ಇನ್ನು ಕಾಲೇಜಿನ ಹುಡುಗಿಯಂತೆ ಕಾಣುವ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಲ್ಲಿ ಕಂಡು ಬರುತ್ತಿರುವ ಹಾಡು ಎಂದರೆ ಅದು ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಸಾಂಗ್. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೂಡ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹುಟ್ಟು ಹಾಕಿರುವ ಜಾಕೋಲಿನ್ ಫರ್ನಾಂಡಿಸ್ ರವರು ಮೂಲತಃ ಬಹ್ರೈನ್ ದೇಶದಲ್ಲಿ ಹುಟ್ಟಿ ಶ್ರೀಲಂಕಾ ದೇಶದಲ್ಲಿ ಬೆಳೆದವರು ಎಂಬುದು ಹೆಚ್ಚಿನ ಜನಕ್ಕೆ ಗೊತ್ತಿಲ್ಲದೆ ಇರಬಹುದು.

ಬಾಲಿವುಡ್ ಚಿತ್ರರಂಗದಲ್ಲಿ ರಿತೇಶ್ ದೇಶಮುಖ್ ನಟನೆಯ ಅಲ್ಲಾದಿನ್ ಸಿನಿಮಾದ ಮೂಲಕ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಜಾಕ್ವೆಲಿನ್ ಫರ್ನಾಂಡಿಸ್ ರವರು ಬಾಲಿವುಡ್ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಚಿತ್ರರಂಗದ ಟಾಪ್ ನಟರೊಂದಿಗೂ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಕೂಡ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಹಾಗೂ ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ದಲ್ಲಿ ಒಂದು ಐಟಂ ಡ್ಯಾನ್ಸ್ ಹಾಗೂ ಗಡಂಗ್ ರಕ್ಕಮ್ಮ ಎನ್ನುವ ಚಿಕ್ಕ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಪಾತ್ರ ಚಿಕ್ಕದೇ ಆದರು ಕೂಡ ವ್ಯಾಪಕವಾಗಿ ಜನಮನ್ನಣೆ ಸಿಕ್ಕಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರಿಂದಾಗಿಯೇ ಐಟಂ ಡ್ಯಾನ್ಸ್ ಗೂ ಕೂಡ ಜೀವಾಳ ಸಿಕ್ಕಿದಂತೆ ಆಗಿತ್ತು.

jack | ಇನ್ನು ಕಾಲೇಜಿನ ಹುಡುಗಿಯಂತೆ ಕಾಣುವ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ಇನ್ನು ಕಾಲೇಜಿನ ಹುಡುಗಿಯಂತೆ ಕಾಣುವ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ಇದೇ ಜಾಕ್ವೆಲಿನ್ ಫರ್ನಾಂಡಿಸ್ ರವರು ಆಗಸ್ಟ್ 11ರಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ನಟಿಸುತ್ತಿರುವ ಇವರ ವಯಸ್ಸು ಎಷ್ಟು ಎಂಬುದಾಗಿ ಎಲ್ಲರೂ ಕೂಡ ಗೊಂದಲದಲ್ಲಿದ್ದಾರೆ. ಹಾಗಿದ್ದರೆ ಅವರ ವಯಸ್ಸನ್ನು ತಿಳಿಯೋಣ. ಆಗಸ್ಟ್ 11 ರಂದು ಜಾಕ್ವಲಿನ್ ಫರ್ನಾಂಡಿಸ್ ರವರು ತಮ್ಮ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಂದಿಗೂ ಕೂಡ 25ರ ಹರೆಯದ ಯುವತಿಯಂತೆ ಕಾಣುವ ಇವರು ಇನ್ನಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳಲ್ಲಿ ನಟಿಸಲಿ ಎಂಬುದಾಗಿ ಹಾರೈಸೋಣ.

Comments are closed.