Financial Mistakes: ಎಷ್ಟೇ ದುಡಿದರು ಹಣ ಕೈಯಲ್ಲಿ ಉಳಿಯುತ್ತಿಲ್ಲವೇ? ಭಾರತೀಯರು ಮಾಡುತ್ತಿರುವ ತಪ್ಪುಗಳೇನು ಗೊತ್ತೇ? ಇವುಗಳನ್ನು ತಿದ್ದುಕೊಳ್ಳಿ.
Financial Mistakes: ನಮ್ಮಲ್ಲಿ ಕೆಲವರು ಉತ್ತಮವಾದ ಸಂಪಾದನೆ ಇರಲಿ ಅಥವಾ ಸಂಪಾದನೆ ಇಲ್ಲದೆ ಇರಲಿ ಉಳಿತಾಯದ(Savings) ವಿಚಾರದಲ್ಲಿ ಮಾತ್ರ ಸರಿಯಾದ ಕ್ರಮಗಳನ್ನು ಕೈಗೊಳ್ಳದೇ ಇರುವ ಕಾರಣಕ್ಕಾಗಿ ಹಣದ ವಿಚಾರದಲ್ಲಿ ಸಾಕಷ್ಟು ತಪ್ಪು ಮಾಡಿ ಅವರಲ್ಲಿ ಯಾವ ಹಣ ಕೂಡ ಉಳಿಯುವುದಿಲ್ಲ. ಹಾಗಿದ್ದರೆ ಭಾರತೀಯರಾದ ನಾವು ಈ ವಿಚಾರದಲ್ಲಿ ಮಾಡುತ್ತಿರುವ ತಪ್ಪಾದರೂ ಏನು ಎಂಬುದನ್ನು ತಿಳಿದುಕೊಂಡರೆ ಅದು ನಮಗೆ ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಾಯಕವಾಗಬಹುದು. ಹಾಗಿದ್ರೆ ಬನ್ನಿ ಆ ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ.
ಮೊದಲಿಗೆ ಖರ್ಚಿನ ಮೇಲೆ ನಿಗಾ ಇಡದೇ ಇರುವುದು. ನೂರು ರೂಪಾಯಿ ಖರ್ಚು ಆಗುವ ಸಮಯದಲ್ಲಿ ನೀವು ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ತಿಂಗಳ ಅಂತಕ್ಕೆ ಹೋದಾಗ ನಿಮ್ಮ ಅನಗತ್ಯವಾದ ಖರ್ಚುಗಳ(Unnecessary Expenses) ಸಂಖ್ಯೆ ಬೆಟ್ಟದಷ್ಟಾಗುತ್ತದೆ. ಎರಡನೇದಾಗಿ EMI ಗಳು ನಿಮ್ಮ ಆದಾಯವನ್ನು ಮುಕ್ಕಿ ಹರಿಯಬಹುದು. ಅನಗತ್ಯ ವಸ್ತುಗಳು ಹಾಗೂ OTT ಚಂದಾದಾರಿಕೆ ಸೇರಿದಂತೆ ಇನ್ನಿತರ ವಸ್ತುಗಳ ಪ್ರತಿ ತಿಂಗಳ ಕಂತನ್ನು ಪಾವತಿಸುವ ವೇಳೆಯಲ್ಲಿ ನಿಮ್ಮ ಉಳಿತಾಯದ ಹಣವೆಲ್ಲವು ಖಾಲಿಯಾಗಿರುತ್ತದೆ. ಇದನ್ನು ಓದಿ..News: ಪೊಲೀಸ್ ವರದಿಯಲ್ಲಿ ಮೈಸೂರ್-ಬೆಂಗಳೂರು ಹೈ ವೇ ನ ಕರಾಳ ಮುಖ – ಇದಕ್ಕೆ ಹೊಣೆ ಯಾರು ಗೊತ್ತೇ?
ಮೂರನೇದಾಗಿ ಸಾಲದ ಹಣದಲ್ಲಿ ಪೂರ್ತಿಯಾಗಿ ನೀವು ಜೀವನ ನಡೆಸುವ ಅಭ್ಯಾಸವನ್ನು ಮಾಡಿಕೊಂಡುಬಿಟ್ಟರೆ ನಿಮ್ಮ ಆದಾಯ ಪೂರ್ತಿ ಸಾಲದ(Credit) ಹಣವನ್ನು ತೀರಿಸುವುದಕ್ಕಾಗಿ ಖಾಲಿಯಾಗುತ್ತದೆ. ನಾಲ್ಕನೇದಾಗಿ ಒಂದು ವೇಳೆ ನೀವು ಹೊಸ ಕಾರನ್ನು ಖರೀದಿಸುವ ಆಸೆಯನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ಸ್ವಲ್ಪ ಯೋಚನೆ ಮಾಡಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಈ ಮೂಲಕ ನಿಮ್ಮ ಹಣ ಕೂಡ ಉಳಿತಾಯವಾಗುತ್ತದೆ. ಐದನೇದಾಗಿ ಮನೆ ಕಟ್ಟುವಾಗ ಅಥವಾ ಮನೆಯ ಒಳಗೆ ಇನ್ನೇನಾದರೂ ರಿಪೇರಿ ಅಥವಾ ಶೋಕೇಸ್ ವಸ್ತುವನ್ನು ಅಳವಡಿಸುವಾಗ ಅದಕ್ಕೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ವಿನಿಯೋಗಿಸುವ ಅಗತ್ಯ ಇದೆಯೇ ಇಲ್ಲವೇ ಎನ್ನುವುದನ್ನು ಮೊದಲಿಗೆ ಚಿಂತಿಸಬೇಕು. ಇದಾದ ನಂತರವೇ ಅದಕ್ಕೆ ಹಣವನ್ನು ಖರ್ಚು ಮಾಡಿ.
