IDFC Personal Loan: ಸುಲಭವಾಗಿ ಸಾಲ ಪಡೆಯಿರಿ – ಗ್ಯಾರಂಟಿ ಬೇಡ, ಬಡ್ಡಿ ಕಡಿಮೆ. ಅರ್ಜಿ ಹಾಕಿ, 1 ಕೋಟಿಯ ವರೆಗೂ ಲೋನ್ ಪಡೆಯಿರಿ.

Here is details about IDFC personal loan - Interest, Eligibility, Process and benefits explained in Kannada

ನಮಸ್ಕಾರ ಸ್ನೇಹಿತರೇ ಕೆಲವೊಂದು ಪರಿಸ್ಥಿತಿಗಳಲ್ಲಿ ನಮ್ಮ ಬಳಿ ಹಣ ಇರುವುದಿಲ್ಲ ಹಾಗೂ ಕೆಲವೊಂದು ವಸ್ತುಗಳನ್ನು ಖರೀದಿಸಬೇಕಾಗಿರುತ್ತದೆ ಇಲ್ಲವೇ ಕೆಲವೊಂದು ಸೇವೆಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಇವತ್ತಿನ ಲೇಖನಿಯಲ್ಲಿ ನಾವು IDFC ಬ್ಯಾಂಕಿನ ಮೂಲಕ ಯಾವ ರೀತಿಯಲ್ಲಿ ಪರ್ಸನಲ್ ಪಡೆದುಕೊಳ್ಳಬಹುದು ಹಾಗೂ ನಿಮ್ಮ ಅಗತ್ಯತೆಗಳಿಗೆ ಅವುಗಳನ್ನು ಖರ್ಚು ಮಾಡಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಹೀಗಾಗಿ ಲೇಖನಿಯನ್ನು ತಪ್ಪದೆ ಕೊನೆವರೆಗೂ ಓದಿ.

IDFC ಪರ್ಸನಲ್ ಲೋನ್ – IDFC personal Loan Details

ಪರ್ಸನಲ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬ್ಯಾಂಕಿಂಗ್ ಭಾಷೆಯಲ್ಲಿ ಅಸುರಕ್ಷಿತ ಅಂದ್ರೆ Unsecured Loan ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಲೋನ್ಗಳಿಗೆ ಯಾವುದೇ ರೀತಿಯ ಆಸ್ತಿಯನ್ನು ಅಡ ಇಡುವುದಿಲ್ಲ ಬದಲಿಗೆ ಉತ್ತಮವಾದ ಸಿಬಿಲ್ ಸ್ಕೋರ್ ಇರುವವರಿಗೆ ಮಾತ್ರ ಈ ಲೋನ್ ಗಳನ್ನು ನೀಡಲಾಗುತ್ತದೆ. IDFC ಬ್ಯಾಂಕಿನ ವಿಚಾರದಲ್ಲಿ ನೀವು ಪರ್ಸನಲ್ ಲೋನ್ ರೂಪದಲ್ಲಿ ಒಂದು ಕೋಟಿ ರೂಪಾಯಿಗಳವರೆಗು ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಬಡ್ಡಿ ದರದ ಬಗ್ಗೆ ಮಾತನಾಡುವುದಾದರೆ ವಾರ್ಷಿಕ 10.49% ಬಡ್ಡಿ ದರದಲ್ಲಿ ಸಾಲ ಪ್ರಾರಂಭವಾಗುತ್ತದೆ.

IDFC ಪರ್ಸನಲ್ ಲೋನಿನ ಲಾಭ ಹಾಗೂ ವಿಶೇಷತೆಗಳು- benefits of IDFC personal Loan

  1. IDFC ಬ್ಯಾಂಕಿನ ಮೂಲಕ ವ್ಯಕ್ತಿ ಯಾವುದೇ ಪರ್ಸನಲ್ ಖರ್ಚಿಗಾಗಿ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
  2. ಮ್ಯಾಕ್ಸಿಮಮ್ ಒಂದು ಕೋಟಿ ರೂಪಾಯಿಗಳವರೆಗೆ ಇಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
  3. ಪರ್ಸನಲ್ ಹೋದ್ಮೇಲೆ ಬ್ಯಾಂಕ್ ನಿಮಗೆ ಟಾಪ್ ಅಪ್ ಸೌಲಭ್ಯವನ್ನು ಕೂಡ ನೀಡುತ್ತದೆ.
  4. ನಿಮ್ಮ ಸಾಲದ 40 ಪ್ರತಿಶತ ಹಣವನ್ನು ನೀವು ಆಂಶಿಕವಾಗಿ ಕಟ್ಟಬಹುದಾಗಿದೆ.
  5. IDFC ಪರ್ಸನಲ್ ಲೋನ್ ಗಾಗಿ ನೀವು ಆಫ್ಲೈನ್ ಹಾಗೂ ಆನ್ಲೈನ್ ಎರಡು ವಿಧಾನದ ಮೂಲಕ ಅಪ್ಲೈ ಮಾಡಬಹುದಾಗಿದೆ.
  6. IDFC ಪರ್ಸನಲ್ ಲೋನ್ ಕಟ್ಟುವುದಕ್ಕೆ ಆರರಿಂದ 60 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  7. ಯಾವುದೇ ರೀತಿಯ ಆಸ್ತಿಯನ್ನು ಅಡ ಇಡಬೇಕಾದ ಅಗತ್ಯವಿಲ್ಲ ಹಾಗೂ ಲೋನಿನ ಪ್ರೊಸೆಸಿಂಗ್ ಶುಲ್ಕ 3.5% ರಿಂದ ಪ್ರಾರಂಭವಾಗುತ್ತದೆ.

