ಜ್ಯೋತಿಷ್ಯ ಶಾಸ್ತ್ರ: ತನ್ನ ಸ್ಥಾನವನ್ನು ಬದಲಾಯಿಸಿದ ಶುಕ್ರ ದೇವ, ಹಲವು ರಾಶಿಗಳಿಗೆ ಶುಕ್ರದೆಸೆ ಆರಂಭ. ಶುಕ್ರ ದೇವನ ಸ್ಥಾನ ಬದಲಾವಣೆಯಿಂದ ಯಾರ್ಯಾರಿಗೆ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೊದಲಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಇಂದು ನಾವು ಮಾತನಾಡಲು ಹೊರಟಿರುವುದು ಸಮೃದ್ಧಿಯ ಪ್ರತೀಕವಾಗಿರುವ ಶುಕ್ರ ಗ್ರಹದ ರಾಶಿ ಸ್ಥಾನಪಲ್ಲಟದ ಕುರಿತಂತೆ. ಮೊದಲಿಗೆ ಶುಕ್ರ ಮಾರ್ಚ್ 31ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಸ್ಥಾನಪಲ್ಲಟ ಮಾಡಿದ್ದಾರೆ. ಏಪ್ರಿಲ್ 27 ತನಕ ಇಲ್ಲೇ ಇರಲಿದ್ದು ಮುಂದೆ ಮೀನ ರಾಶಿಗೆ ಶುಕ್ರ ಸ್ಥಾನಪಲ್ಲಟವನ್ನು ಮಾಡಲಿದ್ದಾನೆ. ಈ ನಡುವೆ ಹಲವಾರು ರಾಶಿಚಕ್ರಗಳು ಜನರ ಜೀವನದಲ್ಲಿ ಹಲವಾರು ಪರಿಣಾಮಗಳು ಮೂಡಲಿವೆ. ಯಾವ್ಯಾವ ರಾಶಿಗಳು ಇದರಿಂದ ಒಳಿತು ಹಾಗೂ ಕಡುಬುಗಳನ್ನು ಪಡೆಯುತ್ತವೆ ಎಂಬುದನ್ನು ಕೂಲಂಕುಶವಾಗಿ ನೋಡೋಣ ಬನ್ನಿ.

mesha rashi horo | ಜ್ಯೋತಿಷ್ಯ ಶಾಸ್ತ್ರ: ತನ್ನ ಸ್ಥಾನವನ್ನು ಬದಲಾಯಿಸಿದ ಶುಕ್ರ ದೇವ, ಹಲವು ರಾಶಿಗಳಿಗೆ ಶುಕ್ರದೆಸೆ ಆರಂಭ. ಶುಕ್ರ ದೇವನ ಸ್ಥಾನ ಬದಲಾವಣೆಯಿಂದ ಯಾರ್ಯಾರಿಗೆ ಲಾಭ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರ: ತನ್ನ ಸ್ಥಾನವನ್ನು ಬದಲಾಯಿಸಿದ ಶುಕ್ರ ದೇವ, ಹಲವು ರಾಶಿಗಳಿಗೆ ಶುಕ್ರದೆಸೆ ಆರಂಭ. ಶುಕ್ರ ದೇವನ ಸ್ಥಾನ ಬದಲಾವಣೆಯಿಂದ ಯಾರ್ಯಾರಿಗೆ ಲಾಭ ಗೊತ್ತೇ?? 3

ಮೇಷ ರಾಶಿ; ಹಲವಾರು ಮೂಲಗಳಿಂದ ಆದಾಯ ಹರಿದು ಬರಲಿದೆ. ಅದರಲ್ಲೂ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ಎನ್ನುವುದು ಅತ್ಯಧಿಕವಾಗಿ ಸಿಗಲಿದೆ. ಸಂಸಾರದಲ್ಲಿ ಕೂಡ ಶಾಂತಿ ನೆಲೆಸಲಿದೆ. ಪ್ರೇಮಸಂಬಂಧ ಎನ್ನುವುದು ಸಿಹಿಯಿಂದ ಕೂಡಿರಲಿದೆ.

ವೃಷಭ ರಾಶಿ; ವ್ಯಾಪಾರದಲ್ಲಿ ಹಾಗೂ ಕೆಲಸದಲ್ಲಿ ಎರಡರಲ್ಲೂ ಕೂಡ ನಷ್ಟವನ್ನು ಅನುಭವಿಸಲಿದ್ದೀರಿ. ಹೀಗಾಗಿ ನೀವು ಮಾಡುವ ಕೆಲಸದಲ್ಲಿ ಶ್ರಮ ಎನ್ನುವುದು ದ್ವಿಗುಣವಾಗಿ ಬೇಕಾಗುತ್ತದೆ. ಖರ್ಚು ಕೂಡ ನೀರಿನಂತೆ ಹರಿದು ಬರಲಿದೆ. ಇಷ್ಟೆಲ್ಲಾ ಅನುಭವಿಸಿದರು ಕೂಡ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.

