದಲ್ಲಿ ಅನ್ನಪೂರ್ಣೇಶ್ವರಿ ದೇವಿಯ ಸನ್ನಿಧಿ ಇದೆ. 400 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು ಕಟ್ಟಿಸಿದರು. ಜ್ಯೋತಿಷ್ಯ ಮತ್ತು ವಾಸ್ತುವಿಗೆ ತಕ್ಕ ಹಾಗೆ, ದೇವಸ್ಥಾನವನ್ನು ನವೀಕರಣ ಮಾಡಲಾಗಿದೆ. ಇದನ್ನು ಓದಿ..Horoscope: ಇನ್ನು ಮುಂದೆ ನೀವೇ ಕಿಂಗ್ – ರಾಜನಾಗಿ ಮೆರೆಯುವಷ್ಟು ಹಣ ಬರುತ್ತದೆ, ಈ ರಾಶಿಗಳ ತಂಟೆಗೆ ಹೋಗ್ಬೇಡಿ. ಅವರು ಮುಟ್ಟಿದರೆ ಚಿನ್ನ, ನೀವು ಅಡ್ಡ ಹೋದರೆ ಉಡೀಸ್.
ಅನ್ನಪೂರ್ಣೇಶ್ವರಿ ಗುಡಿಯಲ್ಲಿ ದೇವಿಯು ಕೈಯಲ್ಲಿ ಶಂಖ, ಚಕ್ರ ಹಾಗೂ ಶ್ರೀಚಕ್ರವನ್ನು ಹಿಡಿದು ನಿಂತಿದ್ದಾರೆ. ಇಲ್ಲಿನ ಒಂದು ವಿಶೇಷತೆ ಏನು ಎಂದರೆ, ಇಲ್ಲಿಗೆ ಬರುವ ಭಕ್ತರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆ ಎಲ್ಲವನ್ನು ಇಲ್ಲಿಯೇ ಮಾಡಲಾಗಿರುತ್ತದೆ. ಇಲ್ಲಿಗೆ ಬರುವ ಭಕ್ತರಲ್ಲಿ ಒಂದು ನಂಬಿಕೆ ಇದೆ. ಇಲ್ಲಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿದರೆ, ಅವರಿಗೆ ಜೀವನದಲ್ಲಿ ಆಹಾರಕ್ಕೆ ಕೊರತೆ ಆಗುವುದಿಲ್ಲ.
ಈ ದೇವಿಗೆ ಅನ್ನಪೂರ್ಣೇಶ್ವರಿ ಎಂದು ಕರೆಯುವುದಕ್ಕೆ ಕಾರಣ ಏನು ಎಂದರೆ, ಈ ದೇವಿ ತನ್ನ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಮೂರು ಸಮಯ ಅನ್ನ ನೀಡುತ್ತಾಳೆ. ಹಾಗೆಯೇ ಯಾವುದೇ ತೊಂದರೆ ಇಲ್ಲದೆ ಇಲ್ಲಿ ದೇವಿಯ ದರ್ಶನ ಪಡೆಯಬಹುದು. ಈ ಕಾರಣಕ್ಕೆ ಈ ದೇವಿಯನ್ನು ಭಕ್ತರು ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ. ಇದನ್ನು ಓದಿ..Horoscope: ಅದೆಷ್ಟೋ ವರ್ಷದಿಂದ ತುಸು ನೆಮ್ಮದಿ, ಜಾಸ್ತಿ ಕಷ್ಟವನ್ನೇ ನೋಡಿದ ರಾಶಿಗಳ ಕಷ್ಟ ಕೊನೆಗೂ ಮುಗಿಯಿತು- ಗುರು ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೆ?
Comments are closed.