ಇದನ್ನು ಕೂಡ ಓದಿ: Kannada Horoscope: ಶುರುವಾಗಿದೆ ಶುಭಯೋಗ- ಇನ್ನು ಮುಂದೆ ಈ ಮೂರು ರಾಶಿಗಳಿಗೆ ಅದೃಷ್ಟ, ಹಣದ ಹರಿವು ಹೆಚ್ಚಳ.

IDFC ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು- eligibility to get IDFC personal Loan

ಉದ್ಯೋಗಿಗಳು

  1. ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠಪಕ್ಷ 23 ವರ್ಷ ಆಗಿರಬೇಕು.
  2. ಮ್ಯಾಕ್ಸಿಮಮ್ 60 ವರ್ಷ ವಯಸ್ಸನ್ನು ದಾಟಿರಬಾರದು.

ಸ್ವಂತ ಉದ್ಯಮಿಗಳು

  1. ಕನಿಷ್ಠ ಪಕ್ಷ ಅವರ ವ್ಯಾಪಾರ ಅಥವಾ ವಹಿವಾಟು ಮೂರು ವರ್ಷಗಳಿಂದ ಆಕ್ಟಿವ್ ಆಗಿರಬೇಕು.
  2. ಪರ್ಸನಲ್ ಲೋನ್ಗಾಗಿ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಠ 25 ವರ್ಷ ಆಗಿರಬೇಕು.
  3. ಯಾವುದೇ ಕಾರಣಕ್ಕೂ ವಯಸ್ಸು 65 ದಾಟಬಾರದು.

IDFC ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು.- Documents required to get IDFC personal Loan

  1. ನಿಮ್ಮ ಕ್ರೆಡಿಟ್ ಹಿಸ್ಟರಿ ಹಾಗೂ ಸಿಬಿಲ್ ಸ್ಕೋರ್ ಅನ್ನು ತಿಳಿದುಕೊಳ್ಳಲು ಪಾನ್ ಕಾರ್ಡ್ ಬೇಕಾಗಿರುತ್ತದೆ.
  2. ಫಾರ್ಮ್ 60 ಕೂಡ ಬೇಕಾಗಿ ಬರಬಹುದು.
  3. ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ವೋಟರ್ ಐಡಿ ಕಾರ್ಡ್ ಗಳಂತಹ ದಾಖಲೆಗಳನ್ನು ಒದಗಿಸಬಹುದಾಗಿದೆ.
  4. ಅಡ್ರೆಸ್ ಪ್ರೂಫ್ ರೂಪದಲ್ಲಿ ಯಾವುದಾದರೂ ಕರೆಂಟ್ ಬಿಲ್ ಇಲ್ಲದೆ ಯುಟಿಲಿಟಿ ಬಿಲ್ ಅನ್ನು ನೀಡಬಹುದಾಗಿದೆ.
  5. ಬ್ಯಾಂಕ್ ಡೀಟೇಲ್ಸ್ ಅನ್ನು ಒದಗಿಸಬೇಕಾಗುತ್ತದೆ.
  6. ಇನ್ನು ನಿಮ್ಮ ಸಾಲಕ್ಕೆ ಅನುಗುಣವಾಗಿ IDFC ಬ್ಯಾಂಕ್ ಕೇಳುವಂತಹ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಅನ್ನು ಕೂಡ ಒದಗಿಸಬೇಕಾಗಿರುತ್ತದೆ.

IDFC ಪರ್ಸನಲ್ ಪಡೆದುಕೊಳ್ಳುವುದು ಹೇಗೆ?- How to apply for IDFC personal Loan

Online ವಿಧಾನ

  1. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು.
  2. ವೆಬ್ಸೈಟ್ನ ಹೋಂ ಪೇಜ್ ಗೆ ಬಂದ ನಂತರ ಪರ್ಸನಲ್ ಲೋನ್ ಆಪ್ಶನ್ ಅನ್ನು ಆಯ್ಕೆ ಮಾಡಿ.
  3. ಸಂಬಂಧಪಟ್ಟಂತಹ ಪ್ರತಿಯೊಂದು ಮಾಹಿತಿಗಳು ಕೂಡ ಅಲ್ಲಿ ಕಾಣಿಸುತ್ತವೆ ಅವುಗಳನ್ನು ಸರಿಯಾದ ರೀತಿಯಲ್ಲಿ ಓದುವ ಮೂಲಕ Apply Now ಬಟನ್ ಅನ್ನು ಕ್ಲಿಕ್ ಮಾಡಿ.
  4. ನಿಮ್ಮ ಮುಂದೆ ಅರ್ಜಿ ಫಾರ್ಮ್ ಕಾಣಿಸಿಕೊಳ್ಳುತ್ತದೆ ಹಾಗೂ ನೀವು ಅದನ್ನು ಪೂರ್ತಿ ಫಿಲಪ್ ಮಾಡುವ ಮೂಲಕ ಸಬ್ಮಿಟ್ ಮಾಡಬಹುದಾಗಿದೆ.
  5. ಪ್ರತಿನಿಧಿಗಳು ನಿಮ್ಮನ್ನು ಕರೆ ಮಾಡಿ ಸಾಲ ಪಡೆದುಕೊಳ್ಳುವಂತಹ ಕೊನೆಯ ಹಂತಕ್ಕೆ ಮುಂದುವರಿಯುತ್ತಾರೆ.

