ಬಿಡುಗಡೆಯಾದ ಬಹುನಿರೀಕ್ಷಿತ ಟಿಆರ್ಪಿ ಲಿಸ್ಟ್, ನಂಬರ್ 1 ಆಗಿದ್ದು ಯಾರು ಗೊತ್ತೇ?? ನಿಮ್ಮ ನೆಚ್ಚಿನ ಧಾರವಾಹಿ ಸ್ಥಾನ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯ ಕ್ಷೇತ್ರದಲ್ಲಿ ಧಾರವಾಹಿಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸುತ್ತಿವೆ. ಹೇಗೆ ಸಿನಿಮಾಗಳ ಗೆಲುವನ್ನು ಅವುಗಳ ಬಾಕ್ಸಾಫೀಸ್ ಕಲೆಕ್ಷನ್ ಆಧಾರದ ಮೇಲೆ ನಾವು ನಿರ್ಧರಿಸುತ್ತೇವೆಯೋ ಅದೇ ರೀತಿ ಧಾರವಾಹಿಗಳ ಗೆಲುವನ್ನು ನಾವು ಅವುಗಳ ರೇಟಿಂಗ್ ಆಧಾರದ ಮೇಲೆ ನಿರ್ಧರಿಸುತ್ತೇವೆ. ಅದರಲ್ಲಿ ಇತ್ತೀಚಿಗೆ ಆಗಿ ವಾಹಿನಿಗಳು ರೇಟಿಂಗ್ ನಲ್ಲಿ ತಮ್ಮ ಸ್ಥಾನವನ್ನು ಅಗ್ರವಾಗಿ ಇಟ್ಟುಕೊಳ್ಳಲು ಹೊಸ ಹೊಸ ಧಾರವಾಹಿಗಳ ಪ್ರಸಾರವನ್ನು ಆರಂಭಿಸಿವೆ. ಈಗ ಪ್ರತಿಯೊಂದು ವಾಹಿನಿಗಳ ಧಾರವಾಹಿಗಳು ಕೂಡ ರೇಟಿಂಗ್ ಗಾಗಿ ಪೈಪೋಟಿಯನ್ನು ಮಾಡುತ್ತಿದೆ.

kannada serials | ಬಿಡುಗಡೆಯಾದ ಬಹುನಿರೀಕ್ಷಿತ ಟಿಆರ್ಪಿ ಲಿಸ್ಟ್, ನಂಬರ್ 1 ಆಗಿದ್ದು ಯಾರು ಗೊತ್ತೇ?? ನಿಮ್ಮ ನೆಚ್ಚಿನ ಧಾರವಾಹಿ ಸ್ಥಾನ ಯಾವುದು ಗೊತ್ತೇ??
ಬಿಡುಗಡೆಯಾದ ಬಹುನಿರೀಕ್ಷಿತ ಟಿಆರ್ಪಿ ಲಿಸ್ಟ್, ನಂಬರ್ 1 ಆಗಿದ್ದು ಯಾರು ಗೊತ್ತೇ?? ನಿಮ್ಮ ನೆಚ್ಚಿನ ಧಾರವಾಹಿ ಸ್ಥಾನ ಯಾವುದು ಗೊತ್ತೇ?? 3

