News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ – ಇದಕ್ಕೆ ಹೊಣೆ ಯಾರು ಗೊತ್ತೇ?

bangalore mysore expressway police report

News: ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ (Mysore Bangalore Expressway) ಶುರುವಾಗಿ ಕೆಲವು ತಿಂಗಳುಗಳಷ್ಟೇ ಕಳೆದಿದೆ, ಆದರೆ ಈ ಹೈವೇನ ಕರಾಳ ಮುಖ ಅದಾಗಲೇ ಬಯಲಾಗುತ್ತಿದೆ. ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇನಲ್ಲಿ ಅಪಘಾತಗಳು ಹೆಚ್ಚಾಗುತ್ತಿದೆ. ಈಗಾಗಲೇ ಈ ಹೈವೇನಲ್ಲಿ ಸುಮಾರು ಒಟ್ಟು 5895 ಅಪಘಾತೆಗಳು ಸಂಭವಿಸಿದ್ದು, ಇದರಲ್ಲಿ 158 ಜನರು ಮೃತರಾಗಿದ್ದಾರೆ. ಈ ಪ್ರಕರಣಗಳು ಪೋಲಿಸುರಿಗೆ ತಲೆನೋವಾಗಿದೆ.

bangalore mysore expressway police report | News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ - ಇದಕ್ಕೆ ಹೊಣೆ ಯಾರು ಗೊತ್ತೇ?
News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ - ಇದಕ್ಕೆ ಹೊಣೆ ಯಾರು ಗೊತ್ತೇ? 2

ಇಷ್ಟೊಂದು ಅಪಘಾತಗಳು ಸಂಭವಿಸುತ್ತಿರೋದು ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಪೋಲಿಸುರು ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ವಿಷಯಗಳು ಗೊತ್ತಾಗಿದೆ. ಈ ಹೈವೇನಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದ್ದು, ಇರುವ ತೊಂದರೆಗಳನ್ನು ಬೇಗ ಸುರಿಮಾಡಬೇಕು ಎಂದು ಪೋಲಿಸುರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಪಘಾತ ತಪ್ಪಬೇಕು ಎಂದು NHAI ಹೊಸದಾದ AI ಕ್ಯಾಮರಾಗಳನ್ನು ಅಳವಡಿಸುವುದಾಗಿ ಹೇಳಿದ್ದು, ಆದರೆ ಇನ್ನೂ ಅಳವಡಿಸಿಲ್ಲ. ಟೋಲ್ ಗಳ ಹತ್ತಿರ ಮಾತ್ರ ಕ್ಯಾಮೆರ ಇದೆ, ಹೀಗಿದ್ದಾಗ ರಸ್ತೆಗಳಲ್ಲಿ ಅಪಘಾತ ನಡೆದು ಹಿಟ್ ಅಂಡ್ ರನ್ ಕೇಸ್ ಆಗಿದ್ದರೆ.. ಇದನ್ನು ಓದಿ..Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.

