Puneeth Raj Kumar: ಪ್ರಿಯಾಮಣಿ ರವರಿಗೆ ಶಾರುಖ್ ಜೊತೆ ನಟಿಸುವ ಅವಕಾಶ ಸಿಗಲು ಪುನೀತ್ ಕಾರಣವಂತೆ. ಪುನೀತ್ ರವರೆ ಕಾರಣ.
Puneeth Raj Kumar: ನಟಿ ಪ್ರಿಯಾಮಣಿ (Priyamani) ಅವರು ಎಲ್ಲರಿಗೂ ಗೊತ್ತಿರುವ ನಟಿ, ಮೂಲತಃ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಿಯಾಮಣಿ ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದರು, ಪರುತ್ತಿವೀರನ್ ಸಿನಿಮಾದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದರು. ಬಳಿಕ ತೆಲುಗಿನಲ್ಲು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಇವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ಜೊತೆಗೆ ರಾಮ್ (Ram) ಸಿನಿಮಾ ಮೂಲಕ.
ಪುನೀತ್ ರಾಜ್ ಕುಮಾರ್ (Puneeth Raj lKumar) ಪ್ರಿಯಾಮಣಿ ಕಾಂಬಿನೇಷನ್ ನ ಈ ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ ಹಾಡುಗಳು ವೈರಲ್ ಆಗಿತ್ತು. ಬಳಿಕ ಪುನೀತ್ ರಾಜ್ ಕುಮಾರ್ (Puneeth Raj Kumar) ಅವರ ಜೊತೆಗೆ ಅಣ್ಣಾ ಬಾಂಡ್ ಸಿನಿಮಾದಲ್ಲಿ ನಟಿಸಿದರು ಪ್ರಿಯಾಮಣಿ. ಗಣೇಶ್ (Ganesh) ಅವರೊಡನೆ ಏನೋ ಒಂಥರಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದರು. ಈಗ ಪ್ರಿಯಾಮಣಿ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ. ಇದನ್ನು ಓದಿ..SBI WhatsApp Banking: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೇ, ಮನೆಯಲ್ಲಿಯೇ ಕುಳಿತು ಎಲ್ಲಾ ಬ್ಯಾಂಕ್ ಕೆಲಸ ಮುಗಿಸುವುದು ಹೇಗೆ ಗೊತ್ತೇ?
ಸೌತ್ ಇಂಡಿಯಾದಲ್ಲಿ ಮಾತ್ರವಲ್ಲದೆ ಪ್ರಿಯಾಮಣಿ ಅವರು ಬಾಲಿವುಡ್ (Bollywood) ನಲ್ಲೂ ಕಮಾಲ್ ಮಾಡಿದ್ದಾರೆ. ಅದು ಶಾರುಖ್ ಖಾನ್ (Shahrukh Khan) ಅವರೊಡನೆ ಚೆನ್ನೈ ಎಕ್ಸ್ಪ್ರೆಸ್ (Chennai Express) ಸಿನಿಮಾಡ್ಸ್ ಹಾಡೊಂದರಲ್ಲಿ ಹೆಜ್ಜೆ ಹಾಕುವ ಮೂಲಕ. ಪ್ರಿಯಾಮಣಿ ಅವರಿಗೆ ಶಾರುಖ್ ಖಾನ್ ಅವರೊಡನೆ ನಟಿಸಬೇಕು ಎನ್ನುವುದು ದೊಡ್ಡ ಕನಸು. ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಪ್ರಿಯಾಮಣಿ. ಶಾರುಖ್ ಖಾನ್ ಅವರೊಡನೆ ಡ್ಯಾನ್ಸ್ ಮಾಡುವ ಅವಕಾಶ ಸಿಗುವುದಕ್ಕೆ ಕಾರಣ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj Kumar) ಅವರು ಎಂದು ಸ್ವತಃ ಪ್ರಿಯಾಮಣಿ ಅವರೇ ಹೇಳಿದ್ದಾರೆ.
