Maruti Suzuki: ಮಾರುತಿ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ನೋಡಿ ಇಂದೇ ಖರೀದಿ ಮಾಡಿ, ಕಾರ್ ಅನ್ನು ಮನೆಗೆ ತನ್ನಿ.
Maruti Suzuki: ಭಾರತದ ಆಟೋಮೊಬೈಲ್(Automobile) ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ಬೆಳೆಯುತ್ತಿರುವ ರೀತಿ ನಿಜಕ್ಕೂ ಕೂಡ ಭಾರತದಲ್ಲಿ ಕಾರನ್ನು ಖರೀದಿಸುವವರ ಸಂಖ್ಯೆ ಯಾವ ರೀತಿಯಲ್ಲಿ ಹೆಚ್ಚಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಕೆಲವರು ಇಂಧನಪೂರಿತ ವಾಹನಗಳನ್ನು ಖರೀದಿಸಿದರೆ ಇನ್ನು ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ಇಂದಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಡಿರುವುದು ಒಳ್ಳೆಯ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವಂತಹ ಕಾರಿನ ಬಗ್ಗೆ.
ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ಭಾರತೀಯ ಆಟೋಮೊಬೈಲ್ ಕ್ಷೇತ್ರದ ಅತ್ಯಂತ ನಂಬಿಕಸ್ತ ಕಂಪನಿ ಆಗಿರುವಂತಹ ಮಾರುತಿ ಸುಜುಕಿ(Maruti Suzuki) ಕಂಪನಿಯ ಕಾರಿನ ಬಗ್ಗೆ. Maruti Suzuki Celerio ಕಾರು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಪ್ರೇಕ್ಷಕರ ನೆಚ್ಚಿನ ಕಾರುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ. Maruti arena ಡೀಲರ್ಶಿಪ್ ಗಳ ಮುಖಾಂತರ ಜೂನ್ 30ರ ಒಳಗೆ ನೀವು ಈ ಕಾರನ್ನು ಖರೀದಿಸಿದರೆ ಭರ್ಜರಿ 50,000 ವರೆಗೂ ಕೂಡ ಡಿಸ್ಕೌಂಟ್ ಸಿಗಲಿದೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದನ್ನು ಓದಿ..News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ – ಇದಕ್ಕೆ ಹೊಣೆ ಯಾರು ಗೊತ್ತೇ?
ಸೆಲರಿಯೋ ಕಾರು ನಿಮಗೆ ನಾಲ್ಕು ವೇರಿಯಂಟ್ ಗಳಲ್ಲಿ ದೊರಕುತ್ತದೆ. LXi, ZXi, VXi ಹಾಗೂ ZXi Plus ಎಂಬುದಾಗಿ ಅವುಗಳನ್ನು ಹೆಸರಿಸಲಾಗಿದೆ. Manual ವೇರಿಯಂಟ್ ಮೇಲೆ ಈ ತಿಂಗಳ ಒಳಗಾಗಿ ನೀವು 35,000 ಕ್ಯಾಶ್ ಡಿಸ್ಕೌಂಟ್ ಹಾಗೂ 15 ಸಾವಿರ ರೂಪಾಯಿ ಎಕ್ಸ್ಚೇಂಜ್ ಡಿಸ್ಕೌಂಟ್, 4000 ಕಾರ್ಪೊರೇಟ್ ಡಿಸ್ಕೌಂಟ್(Corporate Discount) ಸೇರಿದಂತೆ ಒಟ್ಟಾರೆಯಾಗಿ 54,000ಗಳ ರಿಯಾಯಿತಿಯನ್ನು ಪಡೆಯಲಿದ್ದೀರಿ. ಅದು ಕೂಡ ಜೂನ್ 30ರ ಒಳಗಾಗಿ ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದರ ಬೇಸ್ ಮಾಡೆಲ್ ಬೆಲೆ 5.37 ಲಕ್ಷ ಗಳಾಗಿದ್ದು ಇದರ ಟಾಪ್ ಮಾಡೆಲ್ ಬೆಲೆ 7.14ಲಕ್ಷ ರೂಪಾಯಿಗಳಾಗಿವೆ. ಇವುಗಳು ಎಕ್ಸ್ ಶೋರೂಮ್ ಬೆಲೆಗಳಾಗಿವೆ.