ಮಿಥುನ ರಾಶಿ; ಮಿಥುನ ರಾಶಿಯವರಿಗೆ ಶುಕ್ರನ ಸ್ಥಾನ ಪಲ್ಲಟ ಶುಭವನ್ನು ತರಲಿದೆ. ನೀವು ಮಾಡುವ ಕೆಲಸ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಘನತೆ ಗೌರವ ಕೂಡ ಹೆಚ್ಚಾಗುತ್ತದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆಸ್ತಿಯ ಕೆಲಸಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.

ಕರ್ಕ ರಾಶಿ; ದಿನದ ಗಳಿಕೆಯಲ್ಲಿ ನೀವು ಹೆಚ್ಚಳವನ್ನು ಪಡೆಯಲಿದ್ದೀರಿ. ಪೂರ್ವಿಕರ ಆಸ್ತಿಯಲ್ಲಿ ಪಾಲು ಕೂಡ ದೊರೆಯಲಿದೆ. ಹೂಡಿಕೆಗೆ ಪ್ರಶಸ್ತ ಸಮಯವಾಗಿರುವುದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅದೃಷ್ಟವನ್ನು ಪರೀಕ್ಷಿಸುವುದು ಒಳ್ಳೆಯದು.

ಸಿಂಹ ರಾಶಿ; ವ್ಯಾಪಾರದಲ್ಲಿ ಪರಿಸ್ಥಿತಿ ಅನುಕೂಲವಾಗಿರುತ್ತದೆ. ಲಾಭವೂ ಕೂಡ ಬರುತ್ತದೆ ಹಾಗೂ ನಿಮ್ಮ ವ್ಯಾಪಾರದ ಪಾರ್ಟ್ನರ್ ಜೊತೆಗೆ ಕೂಡ ಸಂಬಂಧ ಚೆನ್ನಾಗಿರುತ್ತದೆ. ಇನ್ನು ಕೆಲಸ ಮಾಡುತ್ತಿರುವವರಿಗೆ ಉದ್ಯೋಗದಲ್ಲಿ ದೂರದ ಪ್ರಯಾಣ ಮಾಡುವ ಯೋಗವಿದೆ. ಸ್ನೇಹಿತ ಹಾಗೂ ಬಂಧು ಬಳಗದವರಿಂದ ಆರ್ಥಿಕ ಲಾಭವಾಗುವಂತಹ ಪರಿಸ್ಥಿತಿ ಸನ್ನಿಹಿತವಾಗಿದೆ. ದಾಂಪತ್ಯ ಜೀವನ ಎನ್ನುವುದು ಸುಖ ಶಾಂತಿಯಿಂದ ಕೂಡಿರುತ್ತದೆ.

kavya rashi horo 1 | ಜ್ಯೋತಿಷ್ಯ ಶಾಸ್ತ್ರ: ತನ್ನ ಸ್ಥಾನವನ್ನು ಬದಲಾಯಿಸಿದ ಶುಕ್ರ ದೇವ, ಹಲವು ರಾಶಿಗಳಿಗೆ ಶುಕ್ರದೆಸೆ ಆರಂಭ. ಶುಕ್ರ ದೇವನ ಸ್ಥಾನ ಬದಲಾವಣೆಯಿಂದ ಯಾರ್ಯಾರಿಗೆ ಲಾಭ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರ: ತನ್ನ ಸ್ಥಾನವನ್ನು ಬದಲಾಯಿಸಿದ ಶುಕ್ರ ದೇವ, ಹಲವು ರಾಶಿಗಳಿಗೆ ಶುಕ್ರದೆಸೆ ಆರಂಭ. ಶುಕ್ರ ದೇವನ ಸ್ಥಾನ ಬದಲಾವಣೆಯಿಂದ ಯಾರ್ಯಾರಿಗೆ ಲಾಭ ಗೊತ್ತೇ?? 4

ಕನ್ಯಾ ರಾಶಿ; ಉದ್ಯೋಗ ಹಾಗೂ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸಲಿ ದ್ದೀರಿ. ಹೊಸ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ ಆದರೂ ಕೂಡ ಕೆಲಸ ಮಾಡುವ ಸ್ಥಳದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಂಭಾವನೆ ದೃಷ್ಟಿಯಲ್ಲಿ ಹೆಚ್ಚಳ ಸಿಗಲಿದೆ.