ನಿಮಗೆಲ್ಲ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಆರಂಭವಾಗಿರುವ ರಾಮಾಚಾರಿ ಧಾರವಾಹಿ ಕಳೆದ ಬಾರಿ ಕಲರ್ಸ್ ಕನ್ನಡದ ನಂಬರ್ ಒನ್ ಧಾರವಾಹಿಯಾಗಿ ಹೊರಹೊಮ್ಮಿ ಜೀ ಕನ್ನಡ ವಾಹಿನಿಗೆ ದೊಡ್ಡ ಮಟ್ಟದ ಪೈಪೋಟಿ ನೀಡಿತ್ತು. ಟೋಟಲ್ ರೇಟಿಂಗ್ ನಲ್ಲಿ ಟಾಪ್ ಐದನೇ ಸ್ಥಾನವನ್ನು ಕೂಡ ಪಡೆದುಕೊಂಡಿತ್ತು. ಹೀಗಾಗಿ ಹಲವಾರು ವರ್ಷಗಳಿಂದ ಮೊದಲ 5 ಸ್ಥಾನಗಳನ್ನು ಗೆದ್ದುಕೊಂಡು ಬರುತ್ತಿರುವ ಜೀ ಕನ್ನಡ ವಾಹಿನಿಯ ಧಾರವಾಹಿಗಳಿಗೆ ಪೈಪೋಟಿಯನ್ನು ನೀಡಲು ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರವಾಹಿ ಸಿದ್ದವಾಗಿತ್ತು. ಹೀಗಾಗಿ ಜೀ ಕನ್ನಡ ವಾಹಿನಿ ತನ್ನ ಟಾಪ್ ಧಾರವಾಹಿಗಳಲ್ಲಿ ಹಲವಾರು ಟ್ವಿಸ್ಟ್ ಗಳನ್ನು ಮಾಡುವ ಮೂಲಕ ಹೆಚ್ಚಿನ ಪ್ರೇಕ್ಷಕರು ನೋಡುವಂತೆ ಮಾಡಲು ಪ್ರಯತ್ನವನ್ನು ಕೂಡ ಮಾಡಿತ್ತು.

ಇದಿಷ್ಟು ಧಾರವಾಹಿಗಳ ವಿಚಾರವಾದರೆ ಇನ್ನೂ ರಿಯಾಲಿಟಿ ಶೋಗಳ ಕುರಿತಂತೆ ಕೂಡ ನಾವು ಹೇಳಿದ್ದೇವೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ರೇಟಿಂಗ್ ಬರೆದಿದ್ದ ಕಾರಣಕ್ಕಾಗಿ ಅರ್ಧದಲ್ಲಿ ನಿಲ್ಲಿಸಲಾಯಿತು. ಇನ್ನು ಈ ಕಡೆ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಕಳೆದವಾರ ಏಳನೇ ಸ್ಥಾನದಲ್ಲಿದ್ದ ರಾಮಾಚಾರಿ 6ನೇ ಸ್ಥಾನಕ್ಕೇರಿ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ. ಆಶ್ಚರ್ಯವೆಂಬಂತೆ 9.30 ಕ್ಕೆ ಪ್ರಸಾರ ವಾಗುವಂತಹ ಲಕ್ಷಣ ಧಾರವಾಹಿ 5ನೇ ಸ್ಥಾನದಲ್ಲಿ ಮಿಂಚುತ್ತಿದೆ.

ಇನ್ನು ಈ ವಾರದ ರೇಟಿಂಗ್ ವಿಚಾರಕ್ಕೆ ಬರುವುದಾದರೆ ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿ 11 ರೇಟಿಂಗ್ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಮೊದಲನೇ ಸ್ಥಾನದಲ್ಲಿ ಮಿಂಚುತ್ತಿದೆ. ಮತ್ತೊಂದು ಜೀ ಕನ್ನಡ ವಾಹಿನಿಯ ಧಾರವಾಹಿ ಆಗಿರುವ ಗಟ್ಟಿಮೇಳ ತನ್ನ ಕಾಯಂ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ಇದೆ. ನಾಲ್ಕನೇ ಹಾಗೂ 5ನೇ ಸ್ಥಾನದಲ್ಲಿ ಕ್ರಮವಾಗಿ ಜೊತೆಜೊತೆಯಲ್ಲಿ ಹಾಗೂ ಸತ್ಯ ಧಾರವಾಹಿಗಳು ಕಾಣಿಸಿಕೊಳ್ಳುತ್ತದೆ. ರಾಮಾಚಾರಿ ಹಾಗೂ ಲಕ್ಷಣ ಧಾರವಾಹಿಗಳು ಕ್ರಮವಾಗಿ 6ನೇ ಹಾಗೂ 7ನೇ ಸ್ಥಾನದಲ್ಲಿದೆ. ಗೀತಾ ಗಿಣಿರಾಮ ಹಾಗೂ ಪಾರು ಧಾರವಾಹಿ ಗಳು ಕ್ರಮವಾಗಿ 8 9 ಹಾಗೂ ಹತ್ತನೇ ಸ್ಥಾನವನ್ನು ಅಲಂಕರಿಸಿದೆ.