ಆಫರ್ಗಳ ಮೌಲ್ಯ ಸ್ಥಳ ಹಾಗೂ ಡೀಲರ್ಶಿಪ್ ಗಳ ಜೊತೆಗೆ ಹೆಚ್ಚು ಕಮ್ಮಿ ಆಗಬಹುದಾದ ಸಾಧ್ಯತೆ ಕೂಡ ಇದ್ದು ಇದರ ಕುರಿತಂತೆ ಕೂಡ ನೀವು ಮೊದಲೇ ನಿರ್ಧರಿಸಬೇಕಾಗುತ್ತದೆ. AMT ವೇರಿಯಂಟ್ 10,000 ಕ್ಯಾಶ್ ಡಿಸ್ಕೌಂಟ್ 15 ಸಾವಿರ ಎಕ್ಸ್ಚೇಂಜ್ ಬೋನಸ್ ಹಾಗೂ 4,000 ಕಾರ್ಪೊರೇಟ್ ರಿಯಾಯಿತಿ ಸೇರಿದಂತೆ ಒಟ್ಟಾರೆಯಾಗಿ 29,000 ರೂಪಾಯಿಗಳ ಡಿಸ್ಕೌಂಟ್ ನಲ್ಲಿ ನಿಮಗೆ ಸಿಗಲಿದೆ. ನೀವು ಕೂಡ ಈ ಆಫರ್ ನೋಡಿ ಖರೀದಿಸಬೇಕು ಎನ್ನುವಂತಹ ಯೋಚನೆ ಮಾಡಿದ್ದೆ ಆದಲ್ಲಿ ನೀವು ನಿಮ್ಮ ಹತ್ತಿರದ ಮಾರುತಿ ಸುಜುಕಿ ಅರೇನಾಗೆ ಸಂಪರ್ಕಿಸಿ ಅಲ್ಲಿಯ ಆಫರ್ ದರ ಈ ತಿಂಗಳ ಒಳಗೆ ಯಾವ ರೀತಿಯಲ್ಲಿ ಸಿಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಇದನ್ನು ಓದಿ..Dukati Panigale: ಹೊಸದಾಗಿ ಬಿಡುಗಡೆಯಾಗುತ್ತಿರುವ ಡುಕಾಟಿ- ಈ 69.99 ಲಕ್ಷದ ಬೈಕ್ ಹೇಗಿರಲಿದೆ, ಏನೆಲ್ಲಾ ಇರುತ್ತದೆ ಗೊತ್ತೇ?
Maruti Celerio ಕಾರಿನ ಇಂಜಿನ್ ಹಾಗೂ ಮೈಲೇಜ್ ವಿಚಾರವನ್ನು ತಿಳಿದುಕೊಳ್ಳುವುದಾದರೆ 1.0 ಪೆಟ್ರೋಲ್ ಇಂಜಿನ್ 67Ps 89Nm ಅನ್ನು ಜನರೇಟ್ ಮಾಡುವ ಮೂಲಕ ನಿಮಗೆ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತದೆ. CNG ಆಕ್ಷನ್ ಕೂಡ ಈ ಕಾರಿನಲ್ಲಿ ಲಭ್ಯವಿದ್ದು ಐದು ಮ್ಯಾನುವಲ್ ಹಾಗೂ ಐದು ಸ್ಪೀಡ್ AMT ಟ್ರಾನ್ಸ್ಮಿಷನ್ ಅನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ. 313 ಲೀಟರ್ಗಳ ಬೂಟ್ಸ್ ಸ್ಪೇಸ್ ಕೂಡ ಇದೆ. ನೇರವಾಗಿ ಮೈಲೇಜ್ ವಿಚಾರವನ್ನು ಮಾಡುವುದಾದರೆ ಪೆಟ್ರೋಲ್ ನಲ್ಲಿ ನಿಮಗೆ 26.68 ಕಿಲೋಮೀಟರ್ ಪ್ರತಿ ಲೀಟರ್ ಹಾಗೂ CNG ನಲ್ಲಿ ಪ್ರತಿ ಕೆಜಿಗೆ 35.6 km ಮೈಲೇಜ್ ಅನ್ನು ನೀಡುತ್ತದೆ. ಪರ್ಫಾರ್ಮೆನ್ಸ್ ಹಾಗೂ ಮೈಲೇಜ್ ಎರಡು ವಿಚಾರದಲ್ಲಿ ಕೂಡ ಮಾತ್ರವಲ್ಲದೆ ತ್ಯಂತ ದೊಡ್ಡ ಮಟ್ಟದ ಆಫರ್ ಪ್ರೈಸ್‌ಗೆ ಕೂಡ ಸೆಲರಿಯೋ ಕಾರು ನಿಮ್ಮ ಉತ್ತಮ ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ಕಂಡುಬರಲಿದೆ. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.
Comments are closed.