SBI WhatsApp Banking: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೇ, ಮನೆಯಲ್ಲಿಯೇ ಕುಳಿತು ಎಲ್ಲಾ ಬ್ಯಾಂಕ್ ಕೆಲಸ ಮುಗಿಸುವುದು ಹೇಗೆ ಗೊತ್ತೇ?
SBI WhatsApp Banking: ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India) ದೇಶ್ಯಾದ್ಯಂತ ಕೋಟ್ಯಾಂತರ ಗ್ರಾಹಕರನ್ನು ತನ್ನೊಂದಿಗೆ ಸಾಕಷ್ಟು ವರ್ಷಗಳ ಬ್ಯಾಂಕಿಂಗ್ ಜರ್ನಿಯಲ್ಲಿ ಜೋಡಿಸಿಕೊಂಡಿದೆ. ಇನ್ನು ದೇಶದಲ್ಲಿ ಇರುವಂತಹ ಸಾಕಷ್ಟು ಬ್ಯಾಂಕುಗಳು ಮಾತ್ರವಲ್ಲದೆ ವಿದೇಶಗಳಲ್ಲಿ ಇರುವಂತಹ ಬ್ಯಾಂಕುಗಳು ಕೂಡ ಗ್ರಾಹಕರಿಗೆ ಆನ್ಲೈನ್ ಮುಖಾಂತರವೇ ಬ್ಯಾಂಕಿಂಗ್ ಸೇವೆಗಳನ್ನು ನೀಡುವಂತಹ ಕಾರ್ಯಾಚರಣೆಯನ್ನು ಸಾಕಷ್ಟು ವರ್ಷಗಳ ಹಿಂದೇನೆ ಆರಂಭಿಸಿದೆ. ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ವಾಟ್ಸಾಪ್ ಬ್ಯಾಂಕಿಂಗ್ ಅನ್ನು ಪ್ರಾರಂಭಿಸಿದೆ.

ಈ ಮೂಲಕ ಒಂದು ವೇಳೆ ನೀವು ನಿಮ್ಮ SBI ಬ್ಯಾಂಕಿಗೆ ಹೋಗುತ್ತಿದ್ದರೆ ಅಲ್ಲಿ ಕೆಲವೊಮ್ಮೆ ಜನಜಂಗುಳಿ ಹೆಚ್ಚಾಗಬಹುದು ಹೀಗಾಗಿ ಕೆಲವೊಂದು ಚಿಕ್ಕ ಪುಟ್ಟ ವಿಚಾರಗಳನ್ನು ವಾಟ್ಸಾಪ್ ಬ್ಯಾಂಕಿಂಗ್ ಮೂಲಕವೇ ನೀವು ಮಾಡಬಹುದಾಗಿದೆ ಎನ್ನುವಂತಹ ಹೊಸ ನಿಯಮವನ್ನು ಕೂಡ ಎಸ್ ಬಿ ಐ(SBI) ಹೊರ ಹಾಕಿದೆ. ವಾಟ್ಸಾಪ್ ಕೇವಲ ಮೆಸೇಜ್ ಗಳನ್ನು ಕಳುಹಿಸಲು ಮಾತ್ರವಲ್ಲದೆ ಬ್ಯಾಂಕಿಂಗ್ ಸೇವೆಯನ್ನು ಕೂಡ ಎಂಜಾಯ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಹಾಗಿದ್ದರೆ ಬನ್ನಿ SBI ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಯಾವೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಇದನ್ನು ಓದಿ..Siddaramaiah: ಡಿಕೆಶಿ ಪಕ್ಕಕ್ಕೆ ತಳ್ಳಿ ಸಿಎಂ ಆಗಿದ್ದ ಸಿದ್ದು ಗೆ ಟೆನ್ಶನ್ ಮೇಲೆ ಟೆನ್ಶನ್- ಪಾಪ ಮುಖ್ಯಮಂತ್ರಿ ಕಥೆ ಏನಾಗಿದೆ ಗೊತ್ತೇ??