ಒಂದು ದಿನ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರ ಆಫೀಸ್ ಇಂದ ಕಾಲ್ ಬಂದು, ಅವರ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಬೇಕು ಎಂದಾಗಜ್ ಪ್ರಿಯಾಮಣಿ ಅವರು ನಂಬಲಿಲ್ಲವಂತೆ, ನಿಜವಾಗಿಯೂ ರೋಹಿತ್ ಶೆಟ್ಟಿ ಅವರ ಆಫೀಸ್ ಇಂದಲೇ ಕಾಲ್ ಮಾಡುತ್ತಿರುವುದು, ಸಿನಿಮಾದ ಹಾಡೊಂದಕ್ಕೆ ನೀವು ಡ್ಯಾನ್ಸ್ ಮಾಡಬೇಕು ಎಂದು ಹೇಳಿ, ರೋಹಿತ್ ಶೆಟ್ಟಿ ಅವರ ಆಫೀಸ್ ಗೆ ಹೋದಾಗ ಶಾರುಖ್ ಖಾನ್ ಅವರ ಜೊತೆಗೆ ಈ ಹಾಡು ಎಂದು ಗೊತ್ತಾಗಿತ್ತಂತೆ. ಇದನ್ನು ಓದಿ..LIC: ಧನ್ ವೃದ್ಧಿ ಎಂದು ಹಣಕ್ಕಾಗಿ, ಜೀವವಿಮೆಗಾಗಿ ಹೊಸ ಪಾಲಿಸಿ ಬಿಡುಗಡೆ ಮಾಡಿದ LIC – ಕಡಿಮೆ ಹಣ ಕಟ್ಟಿ ಹೆಚ್ಚು ಲಾಭ ಗಳಿಸಿ.
ಪ್ರಿಯಾಮಣಿ ಅವರಿಗೆ ಸಂತೋಷ ಮತ್ತು ಆಶ್ಚರ್ಯ ಎರಡು ಆಗಿ, ನನ್ನನ್ನೇ ಈ ಹಾಡಿಗೆ ಯಾಕೆ ಆಯ್ಕೆ ಮಾಡಿದ್ರಿ ಎಂದು ಕೇಳಿದ್ದಕ್ಕೆ, ಪುನೀತ್ ರಾಜ್ ಕುಮಾರ್ (Puneeth Raj Kumar) ಅವರೊಡನೆ ನೀವು ಡ್ಯಾನ್ಸ್ ಮಾಡಿದ ಹಾಡು ನೋಡಿ ತುಂಬಾ ಇಷ್ಟವಾಗಿ ಆಯ್ಕೆ ಮಾಡಿದ್ದು ಎಂದು ಹೇಳಿದರಂತೆ ನಿರ್ದೇಶಕ ರೋಹಿತ್ ಶೆಟ್ಟಿ. ಈ ರೀತಿಯಾಗಿ ತಮಗೆ ಅವಕಾಶ ಸಿಗಲು ಅಪ್ಪು ಅವರು ಪರೋಕ್ಷವಾಗಿ ಕಾರಣ ಎಂದು ಪ್ರಿಯಾಮಣಿ ಅವರು ಹೇಳಿದ್ದು, ಅಪ್ಪು ಅವರು ತಮಗೆ ಒಳ್ಳೆಯ ಫ್ರೆಂಡ್, ಬಹಳ ಸ್ವೀಟ್ ಆದ ವ್ಯಕ್ತಿ, ಈಗಲೂ ನನಗೆ ಅತ್ಯಂತ ಆತ್ಮೀಯರು ಎಂದು ಹೇಳಿದ್ದಾರೆ. ಇದನ್ನು ಓದಿ..Mahindra Thar: ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ ವಿಶೇಷ ಹೊಸ ಥಾರ್ – ಈ ಬಾರಿಯ ವಿಶೇಷತೆ ಏನೆಲ್ಲಾ ಇರಬಹುದು ಗೊತ್ತೇ?
Comments are closed.