ಅಂದು ಯಶ್ ರವರು ಪ್ರಪೋಸ್ ಮಾಡಿದಾಗ ಕನ್ನಡದ ಕ್ವೀನ್, ರಾಧಿಕಾ ಪಂಡಿತ್ ರವರು ಎಷ್ಟು ತಿಂಗಳು ಕಾಯಿಸಿ ಒಪ್ಪಿಗೆ ನೀಡಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಾಗಿರುವ ಹಾಗೂ ಎಲ್ಲರ ನೆಚ್ಚಿನ ದಂಪತಿಗಳಾಗಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಕಿಂಗ್ ಸ್ಟಾರ್ ಯಶ್ ರವರು ಈಗ ಕೇವಲ ಕನ್ನಡ ಚಿತ್ರರಂಗದ ಸ್ಟಾರ್ ನಟ ಮಾತ್ರವಲ್ಲದೆ ನ್ಯಾಷನಲ್ ಸ್ಟಾರ್ ಆಗಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಚಾರ. ಇನ್ನು ರಾಧಿಕಾ ಪಂಡಿತ್ ರವರು ಚಿತ್ರರಂಗದಿಂದ ದೂರವಿದ್ದರೂ ಕೂಡ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಅವರಿಗೆ ಮಿಲಿಯನ್ಗಟ್ಟಲೆ ಫಾಲೋವರ್ಸ್ ಗಳಿದ್ದಾರೆ. ಇನ್ನು ಕೂಡ ಅವರ ಜನಪ್ರಿಯತೆ ಎನ್ನುವುದು ಕಡಿಮೆ ಆಗಿಲ್ಲ. ಇನ್ನು ಇವರಿಬ್ಬರೂ ನಂದಗೋಕುಲ ಧಾರವಾಹಿಯ ಚಿತ್ರೀಕರಣದ ಸೆಟ್ನಲ್ಲಿ ಪರಿಚಿತರಾಗುತ್ತಾರೆ. ಇಷ್ಟು ಮಾತ್ರವಲ್ಲದೆ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕೂಡ ಒಟ್ಟಾಗಿಯೇ ಕಾಲಿಡುತ್ತಾರೆ.

ಹೀಗಾಗಿ ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಎನ್ನುವುದು ಅತ್ಯಂತ ಆತ್ಮೀಯವಾಗಿತ್ತು. ಆರಂಭದಿಂದಲೂ ಕೂಡ ರಾಧಿಕಾ ಪಂಡಿತ್ ಅವರ ಮೇಲೆ ಯಶ್ ಅವರಿಗೆ ಪ್ರೀತಿಯ ಭಾವನೆ ಇತ್ತು ಆದರೆ ಸ್ನೇಹವನ್ನು ಕಳೆದುಕೊಳ್ಳಬಹುದು ಎನ್ನುವ ಚಿಂತೆಯಲ್ಲಿಯೇ ಪ್ರೀತಿಯನ್ನು ಹೇಳುವುದಕ್ಕೆ ಹೋಗಲಿಲ್ಲ. ಇದನ್ನು ಖುದ್ದಾಗಿ ರಾಕಿಂಗ್ ಸ್ಟಾರ್ ಯಶ್ ರವರು ಇತ್ತೀಚಿಗಷ್ಟೇ ಪ್ರತಿಷ್ಠಿತ ಮೀಡಿಯಾ ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಅದೊಂದು ದಿನ ವ್ಯಾಲೆಂಟೈನ್ಸ್ ಡೇ ಇತ್ತು. ಆ ದಿನ ರಾಕಿಂಗ್ ಸ್ಟಾರ್ ಯಶ್ ರವರು ರಾಧಿಕಾ ಪಂಡಿತ್ ಅವರಿಗೆ ಕರೆ ಮಾಡಿ ಎಲ್ಲಿದ್ದೀಯ ಎಂಬುದಾಗಿ ಕೇಳಿದಾಗ ಮಾಲ್ ಗೆ ಸಿನಿಮಾ ನೋಡುವುದಕ್ಕೆ ಬಂದಿದ್ದೀನಿ ಎಂಬುದಾಗಿ ಹೇಳುತ್ತಾರೆ. ಅಲ್ಲಿಗೆ ರಾಕಿಂಗ್ ಸ್ಟಾರ್ ಯಶ್ ರವರು ರಾಧಿಕಾ ಪಂಡಿತ್ ಅವರಿಗೆ ಇಷ್ಟ ಇರುವಂತಹ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಇಲ್ಲದ ಧೈರ್ಯವನ್ನು ಒಟ್ಟುಗೂಡಿಸಿಕೊಂಡು ತಾನು ಪ್ರೀತಿಸುತ್ತಿರುವ ಕುರಿತಂತೆ ನಿವೇದಿಸಿಕೊಳ್ಳುತ್ತಾರೆ.

yash radhika 3 | ಅಂದು ಯಶ್ ರವರು ಪ್ರಪೋಸ್ ಮಾಡಿದಾಗ ಕನ್ನಡದ ಕ್ವೀನ್, ರಾಧಿಕಾ ಪಂಡಿತ್ ರವರು ಎಷ್ಟು ತಿಂಗಳು ಕಾಯಿಸಿ ಒಪ್ಪಿಗೆ ನೀಡಿದ್ದರು ಗೊತ್ತೇ??
ಅಂದು ಯಶ್ ರವರು ಪ್ರಪೋಸ್ ಮಾಡಿದಾಗ ಕನ್ನಡದ ಕ್ವೀನ್, ರಾಧಿಕಾ ಪಂಡಿತ್ ರವರು ಎಷ್ಟು ತಿಂಗಳು ಕಾಯಿಸಿ ಒಪ್ಪಿಗೆ ನೀಡಿದ್ದರು ಗೊತ್ತೇ?? 2

ಅಲ್ಲಿ ರಾಧಿಕಾ ಪಂಡಿತ್ ಅವರು ಏನನ್ನು ಕೂಡ ಉತ್ತರ ನೀಡುವುದಿಲ್ಲ. ಬರೋಬ್ಬರಿ ಆರು ತಿಂಗಳ ನಂತರ ರಾಧಿಕಾ ಪಂಡಿತ್ ಅವರು ರಾಕಿಂಗ್ ಸ್ಟಾರ್ ಯಶ್ ರವರ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ. ಬರೋಬ್ಬರಿ ಐದು ವರ್ಷಗಳ ಪ್ರೀತಿಯ ನಂತರ 2016ರಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮದುವೆ ನಡೆಯುತ್ತದೆ. ಈಗ ಇಬ್ಬರೂ ಕೂಡ ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದು ಇಬ್ಬರು ಮಕ್ಕಳು ಕೂಡ ಇದ್ದಾರೆ. ಇವರಿಬ್ಬರ ನಡುವೆ ಎರಡು ವರ್ಷ ವಯಸ್ಸಿನ ಅಂತರವಿದ್ದರೂ ಕೂಡ ಪ್ರೀತಿಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲ ಎನ್ನುವುದನ್ನು ತಮ್ಮ ದಾಂಪತ್ಯ ಜೀವನದ ಮೂಲಕ ಜನರಿಗೆ ಸಾರಿದ್ದಾರೆ.

Comments are closed.