Offline ವಿಧಾನ

  1. ಸಾಲ ಪಡೆದುಕೊಳ್ಳಲು ಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ ಗಳನ್ನು ಈಗಾಗಲೇ ನೀವು ತಿಳಿದುಕೊಂಡಿದ್ದೀರಿ ಅವುಗಳನ್ನು ಹಿಡಿದುಕೊಂಡು ನಿಮ್ಮ ಹತ್ತಿರದ IDFC ಬ್ಯಾಂಕಿನ ಬ್ರಾಂಚ್ ಗೆ ಹೋಗಬೇಕು.
  2. ಇದಾದ ನಂತರ ನಿಮ್ಮ ಡಾಕ್ಯುಮೆಂಟ್ ಗಳನ್ನು ವೆರಿಫೈ ಮಾಡಿಸಿ ನಂತರ ಫಾರ್ಮ್ ಗಳಲ್ಲಿ ಬೇಕಾಗಿರುವಂತಹ ಮಾಹಿತಿಗಳನ್ನು ತುಂಬಿಸಿ ಡಾಕ್ಯುಮೆಂಟ್ ಜೊತೆಗೆ ಸಬ್ಮಿಟ್ ಮಾಡಿ.
  3. ಅಲ್ಲಿ ನಿಮ್ಮ ದಾಖಲೆಗಳನ್ನು ಹಾಗೂ ಫಾರ್ಮ್ ನಲ್ಲಿ ಇರುವಂತಹ ಪರಿಶೀಲಿಸಿದ ನಂತರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಾರೆ.

IDFC ಪರ್ಸನಲ್ ಲೋನಿನ ಶುಲ್ಕ ಹಾಗೂ ಕಸ್ಟಮರ್ ಕೇರ್ ನಂಬರ್- Processing charges and Customer Care Number

  1. ಲೋನಿನ ಪ್ರೊಸೆಸಿಂಗ್ ಶುಲ್ಕ 3.5% ದಿಂದ ಪ್ರಾರಂಭವಾಗುತ್ತದೆ.
  2. EMI Bounce ಶುಲ್ಕ 400 ರೂಪಾಯಿಗಳಿಂದ ಪ್ರಾರಂಭವಾಗುತ್ತೆ.
  3. ಡುಪ್ಲಿಕೇಟ್ ಪ್ರಮಾಣ ಪತ್ರವನ್ನು ನೀಡಿದರೆ 500 ಶುಲ್ಕವನ್ನು ವಿಧಿಸಲಾಗುತ್ತದೆ.
  4. ಕ್ಯಾನ್ಸಲೇಶನ್ ಗಾಗಿ ಒಂದು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ.
  5. ಸ್ಟಾಂಪಿಂಗ್ ಶುಲ್ಕವನ್ನು ನಿಯಮಗಳಿಗೆ ಅನುಸಾರವಾಗಿ ಪಡೆದುಕೊಳ್ಳಲಾಗುತ್ತದೆ.
  6. ಒಂದು ವೇಳೆ ಸಮಯಕ್ಕೆ ಮುಂಚೆ ಪೂರ್ತಿ ಸಾಲವನ್ನು ತಿಳಿಸಿದಲ್ಲಿ 5 ಪ್ರತಿಶತ ಹಣವನ್ನು ಕಟ್ಟಲಾಗುತ್ತದೆ.
  7. ಒಂದು ವೇಳೆ ಕಂತನ್ನು ತಡವಾಗಿ ಕಟ್ಟಿದರೆ ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ.

Empower your financial goals with IDFC First Bank’s comprehensive personal loan offerings: Explore details and apply online

ಯಾವುದೇ ರೀತಿಯ ಗೊಂದಲ ಅಥವಾ ಸಮಸ್ಯೆ ಇದ್ದಲ್ಲಿ ಪ್ರಮುಖವಾಗಿ ನೀವು ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಬೇಕಾಗಿರುತ್ತದೆ. 1860 500 9900 / 1800 419 3332 ಇವುಗಳು ಬ್ಯಾಂಕಿನ ಕಸ್ಟಮರ್ ಕೇರ್ ನಂಬರ್ ಆಗಿದ್ದು ಇಲ್ಲಿ ಕರೆ ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದು.

Comments are closed.