drama juniors kannada | ಬಿಡುಗಡೆಯಾದ ಬಹುನಿರೀಕ್ಷಿತ ಟಿಆರ್ಪಿ ಲಿಸ್ಟ್, ನಂಬರ್ 1 ಆಗಿದ್ದು ಯಾರು ಗೊತ್ತೇ?? ನಿಮ್ಮ ನೆಚ್ಚಿನ ಧಾರವಾಹಿ ಸ್ಥಾನ ಯಾವುದು ಗೊತ್ತೇ??
ಬಿಡುಗಡೆಯಾದ ಬಹುನಿರೀಕ್ಷಿತ ಟಿಆರ್ಪಿ ಲಿಸ್ಟ್, ನಂಬರ್ 1 ಆಗಿದ್ದು ಯಾರು ಗೊತ್ತೇ?? ನಿಮ್ಮ ನೆಚ್ಚಿನ ಧಾರವಾಹಿ ಸ್ಥಾನ ಯಾವುದು ಗೊತ್ತೇ?? 4

ಕಳೆದ ವಾರವಷ್ಟೇ ಪ್ರಸಾರವನ್ನು ಆರಂಭಿಸಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವು ಕೂಡ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ. ಕೆಲವು ಕಾರ್ಯಕ್ರಮಗಳು ಅಷ್ಟೊಂದು ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ ಹೀಗಾಗಿ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಅಷ್ಟೊಂದು ಓಡುವುದಿಲ್ಲ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಲಕ್ಷ್ಮಿ ಅಮ್ಮ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ರವರ ನಡೆಸಿ ಕೊಡುವಂತಹ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಬರೋಬ್ಬರಿ 9‌.9 ರೇಟಿಂಗ್ ಪಡೆದುಕೊಂಡು ಮೊದಲ ವಾರದಲ್ಲಿ ದಾಖಲೆ ಬರೆದಿದೆ ಎಂದು ಹೇಳಬಹುದಾಗಿದೆ. ಕಾರ್ಯಕ್ರಮವನ್ನು ಮಾಸ್ಟರ್ ಆನಂದರವರು ನಿರೂಪಣೆ ಮಾಡುತ್ತಿದ್ದಾರೆ.

ಮೊದಲವಾರದಲ್ಲಿ ಡ್ರಾಮಾ ಜೂನಿಯರ್ಸ್ ದಾಖಲೆಯ ರೇಟಿಂಗ್ ಪಡೆಯುವುದರ ಮೂಲಕ ಜೀ ಕನ್ನಡ ವಾಹಿನಿ ತಾನು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಮುಂದಿದೆ ಎಂಬುದನ್ನು ಸಾಬೀತುಪಡಿಸಿದೆ. ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮಕ್ಕಳು ಕೂಡ ಸಾಕಷ್ಟು ಪ್ರತಿಭಾನ್ವಿತ ರಾಗಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಮಕ್ಕಳ ಜೊತೆಗೆ ಬೆರೆಯುವಂತಹ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ಹೇಳಬಹುದಾಗಿದೆ. ಈ ಕಾರ್ಯಕ್ರಮದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ನಿಮ್ಮ ನೆಚ್ಚಿನ ಧಾರವಾಹಿ ಯಾವುದು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.