ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ತಂಡಕ್ಕೆ ವರವಾದ ಐಸಿಸಿ ಹೊಸ ನಿಯಮಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಎದುರು ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಆಗಸ್ಟ್ 28ರಂದು ನಡೆದ ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡದ ಎದುರು ಭರ್ಜರಿಯಾಗಿ ಐದು ವಿಕೆಟ್ಗಳ ಗೆಲುವನ್ನು ಸಾಧಿಸಿ ರಿವೆಂಜ್ ಅನ್ನು ತೀರಿಸಿಕೊಂಡಿದೆ. ಇನ್ನು ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಗೆಲುವನ್ನು ಸಾಧಿಸಲು ರೂಪಿಸಿರುವ ಹೊಸ ನಿಯಮಗಳು ಕೂಡ ಕಾರಣ ಎಂದು ಹೇಳಬಹುದು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕ್ರಿಕೆಟ್ ತಂಡ 147 ರನ್ನುಗಳಿಗೆ ಆಲ್ ಔಟ್ ಆಗಿತ್ತು.

ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ದಾಳಿಗೆ ಇದಕ್ಕೂ ಕಡಿಮೆ ಮೊತ್ತಕ್ಕೆ ಪಾಕಿಸ್ತಾನ ಆಗುತ್ತಿತ್ತು ಆದರೆ ಇಲ್ಲಿ ಕೂಡ ಪಾಕಿಸ್ತಾನದ ಬ್ಯಾಟ್ಸ್ಮನ್ ಗಳು ಐಸಿಸಿ ಯ ಹೊಸ ನಿಯಮದ ಲಾಭವನ್ನು ಎತ್ತಿಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡ ಕೂಡ ಮೊದಲಿಗೆ ಗೆಲ್ಲುವ ಭರವಸೆಯನ್ನು ಮೂಡಿಸಿದರು ಕೊನೆ ಕೊನೆಗೆ ಕೊಂಚಮಟ್ಟಿಗೆ ಭಯ ಎನ್ನುವುದು ಎರಡು ತಂಡದ ಅಭಿಮಾನಿಗಳಲ್ಲಿ ಕಾಡಿತ್ತು ಆದರೆ ಹೊಸ ನಿಯಮದ ಕಾರಣದಿಂದಾಗಿ ಇಲ್ಲಿ ಕೂಡ ಭಾರತ ಅನಾಯಾಸವಾಗಿ ಕೊನೆಯಲ್ಲಿ ಗೆದ್ದುಕೊಳ್ಳುತ್ತದೆ. ಹಾಗಿದ್ದರೆ ಅಷ್ಟಕ್ಕೂ ಆ ನಿಯಮ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ind vs pak 5 | ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ತಂಡಕ್ಕೆ ವರವಾದ ಐಸಿಸಿ ಹೊಸ ನಿಯಮಗಳೇನು ಗೊತ್ತೇ??
ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ತಂಡಕ್ಕೆ ವರವಾದ ಐಸಿಸಿ ಹೊಸ ನಿಯಮಗಳೇನು ಗೊತ್ತೇ?? 2

ನಿಯಮಿತ ಸಮಯದಲ್ಲಿ 17 ಓವರ್ ಗಳನ್ನು ಪೂರೈಸಬೇಕು. 20 ಓವರ್ ಗಳ ಪಂದ್ಯದಲ್ಲಿ ಮೊದಲ ಆರು ಓವರ್ ಗಳಲ್ಲಿ ಪವರ್ ಪ್ಲೇ ಇರುತ್ತದೆ. ಈ ಸಂದರ್ಭದಲ್ಲಿ 30 ಯಾರ್ಡ್ ಸರ್ಕಲ್ ಹೊರಗೆ ಅಂದರೆ ಬೌಂಡರಿ ಲೈನ್ ಬಳಿ ನಾಲ್ಕು ಫೀಲ್ಡರ್ ಗಳನ್ನು ಮಾತ್ರ ನಿಲ್ಲಿಸಬಹುದಾಗಿದೆ. ಆದರೆ ಇದೇ ವರ್ಷದ ಜನವರಿ 16 ರಿಂದ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಇರುವ ಓವರ್ಗಳನ್ನು ಪೂರೈಸದಿದ್ದರೆ ಬೌಂಡರಿ ಲೈನ್ ಬಳಿ ಕೇವಲ ನಾಲ್ಕು ಫೀಲ್ಡರ್ ಗಳು ಮಾತ್ರ ನಿಲ್ಲುವಂತೆ ಮಾಡಲಾಗುತ್ತದೆ. ಓವರ್ ಟೈಮ್ ಕಾರಣದಿಂದಾಗಿ ಪಾಕಿಸ್ತಾನ ತಂಡಕ್ಕೆ ಕೊನೆ ಕ್ಷಣದಲ್ಲಿ ಇದೇ ನಿಯಮಕ್ಕೆ ಬಗ್ಗ ಬೇಕಾಗಿತ್ತು ಹಾಗೂ ಭಾರತದ ಇದರ ಅತ್ಯುತ್ತಮ ಲಾಭವನ್ನು ಎತ್ತಿಕೊಂಡು ಅದನ್ನು ಗೆಲುವಿಗೆ ಸಂಪೂರ್ಣವಾಗಿ ಬಳಸಿಕೊಂಡಿದೆ. ಒಟ್ಟಾರಿಯಾಗಿ ಈ ನಿಯಮ ಬೌಲಿಂಗ್ ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು.

Comments are closed.