SBI ವೆಬ್ ಸೈಟಿನಲ್ಲಿ ತಿಳಿದು ಬಂದಿರುವ ಪ್ರಕಾರ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಪಡೆದುಕೊಳ್ಳುವಂತಹ ಪ್ರಯೋಜನಗಳೇನೆಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್(Bank Balance) ಇದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಮಿನಿ ಸ್ಟೇಟ್ಮೆಂಟ್, ಪಿಂಚಣಿ ಸೇವೆ, ಸಾಲದ ವಸ್ತುವಿನ ಮಾಹಿತಿ, ಡೆಪೋಸಿಟ್(Deposit) ಮಾಡಿರುವಂತಹ ವಸ್ತುಗಳ ಮೇಲಿನ ಮಾಹಿತಿ. NRI ಸೇವೆಗಳು, ಈಗಾಗಲೇ Approved ಆಗಿರುವಂತಹ ಲೋನ್ಗಳ ಮೇಲೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಪಡೆಯಲು, ಬ್ಯಾಂಕಿಂಗ್ ಇನ್ಫಾರ್ಮೇಶನ್, ಡಿಜಿಟಲ್ ಬ್ಯಾಂಕಿಂಗ್, ಹಾಲಿಡೇ ಕ್ಯಾಲೆಂಡರ್, ಡೆಬಿಟ್ ಕಾರ್ಡ್ ಬಳಕೆಯ ಮೇಲೆ ಮಾಹಿತಿ, ಕಳೆದುಕೊಂಡಿರುವ ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ಹಾಗೂ ಹತ್ತಿರದಲ್ಲಿರುವ ಎಟಿಎಂ ಹಾಗೂ ಬ್ಯಾಂಕಿನ ಬ್ರಾಂಚ್ ನ ವಿಳಾಸ ತಿಳಿಯಲು ನೀವು ವಾಟ್ಸಾಪ್ ಬ್ಯಾಂಕಿಂಗ್ ಅನ್ನು ಬಳಸಬಹುದಾಗಿದೆ.
ಇನ್ನು ನೀವು ಎಸ್ಬಿಐ(SBI) ಗ್ರಾಹಕರಾಗಿದ್ದರೆ ವಾಟ್ಸಾಪ್ ಬ್ಯಾಂಕಿಂಗ್ಗೆ ಹೇಗೆ ರಿಜಿಸ್ಟರ್ ಮಾಡಿಕೊಳ್ಳುವುದು ಎಂಬ ಬಗ್ಗೆ ನಿಮಗೆ ತಿಳಿಸಲು ಹೊರಟಿದ್ದೇವೆ ಸಂಪೂರ್ಣ ವಿವರವಾಗಿ ಓದಿ. ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಇಂದ +917208933148 ನಂಬರ್ಗೆ ” WAREG ಎಂದು ಬರೆದು ನಿಮ್ಮ ಅಕೌಂಟ್ ನಂಬರ್ ಅನ್ನು ಹಾಕಿ ಸೆಂಡ್ ಮಾಡಬೇಕು. ಈ ರೀತಿ ಮಾಡುವುದರ ಮೂಲಕ ನೀವು ರಿಜಿಸ್ಟರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಂತೆ ಎಂದಾಗುತ್ತದೆ. ಇದನ್ನು ಓದಿ..Business Idea: ಕೆಲಸ ಮಾಡುತ್ತಾ ಈ ಬಿಸಿನೆಸ್ ಆರಂಭ ಮಾಡಿ- ಕೈತುಂಬಾ ಕಾಸು, ನಿಮಗೆ ನೀವೇ ಬಾಸ್. ಯೋಚನೆ ಮಾಡಿ ಟ್ರೈ ಮಾಡಿ. ಲಾಸ್ ಅಂತೂ ಇಲ್ಲ.
ಇದಾದ ನಂತರ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ನ ವಾಟ್ಸಾಪ್ಗೆ(WhatsApp) ಈ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವಂತಹ ಕನ್ಫರ್ಮೇಶನ್ ಬರುತ್ತದೆ. +919022690226 ಈ ನಂಬರ್ಗೆ ಹಾಯ್ ಎಂದು ಮೆಸೇಜ್ ಮಾಡಿದರೆ ಸಾಕು ಚಾಟ್ ಬಾಟ್(Chat Bot) ನಿಮಗೆ ಬೇಕಾಗಿರುವಂತಹ ಮಾಹಿತಿಗಳು ನಿಮಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತದೆ. ಇನ್ನು ಯಾರೆಲ್ಲಾ ಈ ಯೋಜನೆಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದೆಂದರೆ ಬ್ಯಾಂಕಿನಲ್ಲಿ ಈಗಾಗಲೇ ಸೇವಿಂಗ್ ಖಾತೆ ಕರೆಂಟ್ ಖಾತೆ ಹಾಗೂ NRI ಖಾತೆಗಳ ಹೋಲ್ಡರ್ ಗಳು ಹಾಗೂ CC OD ಸೇವೆಯನ್ನು ಪಡೆಯುವ ವ್ಯಕ್ತಿಗಳು ಈ ವಾಟ್ಸಾಪ್ ಬ್ಯಾಂಕಿಂಗ್(WhatsApp Banking) ಸೌಲಭ್ಯವನ್ನು ಉಪಯೋಗಿಸಬಹುದಾಗಿ. ಇದನ್ನು ಓದಿ..Make Money: ಮನೆಯಲ್ಲಿಯೇ ಕೂತು- ಹೆಚ್ಚಿನ ಕೆಲಸ ಮಾಡದೇ ಇನ್ಸ್ಟಾಗ್ರಾಮ್ ನಿಂದ ದುಡ್ಡು ಮಾಡಿ
Comments are closed.