ತುಲಾ ರಾಶಿ; ಕೆಲಸದಲ್ಲಿ ಪ್ರಮೋಷನ್ ಹಾಗೂ ವ್ಯಾಪಾರದಲ್ಲಿ ಆರ್ಥಿಕ ಲಾಭ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಹೆಚ್ಚಳ ಹಾಗೂ ಕೆಲಸದಲ್ಲಿ ಸಂಬಳದ ಹೆಚ್ಚಳ ಅತಿಶೀಘ್ರದಲ್ಲೇ ನಿಮಗೆ ಸಿಗಲಿದೆ.

ವೃಶ್ಚಿಕ ರಾಶಿ; ಮೊದಲಿಗಿಂತ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಆರ್ಥಿಕ ಲಾಭ ಎನ್ನುವುದು ಹೆಚ್ಚಾಗಲಿದೆ. ಕುಟುಂಬ ಹಾಗೂ ವೈವಾಹಿಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಅತಿಶೀಘ್ರದಲ್ಲೇ ಮನೆ ಅಥವಾ ಕಾರನ್ನು ಖರೀದಿಸುವ ಭಾಗ್ಯ ನಿಮ್ಮದಾಗಲಿದೆ.

ಧನು ರಾಶಿ; ಯಶಸ್ವಿಯಾಗಲು ಕೆಲಸದಲ್ಲಿರುವವರು ಇನ್ನಷ್ಟು ಶ್ರಮವಹಿಸಬೇಕಾಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಕೆಲಸ ಸಿಗಲಿದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಕೆಲಸ ಬದಲಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಕ್ರಮೇಣವಾಗಿ ಲಾಭಾಂಶ ದೊರಕಲಿದ್ದು ಇನ್ನಷ್ಟು ಕಡೆಗಳಲ್ಲಿ ನಿಮ್ಮ ವ್ಯವಹಾರವನ್ನು ವಿಸ್ತರಣೆ ಮಾಡುವ ಉಪಾಯ ಕೂಡ ಫಲಿಸಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಸಹೋದರ ಹಾಗೂ ಸಹೋದರಿಯರೊಂದಿಗಿನ ಸಂಬಂಧ ಚೆನ್ನಾಗಿರಲಿದೆ.

ಕುಂಭ ರಾಶಿ; ಕೆಲಸ ಮಾಡುವ ಜಾಗದಲ್ಲಿ ಅದೃಷ್ಟ ಸಿಗಲಿದ್ದು ಹಿರಿಯ ಅಧಿಕಾರಿಗಳಿಂದ ಕೂಡ ನಿಮಗೆ ಮಾರ್ಗದರ್ಶನ ದೊರೆಯಲಿದೆ. ಸ್ವಲ್ಪ ಕಠಿಣವಾಗಿ ಪರಿಶ್ರಮವನ್ನು ಪಟ್ಟರೆ ಕಂಡಿತವಾಗಿ ದೊಡ್ಡಮಟ್ಟದ ಆರ್ಥಿಕ ಲಾಭವನ್ನು ಅತಿಶೀಘ್ರದಲ್ಲೇ ಪಡೆದುಕೊಳ್ಳಲಿದ್ದೀರಿ. ಶುಕ್ರನ ರಾಶಿ ಪರಿವರ್ತನೆ ನಿಮ್ಮ ರಾಶಿಯವರಿಗೆ ಖಂಡಿತವಾಗಿ ಲಾಭವನ್ನು ತಂದು ಕೊಡಲಿದೆ.

ಮೀನ ರಾಶಿ; ಶುಕ್ರನ ರಾಶಿ ಪರಿವರ್ತನೆ ಮೀನರಾಶಿಯವರಿಗೆ ಖರ್ಚುವೆಚ್ಚಗಳನ್ನು ಹೆಚ್ಚು ಮಾಡಿಸಲಿದೆ. ಇದರಿಂದಾಗಿ ಮಾನಸಿಕವಾಗಿ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಲಿದ್ದೀರಿ. ಖರ್ಚುವೆಚ್ಚಗಳನ್ನು ಆದಷ್ಟು ಕಂಟ್ರೋಲ್ ಮಾಡಿ ಹಾಗೂ ಉದ್ಯೋಗವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಪ್ರಯತ್ನಪಡಿ. ಸ್ವಲ್ಪ ಕಾಲ ನಿಮಗೆ ಕಷ್ಟಕರ ಎನಿಸಬಹುದು ಆದರೆ ಇದರಿಂದ ಮುಂದೆ ನಡೆದರೆ ನಿಮಗೆ ಉತ್ತಮ ದಿನಗಳು ಕಾದಿವೆ. ಇವುಗಳಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.