ಆರೋಪಿಯನ್ನು ಹಿಡಿಯಲು ಕಷ್ಟವಾಗಿ ಪೊಲೀಸರಿಗೆ ತೊಂದರೆ ಆಗಿದೆ. ಗ್ರಾಮಗಳಿಗೆ ಸಂಪರ್ಕ ಮಾಡಬಹುದಾದ ಮೇಲ್ಸೇತುವೆ ಕೆಳಸೇತುವೆ ಹತ್ತಿರ ವಾಹನ ನಿಲ್ಲಿಸುದಕ್ಕೆ ತೊಂದರೆಯಾಗಿದೆ. ಒಂದು ವೇಳೆ ಅಪಘಾತ ಆದಾಗ ಆ ವಾಹನನ್ನು ಶಿಫ್ಟ್ ಮಾಡಲಿ ಸುರಿಯಾದ ಟೊಯ್ ವ್ಯವಸ್ಥೆ ಇಲ್ಲ, ಇನ್ನು ಹೆಚ್ಚು ಟೊಯ್ ವಾಹನ ಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಬಾಬಾ ಸಾಹೇಬರ ಪಾಳ್ಯ, (ಕೆಂಗೇರಿ ಚೆಕ್‌ಪೋಸ್ಟ್‌), ಕಣಿಮಿಣಿಕಿ, ಹನುಮಂತನಗರ, ಎಸ್‌.ಬಿ ದೊಡ್ಡಿ, ಸಂಕಲಗೆರೆ ಕ್ರಾಸ್‌, ಬೆಳಕೆರೆ ಇಲ್ಲೆಲ್ಲಾ ಸ್ಕೈವಾಕ್ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಈಗ ಕಂಡುಬಂದಿರುವ ತೊಂದರೆಗಳ ಪಟ್ಟಿ ಹೀಗಿದೆ. *ಅವೈಜ್ಞಾನಿಕ ಸೂಚನೆಯ ಫಲಕ ಮತ್ತು ಬ್ಲಿಂಕರ್ಸ್ ಅಳವಡಿಕೆ.
*ಸಿಗ್ನಲ್ ಸೂಚನೆ ಮತ್ತು ಬೆಳಕು ವಾಹನ ಚಲಿಸುವವರಿಗೆ ಸರಿಯಾಗಿ ಕಾಣುತ್ತಿಲ್ಲ.
*ಬಿಡದಿ ಹಾಗೂ ರಾಮನಗರಗಳಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಫಲಕಗಳನ್ನು ಅಳವಡಿಸಿಲ್ಲ.
*ಜಯಪುರ ಹಾಗು ಇನ್ನಿತರ ಊರುಗಳ ಹತ್ತಿರ ರಸ್ತೆ ಒಂದು ಸಮವಾಗಿಲ್ಲ.
*ಜಯಪುರ ರೋಡ್ ನಲ್ಲಿ ಇದ್ದಕ್ಕಿದ್ದ ಹಾಗೆ ರಸ್ತೆ ಎತ್ತರವಾಗಲಿದ್ದು, 300ಮೀಟರ್ ಬಳಿಕ ಇದ್ದಕ್ಕಿದ್ದ ಹಾಗೆ ತಗ್ಗಿ ಹೋಗಿದೆ. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.

*ರಸ್ತೆಯಲ್ಲಿ ಬಿದ್ದಿರುವ ಮರಳನ್ನು ಯಾರು ಕ್ಲೀನ್ ಮಾಡುತ್ತಿಲ್ಲ.
*ಇಳಿಜಾರು ಇರುವಂಥ ಪ್ರದೇಶದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿಲ್ಲ.
*ಕ್ಯಾಮೆರಾಗಳನ್ನು ಅಳವಡಿಸಿಲ್ಲ.
ಸರ್ಕಾರ ಏನೋ ಜನರಿಗೆ ಅನುಕೂಲ ಆಗಲಿ ಎಂದು ರಸ್ತೆಯನ್ನು ತಯಾರಿಸಿದೆ. ಆದರೆ ಜನರು ಕೂಡ ತಮಗೆ ಸಿಕ್ಕ ಸೌಲಭ್ಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು ಜನರ ಜವಾಬ್ದಾರಿ ಕೂಡ ಹೌದು. ಜನರು ಹೀಗೆ ತಪ್ಪು ಮಾಡಿದರೆ, ಹೆದ್ದಾರಿ ಏನು ತಾನೇ ಮಾಡೀತು.. ಇದನ್ನು ಓದಿ..Mahindra Thar: ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ ವಿಶೇಷ ಹೊಸ ಥಾರ್ – ಈ ಬಾರಿಯ ವಿಶೇಷತೆ ಏನೆಲ್ಲಾ ಇರಬಹುದು ಗೊತ್ತೇ?

Comments are closed.