Best Selling Car: ಕಳೆದ ತಿಂಗಳಿನಲ್ಲಿ ಹೆಚ್ಚು ಮಾರಾಟ ಆಗಿರುವ ಕಾರ್ ಗಳು ಯಾವುವು ಗೊತ್ತೇ?? ನೋಡಿ ನೀವು ಖರೀದಿ ಮಾಡಿ. ಜನರು ಖರೀದಿ ಮಾಡುತ್ತಿರುವುದು ಯಾಕೆ ಗೊತ್ತೆ?

tata best selling cars may 2023

Best Selling Car: ಜಾಗತಿಕ ಮಟ್ಟದಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಭಾರತದಲ್ಲಿ ನಾವು ಗಮನಿಸಿದರೆ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಕಾರುಗಳ ಪೈಕಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಾರುತಿ ಸುಜುಕಿ(Maruti Suzuki) ಹಾಗೂ ಹುಂಡೈ(Hyundai) ಸಂಸ್ಥೆಗಳ ನಂತರ ಭಾರತೀಯ ಆಟೋಮೊಬೈಲ್ ಸಂಸ್ಥೆ ಆಗಿರುವಂತಹ ಟಾಟಾ ಮೋಟರ್ಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 2022ರ ಮೇ ತಿಂಗಳಲ್ಲಿ ಟಾಟಾ ಮೋಟಾರ್ಸ್(Tata Motors) ಸಂಸ್ಥೆ 76210 ಕಾರುಗಳನ್ನು ಮಾರಾಟ ಮಾಡಿತ್ತು ಆದರೆ ಅದಕ್ಕೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಿನಲ್ಲಿ 74,973 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕೇವಲ 2 ಪ್ರತಿಶತ ಕಾರು ಮಾರಾಟ ಕೆಳಕ್ಕೆ ಕುಸಿದಿದೆ. ಬೇರೆ ಕಂಪನಿಗಳ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರುಗಳಾಗಿರುವ ಬ್ರೆಜ್ಜ ಹಾಗೂ ಆಲ್ಟೊ ಕಾರುಗಳನ್ನು ಕೂಡ ಟಾಟಾ ಮೋಟಾರ್ಸ್ ಸಂಸ್ಥೆಯ ಈ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರು ಹಿಂದಿಕ್ಕಿದೆ.

tata best selling cars may 2023 | Best Selling Car: ಕಳೆದ ತಿಂಗಳಿನಲ್ಲಿ ಹೆಚ್ಚು ಮಾರಾಟ ಆಗಿರುವ ಕಾರ್ ಗಳು ಯಾವುವು ಗೊತ್ತೇ?? ನೋಡಿ ನೀವು ಖರೀದಿ ಮಾಡಿ. ಜನರು ಖರೀದಿ ಮಾಡುತ್ತಿರುವುದು ಯಾಕೆ ಗೊತ್ತೆ?
Best Selling Car: ಕಳೆದ ತಿಂಗಳಿನಲ್ಲಿ ಹೆಚ್ಚು ಮಾರಾಟ ಆಗಿರುವ ಕಾರ್ ಗಳು ಯಾವುವು ಗೊತ್ತೇ?? ನೋಡಿ ನೀವು ಖರೀದಿ ಮಾಡಿ. ಜನರು ಖರೀದಿ ಮಾಡುತ್ತಿರುವುದು ಯಾಕೆ ಗೊತ್ತೆ? 2

ಹೌದು ಸದ್ಯಕ್ಕೆ ಟಾಟಾ ಮೋಟರ್ಸ್ ಸಂಸ್ಥೆಯ ಅತ್ಯಂತ ಹೆಚ್ಚು ಮಾರಾಟ ಆಗುವ ಕಾರು ಟಾಟಾ ನೆಕ್ಸನ್(Tata Nexon) ಆಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಟಾಟಾ ನೆಕ್ಸನ್ ಕಾರು 14,423 ಯೂನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಸಂಸ್ಥೆಯ ನಂಬರ್ ಒನ್ ಕಾರು ಮಾರಾಟ ಆಗುವಂತಹ ವೇರಿಯಂಟ್ ಆಗಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಒಂದು ಪ್ರತಿಶತ ಕಡಿಮೆ ಸೇಲ್ ಆಗಿದ್ದರೂ ಕೂಡ ಹುಂಡೈ ಕ್ರೆಟಾ(Hyundai Creta) ಕಾರಿನ ನಂತರ ಎರಡನೇ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ದೇಶದ SUV ಕಾರ್ ಎನ್ನುವಂತಹ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಓದಿ..SBI WhatsApp Banking: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೇ, ಮನೆಯಲ್ಲಿಯೇ ಕುಳಿತು ಎಲ್ಲಾ ಬ್ಯಾಂಕ್ ಕೆಲಸ ಮುಗಿಸುವುದು ಹೇಗೆ ಗೊತ್ತೇ?

