ಯಪ್ಪಾ, ಮತ್ತೊಮ್ಮೆ ದುಬಾರಿಯಾದ ಸಮಂತಾ. ಸಾಮಾಜಿಕ ಜಾಲಾತಾಣಗಳಲ್ಲಿ ಒಂದು ಪೋಸ್ಟ್ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ಹಲವಾರು ಸ್ಟಾರ್ ನಟಿಯರಿದ್ದಾರೆ. ಅವರಲ್ಲಿ ನಟಿ ಸಮಂತಾ ಕೂಡ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ನಡೆದಂತಹ ಕೆಲವೊಂದು ವಿಚಾರಗಳಿಂದ ಅವರು ಹೊರ ಬರುವುದು ಕಷ್ಟವಾಗಿತ್ತು. ಆದರೂ ಕೂಡ ಅವುಗಳನ್ನೆಲ್ಲಾ ಮೆಟ್ಟಿನಿಂತು ಈಗ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿರುವುದು ನಿಜಕ್ಕು ಕೂಡ ಅವರ ನಿಜವಾದ ಸಾಧನೆ ಎಂದು ಹೇಳಬಹುದಾಗಿದೆ.

ಹೌದು ಹಲವಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ರವರನ್ನು ನಾಲ್ಕು ವರ್ಷಗಳ ದಾಂಪತ್ಯ ಜೀವನದ ನಂತರ ವಿವಾಹ ವಿಚ್ಛೇದನವನ್ನು ನೀಡಿ ಬೇರೆಯಾಗಿದ್ದರು ನಟಿ ಸಮಂತಾ. ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ಕಾರಣ ಏನೆಂಬುದು ಇಂದಿಗೂ ಕೂಡ ತಿಳಿದಿಲ್ಲವಾದರೂ ಇವರಿಬ್ಬರ ವಿವಾಹ ವಿಚ್ಛೇದನ ಎನ್ನುವುದು ಅಭಿಮಾನಿಗಳ ಮನಸ್ಸಿನಲ್ಲಿ ಸಾಕಷ್ಟು ದುಃಖವನ್ನುಂಟು ಮಾಡಿದೆ. ಇನ್ನು ವಿವಾಹ ವಿಚ್ಛೇದನ ನಡೆದ ನಂತರ ಹಲವಾರು ಸಮಯಗಳ ಕಾಲ ಒಂಟಿಯಾಗಿದ್ದ ಸಮಂತ ರವರು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಐಟಂ ಡ್ಯಾನ್ಸ್ ಮೂಲಕ ಮತ್ತೆ ಮಾಡಿದ್ದರು.

samantha ruth prabhu 5 | ಯಪ್ಪಾ, ಮತ್ತೊಮ್ಮೆ ದುಬಾರಿಯಾದ ಸಮಂತಾ. ಸಾಮಾಜಿಕ ಜಾಲಾತಾಣಗಳಲ್ಲಿ ಒಂದು ಪೋಸ್ಟ್ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ??
ಯಪ್ಪಾ, ಮತ್ತೊಮ್ಮೆ ದುಬಾರಿಯಾದ ಸಮಂತಾ. ಸಾಮಾಜಿಕ ಜಾಲಾತಾಣಗಳಲ್ಲಿ ಒಂದು ಪೋಸ್ಟ್ ಮಾಡಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ?? 2

ಇದು ಒಂದೇ ಒಂದು ಐಟಂ ಡ್ಯಾನ್ಸ್ ಸಮಂತಾ ರವರ ಸಿನಿಮಾ ಜೀವನವನ್ನೇ ಬದಲಾಯಿಸುತ್ತವೆ ಎಂದರೆ ತಪ್ಪಾಗಲಾರದು. ಈಗಾಗಲೇ ಸಮಂತಾ ರವರಿಗೆ ಹಲವಾರು ಸಿನಿಮಾಗಳು ಆಫರ್ ಬಂದಿದ್ದು ಕೈಯಲ್ಲಿ ಹಲವಾರು ಸಿನಿಮಾಗಳು ಕೂಡ ಈಗಾಗಲೇ ಇವೆ. ಹಲವಾರು ಸಿನಿಮಾಗಳು ಬಿಡುಗಡೆ ಕೂಡ ತಯಾರಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ ಸದ್ಯದ ಮಟ್ಟಿಗೆ ಸಮಂತ ರವರು ಬೇಡಿಕೆಯಲ್ಲಿರುವ ನಟಿ ಅನ್ನುವುದಕ್ಕಿಂತ ಹೆಚ್ಚಾಗಿ ಬೇಡಿಕೆಯಲ್ಲಿರುವ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು.

ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪೋಸ್ಟ್ ಮಾಡುವ ಮುಖಾಂತರ ಸಮಂತ ಅವರಿಗೆ ಹಣ ಸಿಗುತ್ತದೆ. ಹಾಗಿದ್ದರೆ ಸಮಂತ ರವರಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಎಷ್ಟು ಹಣ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ. ಸಮಂತ ರವರು ಮೊದಲು ಪ್ರಮೋಷನಲ್ ಪೋಸ್ಟನ್ನು ಪೋಸ್ಟ್ ಮಾಡುವುದಕ್ಕಾಗಿ 10 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಈಗ ಅವರಿಗೆ ಜನಪ್ರಿಯತೆ ಹಾಗೂ ಫಾಲೋವರ್ಸ್ ಗಳು ಹೆಚ್ಚಾಗಿರುವ ಕಾರಣದಿಂದಾಗಿ ಪ್ರತಿಯೊಂದು ಪ್ರಮೋಷನಲ್ ಪೋಸ್ಟ್ ಅನ್ನು ಪೋಸ್ಟ್ ಮಾಡುವುದಕ್ಕಾಗಿ ಬರೋಬ್ಬರಿ 20 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ

Comments are closed.