Hyundai Exter: ಸನ್ ರೂಫ್, ಆರು ಏರ್ ಬ್ಯಾಗ್, ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಿದೆ. ಏನೆಲ್ಲಾ ಇರಲಿದೆ ಗೊತ್ತೇ?

hyundai-exter car feature explained in kannada

Hyundai Exter: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ SUV ಸೆಗ್ಮೆಂಟ್ ನಲ್ಲಿ ಇದೇ ಜುಲೈ 10 ಕ್ಕೆ ಬಿಡುಗಡೆಯಾಗಲಿರುವಂತಹ ಹುಂಡೈ ಎಕ್ಸ್ಟರ್(Hyundai Exter) ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಬಿಡುಗಡೆಗು ಮುಂಚೆನೇ ತನ್ನ ವಿಶೇಷತೆಗಳ ಮೂಲಕ ಪ್ರೇಕ್ಷಕರ ಗಮನವನ್ನು ಹಾಗೂ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ Sunroof ವಾಯ್ಸ್ ಕಮಾಂಡ್ ನಿಂದ ಸಂಚಲಿತವಾಗುತ್ತದೆ. ಈಗಾಗಲೇ ಈ ಕಾರಿನ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದ್ದು 11,000ಗಳನ್ನು ಮುಂಗಡ ಹಣವಾಗಿ ನೀಡಿ ಗ್ರಾಹಕರು ಈಗಾಗಲೇ ಈ ಕಾರನ್ನು ಬುಕಿಂಗ್ ಮಾಡುತ್ತಿದ್ದಾರೆ. ಇದು Compact SUV ವಿಭಾಗದಲ್ಲಿ ಬರಲಿದ್ದು ಈಗಾಗಲೇ ಚೆನ್ನೈನಲ್ಲಿರುವ ಪ್ಲಾಂಟ್ನಲ್ಲಿ ಪ್ರೊಡಕ್ಷನ್ ಕೂಡ ಭರದಿಂದ ಸಾಗುತ್ತಿದೆ.

hyundai exter car feature explained in kannada | Hyundai Exter: ಸನ್ ರೂಫ್, ಆರು ಏರ್ ಬ್ಯಾಗ್, ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಿದೆ. ಏನೆಲ್ಲಾ ಇರಲಿದೆ ಗೊತ್ತೇ?
Hyundai Exter: ಸನ್ ರೂಫ್, ಆರು ಏರ್ ಬ್ಯಾಗ್, ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಿದೆ. ಏನೆಲ್ಲಾ ಇರಲಿದೆ ಗೊತ್ತೇ? 2

Hyundai Exter ಈಗಾಗಲೇ ತನ್ನ ಹೊಸ ಕಾರನ್ನು ಐದು ವೇರಿಯಂಟ್ ಗಳಲ್ಲಿ ಪರಿಚಯಿಸಲಿದೆ. EX, S, SX, SX(O) ಹಾಗೂ ಟಾಪ್ ಮಾಡೆಲ್ ನಲ್ಲಿ ಕೂಡ SX(O) ಕಂಡು ಬರುತ್ತದೆ. ಈ ಟಾಪ್ ಎಂಡ್ ಮಾಡೆಲ್ ನಲ್ಲಿ ಕೆಲವೊಂದು ಕನೆಕ್ಟೆಡ್ ಕಾರ್ ವಿಶೇಷತೆಗಳನ್ನು ಕೂಡ ಕಾಣಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಈ ರೀತಿಯ ವಿಶೇಷತೆಗಳನ್ನು ಹೊಂದಿರುವಂತಹ ಟಾಟಾ ಪಂಚ್(Tata Punch) ನಿಸಾನ್ ಮ್ಯಾಗ್ನೆಟ್ ನಂತಹ ಕಾರುಗಳಿಗೆ ಇದು ಟಕ್ಕರ್ ಕಾಂಪಿಟೇಶನ್ ನೀಡಲಿದೆ. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.

Exter ಕಾರಿನ ಇಂಜಿನ್ ಹಾಗೂ ಪರ್ಫಾರ್ಮೆನ್ಸ್ ಕುರಿತಂತೆ ಮಾತನಾಡುವುದಾದರೆ ಇದು 1.2 ಲೀಟರ್ Kappa ಪೆಟ್ರೋಲ್ ಇಂಜಿನ್ ಅನ್ನು ಬಳಸುತ್ತದೆ. ಇದರ ಪವರ್ ಔಟ್ ಪುಟ್ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಕೂಡ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇದರಲ್ಲಿ 83 ಹೆಚ್ ಪಿ ಪವರ್ ಹಾಗೂ 114NM ಟಾರ್ಕ್ ಅನು ಉತ್ಪಾದಿಸುತ್ತದೆ ಮಾತ್ರವಲ್ಲದೆ CNG ವೇರಿಯಂಟ್ ನಲ್ಲಿ ಕೂಡ ಇದು ನಿಮಗೆ ಕಂಡು ಬರುತ್ತದೆ. ಐದು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಈ ಕಾರಿನಲ್ಲಿ ನೀವು ಕಾಣಬಹುದಾಗಿದೆ.

