ಕೊನೆಗೂ ಸಿಕ್ಕೇ ಬಿಟ್ಟ ಜಡೇಜಾ ರವರ ಸ್ಥಾನವನ್ನು ತುಂಬುವ ಪರ್ಫೆಕ್ಟ್ ಆಟಗಾರ. ಕ್ರಿಕೆಟ್ ಪಂಡಿತರು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಪರ್ಫೆಕ್ಟ್ ಆಲ್-ರೌಂಡರ್ ಯಾರು ಎಂದು ಕೇಳಿದರೆ ಎಲ್ಲರು ಕೂಡ ಯುವರಾಜ್ ಸಿಂಗ್ ಅವರ ಹೆಸರನ್ನು ಹೇಳುತ್ತಿದ್ದರು. ಅವರ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಸಿಕ್ಕಂತಹ ಪರ್ಸೆಂಟ್ ಆಲ್-ರೌಂಡರ್ ಯಾರು ಎಂದರೆ ಅದು ರವೀಂದ್ರ ಸಿಂಗ್ ಜಡೇಜಾ. ಹಲವಾರು ಸಮಯಗಳಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಗೆಲುವನ್ನು ನೀಡಿರುವಂತಹ ಸ್ಟಾರ್ ಆಟಗಾರ. ಯಾವುದೇ ಜವಾಬ್ದಾರಿಯನ್ನು ಕೂಡ ಪೂರ್ಣ ರೀತಿಯಲ್ಲಿ ನಿಭಾಯಿಸುವಂತಹ ಆಟಗಾರ ಎಂದರೆ ತಪ್ಪಾಗಲಾರದು.

ಅದಕ್ಕಾಗಿ ಅವರನ್ನು ಸರ್ ಜಡೇಜ ಎಂದು ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜಡೇಜಾ ರವರ ಮ್ಯಾಜಿಕ್ ಮಂಕಾದಂತೆ ಕಾಣುತ್ತಿದೆ. ಯಾಕೆಂದರೆ ಇತ್ತೀಚೆಗಷ್ಟೆ ಪ್ರಾರಂಭವಾಗಿರುವ ಐಪಿಎಲ್ ಟೂರ್ನಮೆಂಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಹೊಸ ಜವಾಬ್ದಾರಿಯನ್ನು ವಹಿಸಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಡೇಜಾ ರವರ ನಾಯಕತ್ವದಲ್ಲಿ ಮೊದಲ ಎರಡು ಪಂದ್ಯಗಳನ್ನು ಕೂಡ ಸೋತಿದೆ. ಇಷ್ಟು ಮಾತ್ರವಲ್ಲದೆ ಇವೆರಡು ಪಂದ್ಯಗಳಲ್ಲಿ ಕೂಡ ಜಡೇಜಾ ರವರು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನವನ್ನಾಗಲಿ ಅಥವಾ ಬೌಲಿಂಗ್ ಪ್ರದರ್ಶನ ವನ್ನಾಗಲಿ ತೋರಿಸಿಲ್ಲ ಎನ್ನುವುದು ಇಲ್ಲಿ ಎಲ್ಲರೂ ಗಮನಿಸಬೇಕಾಗಿರುವಂತಹ ಅಂಶ. ಸದ್ಯಕ್ಕೆ ಐಪಿಎಲ್ ನಲ್ಲಿ ಒಬ್ಬ ಭಾರತೀಯ ಆಲ್-ರೌಂಡರ್ ಆಟಗಾರ ಮಿಂಚಿನಂತೆ ಪ್ರದರ್ಶನ ನೀಡುತ್ತಿದ್ದು ಭಾರತೀಯ ಕ್ರಿಕೆಟ್ ತಂಡದಲ್ಲಿ ಜಡೇಜಾ ರವರ ಸ್ಥಾನವನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

jadeja dhoni csk | ಕೊನೆಗೂ ಸಿಕ್ಕೇ ಬಿಟ್ಟ ಜಡೇಜಾ ರವರ ಸ್ಥಾನವನ್ನು ತುಂಬುವ ಪರ್ಫೆಕ್ಟ್ ಆಟಗಾರ. ಕ್ರಿಕೆಟ್ ಪಂಡಿತರು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ಕೊನೆಗೂ ಸಿಕ್ಕೇ ಬಿಟ್ಟ ಜಡೇಜಾ ರವರ ಸ್ಥಾನವನ್ನು ತುಂಬುವ ಪರ್ಫೆಕ್ಟ್ ಆಟಗಾರ. ಕ್ರಿಕೆಟ್ ಪಂಡಿತರು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ? 2

ಹೌದು ನಾವು ಮಾತನಾಡುತ್ತಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡದ ವಾಷಿಂಗ್ಟನ್ ಸುಂದರ್ ಅವರ ಕುರಿತಂತೆ. ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಕೂಡ ಗಮನಾರ್ಹ ಪ್ರದರ್ಶನವನ್ನು ನೀಡಿರುವ ವಾಷಿಂಗ್ಟನ್ ಸುಂದರ್ ಈಗಾಗಲೇ ಐಪಿಎಲ್ ನಲ್ಲಿ ಕೂಡ ಮಿಂಚುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಬರೋಬ್ಬರಿ 40 ರನ್ನುಗಳನ್ನು ಬಾರಿಸಿದರು. ನತನ್ ಕೋಲ್ಟರ್ ನೈಲ್ ರವರ ಒಂದೇ ಓವರ್ ನಲ್ಲಿ ಬರೋಬ್ಬರಿ 24 ರನ್ನುಗಳನ್ನು ಬಾರಿಸಿದರು. ಅವರ ತಂಡ ಸೋತಿರಬಹುದು ಆದರೆ ಸುಂದರ್ ಅವರ ಅದ್ಭುತ ಬ್ಯಾಟಿಂಗ್ ಎಲ್ಲರ ಗಮನಸೆಳೆದಿದೆ. ಇನ್ನು ವಿಕೆಟ್ ಪಡೆಯುವುದರಲ್ಲಿ ಕೂಡ ಸುಂದರ್ ಅವರು ಈಗಾಗಲೆ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಹೀಗಾಗಿ ಜಡೇಜಾ ರವರ ಸ್ಥಾನವನ್ನು ಕಸಿಯುವಂತಹ ಸಾಧ್ಯತೆ ದಟ್ಟವಾಗಿದೆ.

Comments are closed.