ಆರನೇದಾಗಿ ಯಾರಿಗೂ ಕೂಡ ಸಾಲವನ್ನು ಕೊಡುವ ಮುನ್ನ ಯೋಚಿಸಿ ಯಾಕೆಂದರೆ ಕೆಲವೊಮ್ಮೆ ಸಾಲ ಬರದೇ ಇರುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. 7ನೇಯದಾಗಿ ಕೆಲವೊಂದು ಪ್ರಯೋಜನ ಇಲ್ಲದಂತಹ ಯೋಜನೆಗಳಲ್ಲಿ ಲಕ್ಷಗಟ್ಟಲೆ ಹಣವನ್ನು ಹೂಡಿಕೆ(Investment) ಮಾಡುವ ಬದಲು ಸರಿಯಾದ ಯೋಜನೆಯಲಿ ಲಾಭ ಬರುವ ಹಾಗೆ ಹೂಡಿಕೆ ಮಾಡುವುದು ಒಳ್ಳೆಯದು. ಎಂಟನೇದಾಗಿ ಸಾಕಷ್ಟು ಜನರು ಇರುವಾಗ ನಾವು ಚೆನ್ನಾಗಿದ್ದರಾಯಿತು ಎಂಬುದಾಗಿ ಅಂದುಕೊಂಡು ನಿವೃತ್ತಿಯ ಸಮಯಕ್ಕಾಗಿ ಹಣವನ್ನು ಹೂಡಿಕೆ ಮಾಡದೆ ಇರುವುದು ಕೂಡ ಸಾಕಷ್ಟು ದೊಡ್ಡ ಮಟ್ಟದ ತಪ್ಪಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಓದಿ..Car: ಪೆಟ್ರೋಲ್, ಡೀಸೆಲ್ ಆಯಿತು, ಇಲೆಕ್ಟ್ರಾನಿಕ್ ಕಾರು ಕೂಡ ಆಯಿತು- ವಿಶ್ವವನ್ನೇ ಬದಲಿಸಲಿರುವ ಕಾರು ಭಾರತದಲ್ಲಿ- ಹೇಗೆ ಓಡುತ್ತದೆ ಗೊತ್ತೆ?
9ನೇದಾಗಿ ಒಂದು ವೇಳೆ ನೀವು ಬಿಸಿನೆಸ್ ಮಾಡುತ್ತಿದ್ದರೆ ಅದರಿಂದ ಬರುವಂತಹ ಲಾಭವನ್ನು ಕೂಡ ಉಳಿತಾಯದ ರೂಪದಲ್ಲಿ ನೀವು ಉಳಿಸದೇ ಇರುವುದು ಮುಂದಿನ ದಿನಗಳಲ್ಲಿ ನಿಮಗೆ ಆರ್ಥಿಕ ವಿಪತ್ತಿಗೆ(Financial Crisis) ಕಾರಣವಾಗಬಹುದು. ಹತ್ತನೇದಾಗಿ ಪ್ರಮುಖ ಆರ್ಥಿಕ ಸಮಸ್ಯೆಯನ್ನು ತಂದೊಡ್ಡುವಂತಹ ಅಂಶ ಏನೆಂದರೆ ಗಳಿಕೆಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವುದು ನಿಮ್ಮ ಕೊನೆಯ ದಿನಗಳಲ್ಲಿ ಇದು ಸಾಕಷ್ಟು ಸಮಸ್ಯೆಯನ್ನು ತಂದೊಡಬಹುದು ಹೀಗಾಗಿ ಈ 10 ಸಮಸ್ಯೆಗಳನ್ನು ನೀವು ಮೊದಲಿಗೆ ಪರಿಹಾರ ಮಾಡುವ ಕುರಿತಂತೆ ಈಗಲಿಂದಲೇ ಯೋಜನೆಯನ್ನು ರೂಪಿಸಿಕೊಳ್ಳಿ ಇಲ್ಲವಾದಲ್ಲಿ ಆರ್ಥಿಕ ಸಮಸ್ಯೆಯನ್ನು ತಂದೊಡ್ಡಿಕೊಳ್ಳಲು ಸಿದ್ದರಾಗಿ. ಇದನ್ನು ಓದಿ..Maruti Suzuki: ಮಾರುತಿ ಕಾರ್ ಮೇಲೆ ಭರ್ಜರಿ ಡಿಸ್ಕೌಂಟ್- ನೋಡಿ ಇಂದೇ ಖರೀದಿ ಮಾಡಿ, ಕಾರ್ ಅನ್ನು ಮನೆಗೆ ತನ್ನಿ.
Comments are closed.