ಕಾರಿನ ಸುರಕ್ಷಿತ ವಿಚಾರಗಳನ್ನು ಹೇಳುವುದಾದರೆ ಈ ವಿಚಾರದಲ್ಲಿ ಕೂಡ Exter ಎಲ್ಲಾ ಸುರಕ್ಷಿತ ನಿಯಮಗಳನ್ನು ಪಾಸ್ ಮಾಡಿಕೊಂಡು ಬಂದಿದ್ದು ಮಾತ್ರವಲ್ಲದೆ ಈ ಲಾಂಚ್ ಮಾಡುತ್ತಿರುವ ಕಾರಿನಲ್ಲಿ ಒಟ್ಟಾರೆಯಾಗಿ 40 ಕ್ಕೂ ಅಧಿಕ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದ್ದು ಅದರಲ್ಲೂ ವಿಶೇಷವಾಗಿ ಬಿಡುಗಡೆ ಮಾಡುತ್ತಿರುವಂತಹ ಎಲ್ಲಾ ವೇರಿಯಂಟ್ ಗಳಲ್ಲಿ ಕನಿಷ್ಠ ಪಕ್ಷ 26 ಸುರಕ್ಷಿತ ಕ್ರಮಗಳು ಇದ್ದೇ ಇರುತ್ತವೆ. ಈ ಕಾರಿನ ಮೂಲಕವೇ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ Ranger Khaki ಎನ್ನುವಂತಹ ಕಲರ್ ಆಪ್ಷನ್ ನಲ್ಲಿ ಕೂಡ ಬಿಡುಗಡೆ ಮಾಡುತ್ತಿದ್ದು ಇದೇ ಮೊದಲು ಎನ್ನುವ ರೀತಿ ಎಂದು ಹೇಳಬಹುದಾಗಿದೆ. ಇದನ್ನು ಓದಿ..Bank Fraud Tips: ಕರೆ ಮೂಲಕ ನಿಮಗೆ ಯಾರಾದರೂ ಟೋಪಿ ಹಾಕಿದರೆ, ತಕ್ಷಣ ಈ ನಂಬರ್ ಕಾಲ್ ಮಾಡಿದರೆ, ನಿಮ್ಮ ಹಣ ವಾಪಸ್ಸು ಬರುತ್ತದೆ. ಏನು ಮಾಡಬೇಕು ಗೊತ್ತೆ?

Exter SUV ನಲ್ಲಿ ಪ್ರಮುಖವಾಗಿ ವಿಶೇಷ ಎನಿಸುವಂತಹ ವಿಚಾರ ಎಂದರೆ Voice Command ಮೂಲಕ ನೀವು ನಿಮ್ಮ ಸನ್ರೂಫ್ ಅನ್ನು ಓಪನ್ ಮಾಡಬಹುದಾಗಿದೆ. ಕೇವಲ I Want To See The Sky ಎಂದು ಹೇಳಿದ್ರೆ ಸಾಕು ಓಪನ್ ಆಗುತ್ತದೆ. ಇದರ ಜೊತೆಗೆ ಈ ಕಾರಿನಲ್ಲಿ ಇರುವಂತಹ ಡ್ಯಾಶ್ ಕ್ಯಾಂಪ್ ಕೂಡ ಫ್ರಂಟ್ ಹಾಗೂ ಹಿಂದಿನ ಆಂಗಲ್ ವೀಕ್ಷಣೆಯನ್ನು ಕೂಡ ಹೊಂದಿದೆ. 2.31 ಇಂಚಿನ LCD ಡಿಸ್ಪ್ಲೇ ಅನ್ನು ಕೂಡ ಈ ಕಾರು ಹೊಂದಿದೆ. ಈ ಕಾರಿನ ಬೆಲೆ 6 ಲಕ್ಷ ರೂಪಾಯಿಗಳ ಆಸು ಪಾಸಿನಲ್ಲಿ ಇರಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನು ಓದಿ..Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.

Comments are closed.