ಈ ಕಾರಿನ ವಿಶೇಷತೆಗಳಿಂದ ಹಿಡಿದು ಬೆಲೆಯವರೆಗೆ ಎಲ್ಲಾ ವಿವರಗಳನ್ನು ತಿಳಿಸುತ್ತೇವೆ. ಕಾರಿನ ಬೇಸಿಕ್ ಮಾಡೆಲ್ 7.80 ಲಕ್ಷ ರೂಪಾಯಿಗಳಿಂದ ಪ್ರಾರಂಭವಾದರೆ ಟಾಪ್ ಎಂಡ್ ಮಾಡೆಲ್ 14.30 ಲಕ್ಷ ವರೆಗೆ ಎಕ್ಸ್ ಶೋರೂಮ್ ಬೆಲೆ ಇರುತ್ತದೆ. Dual Airbags ಗಳನ್ನು ಮುಂದೆ ಇಟ್ಟಿರುವ ಕಾರಣದಿಂದಾಗಿ ಸುರಕ್ಷತೆ ವಿಚಾರದಲ್ಲಿ ಯಾವುದೇ ಚಿಂತಪಡಬೇಕಾದ ಅಗತ್ಯವಿಲ್ಲ. ಘರ್ಷಣೆಯ ಕಂಟ್ರೋಲ್ ಅನುಕೂಲ ಇಲ್ಲಿ ಕಾಣಬಹುದು. Brake Disc Wiping, Emergency ಬ್ರೇಕ್ ಅಸಿಸ್ಟ್, ರೋಲ್ ಓವರ್ ಮಿಟೀಗೇಶನ್ ಜೊತೆಗೆ ABS ಹಾಗೂ EBD ಅನ್ನು ನೀವು ಕಾಣಬಹುದಾಗಿದೆ. Air ಪ್ಯೂರಿಫೈಯರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಮಕ್ಕಳಿಗಾಗಿ ವಿಶೇಷವಾಗಿ ISOFIX ಚೈಲ್ಡ್ ಸೀಟ್ ಮೌಂಟ್‌ ಗಳು ಕೂಡ ಈ ಕಾರಿನಲ್ಲಿ ಕಂಡುಬರುತ್ತದೆ. Auto Dimming IRVM ನಾನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ.

Tata Nexon ಕಾರಿನ ಇಂಜಿನ್ ಹಾಗೂ ಪರ್ಫಾರ್ಮೆನ್ಸ್ ಕುರಿತಂತೆ ತಿಳಿಯೋಣ ಬನ್ನಿ. ಇದರಲ್ಲಿ ಎರಡು ಇಂಜಿನ್ ಆಪ್ಷನ್ಗಳಿದ್ದು ಮೊದಲನೇ ಇಂಜಿನ್ ಕುರಿತಂತೆ ಮಾತನಾಡುವುದಾದರೆ 1.2 ಲೀಟರ್ ಮೂರು ಸಿಲಿಂಡರ್ Turbo ಪೆಟ್ರೋಲ್ ಇಂಜಿನ್ 120Ps ಹಾಗೂ 170 Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಮತ್ತೊಂದು ಇಂಜಿನ್ ಬಗ್ಗೆ ಮಾತನಾಡುವುದಾದರೆ 1.5 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಇಂಜಿನ್ ನಿಮಗೆ 115Ps ಹಾಗೂ 260 Nm ಪರ್ಫಾರ್ಮೆನ್ಸ್ ನೀಡುತ್ತದೆ. ಆರು ಸ್ಪೀಡ್ ಮಾನ್ಯುಯಲ್ Transmission ಹಾಗೂ 6 ಸ್ಪೀಡ್ AMT Gearbox ಗಳು ನಿಮಗೆ ಉಪಲಬ್ಧವಿರುತ್ತದೆ. ಇದನ್ನು ಓದಿ..India: ಚೀನಾ ದೇಶದ ಬಲಿಷ್ಠ ಕಂಪನಿ ಭಾರತದ ತೆಕ್ಕೆಗೆ- ಇನ್ನು ಮುಂದೆ ಆಟ ಏನಿದ್ದರೂ ನಮ್ಮದೇ. ಏನಾಗಿದೆ ಗೊತ್ತೇ?

ಕೊನೆದಾಗಿ ಪ್ರತಿಯೊಬ್ಬರೂ ಕೂಡ ಪ್ರಮುಖವಾಗಿ ಒಂದು ಕಾರನ್ನು ಖರೀದಿಸುವಾಗ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶವಾಗಿರುವ ಕಾರಿನ ಮೈಲೇಜ್ ಕುರಿತಂತೆ ತಿಳಿಯುವುದಾದರೆ Nexon Petrol MT ನಿಮಗೆ 17.33km ಪ್ರತಿ ಲೀಟರ್ ನೀಡುತ್ತದೆ. Petrol AMT ನಿಮಗೆ 17.05 ಕಿಲೋ ಮೀಟರ್ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ. Nexon Diesel MT ನಿಮಗೆ 23.22 ಕಿಲೋಮೀ. ಮೈಲೇಜ್ ಹಾಗೂ Nexon Diesel AMT ನಿಮಗೆ 24.07 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ‌. ಹೀಗಾಗಿ ಮೈಲೇಜ್ ಡಿಸೈನ್ ಹಾಗೂ ಪರ್ಫಾರ್ಮೆನ್ಸ್ ಆಧಾರದಲ್ಲಿ ಕೂಡ ಟಾಟಾ ನೆಕ್ಸನ್ ಸಂಸ್ಥೆ ಗ್ರಾಹಕರಿಗೆ ಸರಿಯೆನಿಸುವಂತಹ ಆಪ್ಷನ್ ಗಳನ್ನು ನೀಡುತ್ತದೆ. ಇದನ್ನು ಓದಿ..Tata Nexon: ಟಾಟಾ ನೆಕ್ಸಾನ್ ಖರೀದಿ ಮಾಡಿದರೆ, ಲಕ್ಷ ಲಕ್ಷ ಉಳಿಸಿ ಶ್ರೀಮಂತರು ಕೂಡ ಆಗಬಹುದು. ಲೆಕ್ಕಾಚಾರ ಸಮೇತ ವಿವರಣೆ.

Comments are closed.